ಸೋಮವಾರಪೇಟೆ, ನ. ೨೩: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಸೋಮವಾರಪೇಟೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಹಾಗೂ ಸ್ಥಳೀಯ ಶಾಸಕರ ಕಾರ್ಯವೈಖರಿ ಬಗ್ಗೆ ಟೀಕಿಸಿದರು.
ಬೆಲೆ ಏರಿಕೆ, ಸಿ ಮತ್ತು ಡಿ ಜಾಗ ಸಮಸ್ಯೆಗೆ ಸಂಬAಧಿಸಿದAತೆ ಪರಿಹಾರ ಕಂಡುಕೊಳ್ಳಲು ಸರ್ಕಾರ ನಿರ್ಲಕ್ಷö್ಯ ತೋರುತ್ತಿದೆ ಎಂದು ಆರೋಪಿಸಿ ಶಾಂತಳ್ಳಿಯಿAದ ಸೋಮವಾರಪೇಟೆ ಪಟ್ಟಣದವರೆಗೆ ಸುಮಾರು ೯ ಕಿ.ಮೀ. ಕಾಲ್ನಡಿಗೆ ಜಾಥಾ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಥಳೀಯ ಶಾಸಕ ಡಾ. ಮಂತರ್ ಗೌಡ ಅವರುಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಜಾಥಾಕ್ಕೆ ಚಾಲನೆ ನೀಡಿದರು. ಶಾಂತಳ್ಳಿಯಿAದ ಹೊರಟ ಪಾದಯಾತ್ರೆ, ಬಸವನಕಟ್ಟೆ, ಜೇಡಿಗುಂಡಿ, ಯಡೂರು, ಕೂಡುರಸ್ತೆ ಜಂಕ್ಷನ್, ಆಲೇಕಟ್ಟೆ ರಸ್ತೆ ಮೂಲಕ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ಜೇಸೀ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಿತು. ಜಾಥಾದಲ್ಲಿ ಪ್ರಮುಖವಾಗಿ ಸಂಸದ ಯದುವೀರ್ ಒಡೆಯರ್ ಭಾಗಿಯಾಗಿ ೯ ಕಿ.ಮೀ. ಕಾಲ್ನಡಿಗೆಯ ಮೂಲಕ ಆಗಮಿಸಿ, ಜೇಸೀ ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
೨೦೨೩ ರಲ್ಲಿ ಎಲ್ಲವೂ ಉಚಿತ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ನ ದುರಾಡಳಿತ ಜನಸಾಮಾನ್ಯರಿಗೆ ಇದೀಗ ಅರಿವಾಗುತ್ತಿದೆ. ಪುರುಷ ಪ್ರಯಾಣಿಕರಿಂದ ಅಧಿಕ ಟಿಕೇಟ್ ದರ ಪಡೆದು, ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದ್ದಾರೆ. ಗೃಹಲಕ್ಷಿö್ಮÃ ಯೋಜನೆಯ ಹಣವೂ ಸರಿಯಾಗಿ ನೀಡಲಾಗುತ್ತಿಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಗೆ ರಾಜ್ಯ ಸರ್ಕಾರದವರು ಭಾವಚಿತ್ರ ಅಂಟಿಸಿ ನಮ್ಮದೇ ಅನ್ನಭಾಗ್ಯ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಹಾಲು, ತುಪ್ಪ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವ ಪರಿಸ್ಥಿತಿ ಇಲ್ಲವಾಗಿದೆ. ಜನರಿಗೆ ಸ್ವಾವಲಂಭೀ ಬದುಕು, ಆರ್ಥಿಕ ಸ್ಥಿತಿ ಚೇತರಿಕೆ ಮಾಡುವಲ್ಲಿ ಕಾಂಗ್ರೆಸ್ ಎಡವಿದೆ. ಈ ಬಗ್ಗೆ ಕಾಂಗ್ರೆಸ್ನಲ್ಲೇ ಟೀಕೆಗಳು ಕೇಳಿಬರುತ್ತಿವೆ ಎಂದರು.
ರಾಜ್ಯ ಕಾಂಗ್ರೆಸ್ನವರು ಎಲ್ಲಾ ವಿಷಯಗಳಿಗೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ೧೬ನೇ ಹಣಕಾಸು ಯೋಜನೆಯಡಿ ಕೇಂದ್ರದಿAದ ೭ ಸಾವಿರ ಕೋಟಿ ಅನುದಾನ ನೀಡಿದ್ದೇವೆ. ಮೈಸೂರಿನಿಂದ ಕುಶಾಲನಗರವರೆಗೆ ಹೆದ್ದಾರಿ ಕಾಮಗಾರಿ ಆಗುತ್ತಿದೆ. ಮುಂದಿನ ವರ್ಷದ ಮಧ್ಯದೊಳಗೆ ಕೆಲಸ ಪೂರ್ಣಗೊಳಿಸುತ್ತೇವೆ ಕೇಂದ್ರ ರೂಪಿಸಿದ ಯೋಜನೆಗಳನ್ನು ಇಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಜೆಜೆಎಂ ಯೋಜನೆಯಡಿ ರಾಜ್ಯದ ಪಾಲು ಅನುದಾನ ನೀಡುತ್ತಿಲ್ಲ ಎಂದ ಅವರು, ಸಿ.ಆರ್.ಎಫ್. ಯೋಜನೆಯ ಮೂಲಕ ಜಿಲ್ಲೆಗೆ ೨೦ ಕೋಟಿ ಅನುದಾನ ಕೇಂದ್ರ ನೀಡಿದ್ದು, ಸ್ಥಳೀಯ ಶಾಸಕರು ಇದೂ ಸಹ ನಮ್ಮದೇ ಅನುದಾನ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗದಲ್ಲೂ ಟ್ಯಾಕ್ಸ್ ಏರಿಕೆ ಮಾಡಿದೆ. ಜನ ಸಾಮಾನ್ಯರಿಂದ ಲೂಟಿ ಹೊಡೆಯುವ ಸರ್ಕಾರವಾಗಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯುವವರೆಗೂ ಬಿಜೆಪಿ ಕಾರ್ಯಕರ್ತರು ವಿರಮಿಸಬಾರದು ಎಂದು ಕರೆ ನೀಡಿದರು.
ಸ್ಥಳೀಯ ಶಾಸಕರು ರೈತರ ಸಮಸ್ಯೆ ಬಗೆಹರಿಸುವ ಬದಲು ತಾನೂ ಸಹ ನಿಮ್ಮೊಂದಿಗೆ ಹೋರಾಟಕ್ಕೆ ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಜನತೆಯ ಸಮಸ್ಯೆಗಳನ್ನು ವಿಧಾನಸೌಧದಲ್ಲಿ ಮಂಡಿಸಿ, ಪರಿಹಾರಕ್ಕೆ ಆಗ್ರಹಿಸುವ ಅವಕಾಶ ನೀಡಿದ್ದರೂ, ವಿಧಾನಸೌಧದಲ್ಲಿ ಹೋರಾಟ ನಡೆಸುತ್ತಿಲ್ಲ. ಸ್ಥಳೀಯ ರೈತರ ಹೋರಾಟಕ್ಕೆ ಬಂದು, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಹೋರಾಟಗಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಗಾಡ್ಗೀಳ್ ವರದಿ ಸಂದರ್ಭ ತಾನು ಹಾಗೂ ಬೋಪಯ್ಯ ಅವರು, ಸದನದ ಬಾವಿಗೆ ಇಳಿದು ನಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡಿದ್ದೆವು. ಕಸ್ತೂರಿ ರಂಗನ್ ವರದಿಯ ವಿರುದ್ಧದ ಹೋರಾಟದಲ್ಲಿ ರಾಜೀನಾಮೆಗೂ ಸಿದ್ದ ಎಂದು ಘೋಷಿಸಿದ್ದೆವು. ನಮ್ಮ ಅವಧಿಯಲ್ಲಿ ಒಬ್ಬ ರೈತನಿಗೂ ಅರಣ್ಯ ಇಲಾಖೆಯಿಂದ ನೋಟೀಸ್ ನೀಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ ರೈತರ ಮೇಲೆ ನಿರಂತರ ಕಿರುಕುಳ ನಡೆಯುತ್ತಿದೆ. ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ ಎಂದರು.
ಬಿಜೆಪಿ ಅವಧಿಯಲ್ಲಿ ಕೊಡಗಿಗೆ ಮೆಡಿಕಲ್ ಕಾಲೇಜು, ಇಂಜಿನಿಯರಿAಗ್ ಕಾಲೇಜು, ಸೈನಿಕ ಶಾಲೆ, ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಕೊಡಗು ಯೂನಿವರ್ಸಿಟಿಯನ್ನು ಮುಚ್ಚಲು ನೋಡುತ್ತಿದೆ ಎಂದು ದೂರಿದ ರಂಜನ್, ಮಡಿಕೇರಿ ಕ್ಷೇತ್ರದಾದ್ಯಂತ ಬಡ ಕೂಲಿ ಕಾರ್ಮಿಕರಿಗೆ ೬ ಸಾವಿರ ಪಟ್ಟೆ ನೀಡಿದ್ದೇವೆ. ಸಿ ಮತ್ತು ಡಿ ಭೂಮಿಯಲ್ಲೂ ೩ ಸಾವಿರ ಹಕ್ಕುಪತ್ರ ನೀಡಿದ್ದೇವೆ. ಈಗಿನ ಶಾಸಕರು ಬಡವರಿಗೆ ಎಷ್ಟು ಹಕ್ಕುಪತ್ರ ನೀಡಿದ್ದಾರೆ? ಎಂದು ಪ್ರಶ್ನಿಸಿದರು.
ಸ್ಥಳೀಯ ಶಾಸಕರು ರೈತರ ಹೋರಾಟಗಳನ್ನು ದಾರಿ ತಪ್ಪಿಸುವ, ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ. ರೈತ ಹೋರಾಟಗಾರ ಚಕ್ರವರ್ತಿ ಸುರೇಶ್ ಅವರ ಮನೆಗೆ ನುಗ್ಗಿ ಅರಣ್ಯಾಧಿಕಾರಿಗಳು ಬೆದರಿಕೆ ಹಾಕಿದ ಪ್ರಕರಣದಲ್ಲೂ ಸ್ಥಳೀಯ ಶಾಸಕರ ಕುಮ್ಮಕ್ಕಿದೆ ಎಂದ ಅವರು, ನಮ್ಮ ಸರ್ಕಾರ ಬಂದ ೨೪ ಗಂಟೆಯಲ್ಲಿ ಸಿ ಮತ್ತು ಡಿ ಜಾಗಕ್ಕೆ ಹಕ್ಕುಪತ್ರ ನೀಡುತ್ತೇವೆ ಎಂದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಬಹುವಾಗಿ ಕಾಡುತ್ತಿದೆ. ತನ್ನ ಅವಧಿಯಲ್ಲಿ ೧೩ ಮಂದಿ ವೈದ್ಯರಿದ್ದರು. ಇದೀಗ ಬೆರಳೆಣಿಕೆಯಷ್ಟಿದ್ದಾರೆ. ಸ್ವತಃ ವೈದ್ಯರಾಗಿರುವ ಶಾಸಕರು, ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸುವಲ್ಲೂ ವಿಫಲರಾಗಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಳೆದ ಮೂರು ವರ್ಷದ ಆಡಳಿತವನ್ನು ಜನತೆ ಕಣ್ಣಾರೆ ಕಂಡಿದ್ದಾರೆ. ೨ ಸಾವಿರ ಹಣ ಮಹಿಳೆಯರಿಗೆ ಸರಿಯಾಗಿ ಬರುತ್ತಿಲ್ಲ. ಉಚಿತ ವಿದ್ಯುತ್ ಎಂದು ಬಿಲ್ಲುಗಳ ಶುಲ್ಕ ಏರಿಕೆ ಮಾಡಿದ್ದಾರೆ. ತೆರಿಗೆ ದುಪ್ಪಟ್ಟು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದರೆ ಮೊಕದ್ದಮೆ ದಾಖಲಿಸುವ ಮೂಲಕ ಹೆದರಿಸುವ ಕೆಲಸ ಆಗುತ್ತಿದೆ. ಬಿಟ್ಟಿ ಭಾಗ್ಯಗಳ ಸಾಲಿಗೆ ಎಫ್ಐಆರ್ ಭಾಗ್ಯವನ್ನೂ ಸೇರಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಇದ್ದ ಸಂದರ್ಭ ಮಾಡಿದ ರಸ್ತೆಗಳ ಗುಂಡಿಯನ್ನಾದರೂ ಮುಚ್ಚಿದ್ದರೆ ಜನತೆ ನೆಮ್ಮದಿಯಾಗಿ ಓಡಾಡುತ್ತಿದ್ದರು ಎಂದರು.
ಬ್ರಿಟೀಷರ ಕಾಲದಲ್ಲಿ ಆದ ನೋಟಿಫಿಕೇಷನ್ಗಳನ್ನು ಇದೀಗ ಜಾರಿಗೆ ತರುವುದು ಸರಿಯಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ರೈತರ ಜಮೀನನ್ನು ಅರಣ್ಯ ಮಾಡುವ ಯತ್ನ ಮುಂದುವರೆದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದರು.
ಕೊಡಗಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ಅನುದಾನ ಇಲ್ಲದೇ ಅಭಿವೃದ್ಧಿಯಿಂದ ವಂಚಿತವಾಗಿದೆ. ಈಗಿನ ಸರ್ಕಾರ ಬಡವರಿಗೆ ಒಂದೇ ಒಂದು ಮನೆಯನ್ನೂ ನೀಡಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆಯನ್ನು ೮ ರಿಂದ ೧೬ ರೂಪಾಯಿ ಏರಿಸಿದೆ. ಇದು ಹೈನುಗಾರಿಕೆ ಮಾಡುವ ರೈತರಿಗೆ ಅಲ್ಪಮಟ್ಟಿಗೆ ಸಹಕಾರಿಯಾಗಿದ್ದರೂ ಬೆಲೆ ಏರಿಕೆಯ ನೇರ ಪರಿಣಾಮ ಸಾರ್ವಜನಿಕರ ಮೇಲೆ ಬಿದ್ದಿದೆ. ಸರ್ಕಾರ ಹೈನುಗಾರಿಕೆ ಉತ್ತೇಜಿಸಲು ಸರ್ಕಾರಿ ಅನುದಾನದಡಿ ಸಹಾಯ ಧನ ಏರಿಕೆ ಮಾಡದೇ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದರು.
ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ರಾಜ್ಯದಾದ್ಯಂತ ಕಾಂಗ್ರೆಸ್ನ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಯುತ್ತಿದೆ. ಸಿ ಮತ್ತು ಡಿ ಜಾಗದ ಸಮಸ್ಯೆ ನಿಂತ ನೀರಾಗಿದೆ. ಸರ್ಕಾರ ರೈತರ ಪರವಾಗಿ ನಿರ್ಣಯ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಬಸ್ ದರ ಶೇ ೪೦ ಅಧಿಕವಾಗಿದೆ. ಹಾಲಿನ ದರ ೪ ಬಾರಿ ಏರಿಕೆ ಮಾಡಲಾಗಿದೆ. ಕರೆಂಟ್ ಬಿಲ್ ಶೇ ಮೂರು ಪಟ್ಟು ಹೆಚ್ಚಿಸಲಾಗಿದೆ. ಕೊಡಗಿನಲ್ಲಿ ಪ್ರಸ್ತುತ ಗುಂಡಿಯಲ್ಲಿ ರಸ್ತೆ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಅನುದಾನದ ಶ್ವೇತಪತ್ರ ಹೊರಡಿಸಿದ್ದೆವು. ಇದೀಗ ಕಾಂಗ್ರೆಸ್ ಶ್ವೇತ ಪತ್ರ ಹೊರಡಿಸಿ ಜನರಿಗೆ ಲೆಕ್ಕ ಕೊಡಲಿ ಎಂದರು.
ಮAಡಲ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮನೆ ಮುಂದೆ ಮಾತ್ರ ರಸ್ತೆ ಆಗುತ್ತಿದೆ. ಇದರ ವಿರುದ್ದ ಬೃಹತ್ ಹೊರಾಟ ಸಂಘಟಿಸುತ್ತೇವೆ. ೨೫ ವರ್ಷದ ಅಭಿವೃದ್ಧಿಯನ್ನು ಮೂರೂವರೆ ವರ್ಷದಲ್ಲಿ ಕಾಂಗ್ರೆಸ್ ಹಾಳು ಮಾಡಿದೆ. ಬಿಜೆಪಿ ಸದಾ ರೈತ, ಬಡವರ ಪರ ಇರಲಿದೆ ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ಮಂಡಲ ಅಧ್ಯಕ್ಷ ಗೌತಮ್ ಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಮುಖರಾದ ಹರಪಳ್ಳಿ ರವೀಂದ್ರ, ಮಡಿಕೇರಿ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮುಖಂಡರಾದ ಬಿ.ಜೆ. ದೀಪಕ್, ವಿ.ಕೆ. ಲೋಕೇಶ್, ಹೆಚ್.ಕೆ. ಮಾದಪ್ಪ, ಎನ್.ಆರ್. ಅಜೀಶ್ಕುಮಾರ್, ಅಭಿಮನ್ಯುಕುಮಾರ್, ಮನುಕುಮಾರ್ ರೈ, ಮೋಹಿತ್ ತಿಮ್ಮಯ್ಯ, ಮಚ್ಚಂಡ ಪ್ರಕಾಶ್, ಅನಂತ್ಕುಮಾರ್, ದರ್ಶನ್ ಜೋಯಪ್ಪ, ಎಸ್.ಆರ್. ಸೋಮೇಶ್, ಚಂದ್ರಶೇಖರ್ ಹೇರೂರು, ಎಂ.ಡಿ. ಕೃಷ್ಣಪ್ಪ, ಶರತ್ ಚಂದ್ರ, ಶ್ರೀನಿಧಿ ಲಿಂಗಪ್ಪ, ಬಿ.ಎ. ಧರ್ಮಪ್ಪ, ಮೋಕ್ಷಿಕ್ರಾಜ್, ಮಲ್ಲಾಜೀರ ಪ್ರವೀಣ್, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ, ಲೋಕೇಶ್ವರಿ ಗೋಪಾಲ್, ಇಂದಿರಾ ಮೋಣಪ್ಪ, ತಂಗಮ್ಮ, ಮಂಜುಳಾ ಸುಬ್ರಮಣಿ, ರೂಪಾ ಸತೀಶ್, ಹೆಚ್.ಸಿ. ರಾಮಕೃಷ್ಣ, ಕುಶಾಲಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.