ಗೋಣಿಕೊಪ್ಪ, ನ. ೨೩: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಬಾಲವಾಟಿಕಾ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ನಡೆಸಲಾಯಿತು.

ಸಾಗರದ ಜಗತ್ತು ಮತ್ತು ಬಾಹ್ಯಾಕಾಶ ಆಸಕ್ತಿದಾಯಕ ವಿಷಯಗಳಲ್ಲಿ ಮಕ್ಕಳು ಸಮುದ್ರ ಜೀವಿಗಳು, ಸಮುದ್ರದ ಪ್ರಪಂಚ, ಗ್ರಹಗಳು, ನಕ್ಷತ್ರಗಳು ಹಾಗೂ ಬಾಹ್ಯಾಕಾಶಕ್ಕೆ ಸಂಬAಧಿಸಿದ ವಿವಿಧ ವೇಷಭೂಷಣಗಳನ್ನು ಧರಿಸಿ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಸುಂದರ ಪ್ರಸ್ತುತಿ ಗಮನ ಸೆಳೆಯಿತು.

ಶಾಲಾ ಸಂಸ್ಥಾಪಕಿ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಟ್ರಸ್ಟಿ ರಕ್ಷಿತ್ ಅಯ್ಯಪ್ಪ ಹಾಗೂ ಪ್ರಾಂಶುಪಾಲ ಪುಷ್ಪಾ ಸುಬ್ಬಯ್ಯ ಸ್ಪರ್ಧೆಯ ಮಹತ್ವ ತಿಳಿಸಿದರು. ಕಾರ್ಯಕ್ರಮದ ತೀರ್ಪುಗಾರರಾಗಿ ನೀಲಮ್ಮ ಸೋಮಣ್ಣ, ರೇಖಾ ನಾಣಯ್ಯ, ವೀಣಾ ಶರಣ್ ಕಾರ್ಯನಿರ್ವಹಿಸಿದರು.