ಮಡಿಕೇರಿ, ನ. ೨೪: ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಂಗಳವಾರ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ದಟ್ಟೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯದ ಮುಂಭಾಗದ ಕಲ್ಯಾಣಿಯಲ್ಲಿ ತೆಪ್ಪೋತ್ಸವದೊಂದಿಗೆ ವಿವಿಧ ಆಚರಣೆಗಳು ನಡೆದವು.ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಸದಸ್ಯರುಗಳಾದ ವಿನೋದ್ ಕುಶಾಲಪ್ಪ, ಸಂತೋಷ್ ಭಟ್, ಜಿ.ರಾಜೇಂದ್ರ, ವಿಶಾಲ್ ನಂದಕುಮಾರ್, ಕಾರ್ಯನಿರ್ವಾಹಣಾಧಿಕಾರಿ ದೇವರಾಜ್, ಸೇವೆಗೆ ಕೈ ಜೋಡಿಸಿದ ರಮೇಶ್ ಹೊಳ್ಳ ಮೊದಲಾದವರಿದ್ದರು.