ಸೋಮವಾರಪೇಟೆ, ನ. ೨೩: ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ೧೦೮ನೇ ಹುಟ್ಟುಹಬ್ಬದ ಸ್ಮರಣೆ ಕಾರ್ಯಕ್ರಮ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ನಡೆಯಿತು.

ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇಂದಿರಾಗಾAಧಿ ಅವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿದರು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಇಂದಿರಾ ಗಾಂಧಿ ಅವರ ೧೨ ಅಂಶಗಳ ಕಾರ್ಯಕ್ರಮದಿಂದ ಭಾರತ ಇಂದು ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಕಾರಣವಾಗಿದೆ. ಬ್ಯಾಂಕ್‌ಗಳ ಸೇವೆಯನ್ನು ತಳಮಟ್ಟಕ್ಕೆ ವಿಸ್ತರಿಸಿದ ಮಾಜೀ ಪ್ರಧಾನಿಗಳ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಸಿದ್ದರಾಜು, ಅಜಯ್, ಡಿ. ಮಂಜು, ರವಿ, ಹೆಚ್.ಕೆ. ನಾಗರಾಜು, ಜೀವನ್, ಮಂಜುನಾಥ್, ದಿವಾಕರ್, ಹೆಚ್. ರಾಜು, ಮಹೇಶ್, ದೇವಕಿ, ಮೋಹನ್ ಸೇರಿದಂತೆ ಇತರರು ಇದ್ದರು.