ಮಡಿಕೇರಿ, ನ. ೨೩: ಕರ್ನಾಟಕ ವಸತಿ ಮಂಡಳಿಯ ವತಿಯಿಂದ ಮಡಿಕೇರಿ ಸಮೀಪದ ಕೆ.ನಿಡುಗಣೆ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ವಸತಿ ಯೋಜನೆ ವಿರೋಧಿಸಿ ವಸತಿ ಯೋಜನೆ ಜಾರಿಯಾಗುವ ಸ್ಥಳದಲ್ಲಿ ಸೇವ್ ಕೊಡಗು ಮತ್ತು ಕಾವೇರಿ ಅಭಿಯಾನ ಸಂಘಟನೆ ಪ್ರತಿಭಟನೆ ನಡೆಯಿತು.

ಸಂಘಟನೆ ಸಂಯೋಜಕ ನಿ.ಕ. ಸಿ.ಪಿ. ಮುತ್ತಣ್ಣ ಮಾತನಾಡಿ, ಕೆ.ನಿಡುಗಣೆ ಗ್ರಾಮದ ಉದ್ದೇಶಿತ ವಸತಿ ಯೋಜನೆಯಲ್ಲಿ ೧,೨೧೨ ಮನೆಗಳು ನಿರ್ಮಾಣವಾಗಲಿದೆ. ಮಡಿಕೇರಿ ನಗರಕ್ಕೆ ಹೊಂದಿಕೊAಡಿರುವ ಈ ಪ್ರದೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮನೆಗಳು ನಿರ್ಮಾಣವಾಗುವುದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ವಸತಿ ಮಂಡಳಿಯ ಆಯುಕ್ತರಿಗೆ ಪತ್ರ ಬರೆದಿದ್ದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ವಸತಿ ನಿರ್ಮಾಣವಾದರೆ ಈಗಾಗಲೇ ಇರುವ ನೀರಿನ ಅಭಾವ, ವಾಹನ ದಟ್ಟಣೆ ಹಾಗೂ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳಲಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪದ್ಮಿನಿ, ಫ್ರಾಂಕ್ಲಿನ್, ಅಭಿಷೇಕ್, ಐನಂಡ ಸೋಮಣ್ಣ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.