ಕಣಿವೆ, ನ. ೧೯: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿನ ಮಳ್ಳೂರು, ಕಲ್ಲೂರು - ಹೇರೂರು ಗ್ರಾಮಗಳ ಸಂಪರ್ಕ ರಸ್ತೆ ಸಂಪೂರ್ಣ ಕಿತ್ತು ನಿಂತಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಂಚಕಾರವಾಗಿದೆ ಎಂದು ದೂರಿರುವ ಗ್ರಾಮಸ್ಥರು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳ ಧೋರಣೆ ಖಂಡಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಹೇರೂರು ಗ್ರಾಮದ ರೈತ ಮುಖಂಡ ಅರುಣ್ ಚೆಂಗಪ್ಪ, ಗ್ರಾಮದ ರಸ್ತೆ ಕಾಮಗಾರಿ ವಿಚಾರದಲ್ಲಿ ಸಂಬAಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿಳಂಬ ಧೋರಣೆ ಇನ್ನು ಮುಂದೆ ಸಹಿಸುವಂತಹುದ್ದಲ್ಲ.
ಈಗಾಗಲೇ ಈ ರಸ್ತೆಯ ವಿಚಾರವಾಗಿ ಸಂಬAಧಪಟ್ಟ ಇಲಾಖೆಯಿಂದ ಪತ್ರವ್ಯವಹಾರ ನಡೆದಿದ್ದರೂ, ಕಾಮಗಾರಿ ಪೂರ್ಣಗೊಳ್ಳದೆ ಜನರು ಪ್ರತಿದಿನವೂ ತೊಂದರೆ ಅನುಭವಿಸುವಂತಾಗಿದೆ.
ಪ್ರಸ್ತುತ ರಸ್ತೆಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ವಾಹನ ಸಂಚಾರವೇ ಕಷ್ಟವಾಗುತ್ತಿದೆ. ವಿಶೇಷವಾಗಿ ಶಾಲೆ ಕಾಲೇಜುಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ತಮ್ಮ ಮಕ್ಕಳನ್ನು ಪೋಷಕರೇ ಸ್ವತಃ ಕರೆದುಕೊಂಡು ಬಂದು ಶಾಲೆಗೆ ತಲುಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಕೇವಲ ರಸ್ತೆಯ ಸಮಸ್ಯೆಯಲ್ಲ - ನಮ್ಮ ಮಕ್ಕಳ ಸುರಕ್ಷತೆ, ಸಾರ್ವಜನಿಕರ ಸಂಚಾರ ಮತ್ತು ಗ್ರಾಮಸ್ಥರ ದಿನನಿತ್ಯದ ಬದುಕಿನ ಸಮಸ್ಯೆ. ಆದ್ದರಿಂದ ಇನ್ನು ಮುಂದೆ ಗ್ರಾಮದ ಪ್ರತಿಯೊಬ್ಬರೂ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಪ್ರತಿಭಟನೆಗೆ ನಿರ್ಧರಿಸಿದ್ದೇವೆ ಎಂದು ಅರುಣ್ ತಿಳಿಸಿದ್ದಾರೆ.
ಸಂಬAಧಪಟ್ಟ ಗುತ್ತಿಗೆದಾರರು, ಇಂಜಿನಿಯರ್ಗಳು ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ವಿಷಯವನ್ನು ನೇರವಾಗಿ ತಂದು, ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ಪೂರ್ಣಗೊಳಿಸುವಂತೆ ಒತ್ತಾಯಿಸಲಾಗುವುದು. ಕಾಮಗಾರಿಯಲ್ಲಿ ನಿರ್ಲಕ್ಷö್ಯ ಅಥವಾ ನಿಯಮ ಉಲ್ಲಂಘನೆ ಕಂಡುಬAದರೆ, ಸಂಬAಧ ಪಟ್ಟ ಗುತ್ತಿಗೆ ದಾರರು ಹಾಗೂ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸ ಲಾಗುವುದು.
ಅಗತ್ಯವಿದ್ದಲ್ಲಿ ರಾಷ್ಟಿçÃಯ ಹೆದ್ದಾರಿಯ ಬಸವನಹಳ್ಳಿಯಲ್ಲಿ ಶಾಂತಿಯುತವಾಗಿ ರಸ್ತೆ ತಡೆ ಪ್ರತಿಭಟನೆ ನಡೆಸಿ, ಸಂಬAಧಪಟ್ಟ ಅಧಿಕಾರಿ ಗಳು ಹಾಗೂ ಸರ್ಕಾರದ ಮಟ್ಟಕ್ಕೆ ನಮ್ಮ ಸಮಸ್ಯೆಯ ಗಂಭೀರತೆಯನ್ನು ತಲುಪಿಸುವವರಿದ್ದೇವೆ.
ಈ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಿ, ಬಾಕಿ ಇರುವ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಪೂರ್ಣ ಗೊಳಿಸಬೇಕು ಎಂಬುದು ನಮ್ಮ ಒಕ್ಕೊರಲಿನ ಒತ್ತಾಯವಾಗಲಿದೆ. ಇದು ಯಾರೊಬ್ಬರ ವೈಯಕ್ತಿಕ ಸಮಸ್ಯೆಯಲ್ಲ. ಮಳ್ಳೂರು, ಕಲ್ಲೂರು ಹಾಗೂ ಹೇರೂರು ಗ್ರಾಮದ ಪ್ರತಿಯೊಬ್ಬರ ಸಮಸ್ಯೆಯಾಗಿದೆ ಎಂದು ಅರುಣ್ ತಿಳಿಸಿದ್ದಾರೆ.