ಕುಶಾಲನಗರ, ನ ೨೪: ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿAಗ್-ಇನ್-ಚೀಫ್ ಆಗಿರುವ ಏರ್ ಮಾರ್ಷಲ್ ಎಸ್ ಶ್ರೀನಿವಾಸ್ ಅವರು ಕೂಡಿಗೆಯ ಸೈನಿಕ ಶಾಲೆಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಕೂಡಿಗೆಯಲ್ಲಿನ ಸೈನಿಕ ಶಾಲೆ ಗಮನಾರ್ಹ ಪ್ರಗತಿ ಸಾಧಿಸಿರುವುದು ಶ್ಲಾಘನೀಯ ಎಂದರು. ೨೦೨೬-೨೭ನೇ ಶೈಕ್ಷಣಿಕ ವರ್ಷದಲ್ಲಿ ೨೪ ಕೆಡೆಟ್‌ಗಳು ಯುಪಿಎಸ್‌ಸಿ ಎನ್‌ಡಿಎ/ಐಎನ್‌ಎ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಐತಿಹಾಸಿಕ ಸಾಧನೆ. ಇದಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವ್ಯವಸ್ಥಿತ ತರಬೇತಿ ಹಾಗೂ ಮಾರ್ಗದರ್ಶನವನ್ನು ಅವರು ಪ್ರಶಂಶಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಶಾಲೆಯ ಸಾಧನೆಗಳನ್ನೂ ಅವರು ಶ್ಲಾಘಿಸಿದರು.

ಶಾಲೆಯಲ್ಲಿನ ವೇದವ್ಯಾಸ ಬ್ಲಾಕ್ ಅನ್ನು ಆಧುನಿಕ ಕಲಿಕಾ ಕೇಂದ್ರವಾಗಿ ಪರಿವರ್ತಿಸಿರುವುದು, ಎನ್‌ಡಿಎ ತರಗತಿ ಕೊಠಡಿ ಮತ್ತು ವಿಸ್ಮಯರೋಬೋಟಿಕ್ಸ್ ಪ್ರಯೋಗಾಲಯದ ಸ್ಥಾಪನೆ ಹಾಗೂ ಮಲ್ಟಿ ಜಿಮ್ ನವೀಕರಣ ಕಾರ್ಯಗಳನ್ನು ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ನವೀಕರಿಸಲಾದ ಕುದುರೆ ಲಾಯವನ್ನು ಉದ್ಘಾಟಿಸಿದರು. ಕೆಡೆಟ್‌ಗಳ ಸಾಂಸ್ಕೃತಿಕ ಪ್ರದರ್ಶನಗಳನ್ನು ಶ್ಲಾಘಿಸಿದ ಅವರು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವAತೆ ಮತ್ತು ಸಂಸ್ಥೆಯಲ್ಲಿ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಸಂಸ್ಥೆಯ ಪ್ರಗತಿಗೆ ಸಾಮೂಹಿಕ ಕೊಡುಗೆ ನೀಡಿದ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರಾಂಶುಪಾಲರು, ಅಧಿಕಾರಿಗಳು, ಬೋಧಕ ವೃಂದ, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಳನ್ನು ಅಭಿನಂದಿಸಿದ ಅವರು, ಸೈನಿಕ ಶಾಲೆ ಸೇನಾ ಆಧಾರಿತ ಶಿಕ್ಷಣದಲ್ಲಿ ಇನ್ನಷ್ಟು ಉನ್ನತ ಶಿಖರಗಳನ್ನು ಏರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್‌ನ ಏರ್ ಫೋರ್ಸ್ ಫ್ಯಾಮಿಲೀಸ್ ವೆಲ್ಫೇರ್ ಅಸೋಸಿಯೇಷನ್ (ಪ್ರಾದೇಶಿಕ) ಅಧ್ಯಕ್ಷರಾದ ಸುನೀತಾ ಶ್ರೀನಿವಾಸ್ ಅವರು ಕೂಡ ಹಾಜರಿದ್ದರು.

ಮೊದಲಿಗೆ ಶಾಲೆಯಲ್ಲಿನ ಅಶ್ವದಳವು ಮುಖ್ಯ ಅತಿಥಿಗಳನ್ನು ಸ್ವಾಗತಿಸಿತು. ಶಾಲೆಯಲ್ಲಿನ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛ ಸಲ್ಲಿಸುವುದರ ಮೂಲಕ ಮುಖ್ಯ ಅತಿಥಿಗಳು ಗೌರವ ವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕರ್ಷಕ ಸ್ವಾಗತ ನೃತ್ಯ, ಮಹಾಭಾರತದ ಪ್ರಸಂಗವನ್ನು ಬಿಂಬಿಸುವ ಮನಮೋಹಕ ಯಕ್ಷಗಾನ ಪ್ರದರ್ಶನ ಹಾಗೂ ಉತ್ಸಾಹಭರಿತ ಡೊಳ್ಳು ಕುಣಿತ ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಿಬ್ಬಂದಿ ವರ್ಗ, ಎನ್‌ಸಿಸಿ ಪಿಐ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.