ಮಡಿಕೇರಿ, ನ. ೨೨: ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಮಡಿಕೇರಿ ಕೊಡವ ಸಮಾಜಕ್ಕೆ ಸೇರಿರುವ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಸನಿಹದಲ್ಲಿರುವ ಕೊಡವ ಮಂದ್ ಇದೀಗ ಆಕರ್ಷಕ ಧಾರ್ಮಿಕ ಸ್ಥಳವಾಗಿ ರೂಪುಗೊಂಡಿದೆ. ಯಾವುದೇ ಸಂರಕ್ಷಣೆ ಇಲ್ಲದಂತಿದ್ದ ಈ ಸ್ಥಳ ಇದೀಗ ನವೀಕೃತಗೊಂಡಿದ್ದು, ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳುವ ಮೂಲಕ ಹೊಸ ಐತಿಹ್ಯ ಸೃಷ್ಟಿಯಾಗಿದೆ.

ಈಗಿನ ಪೀಳಿಗೆಗೆ ಗೊತ್ತಿದ್ದಂತೆ ಈ ಮಂದ್‌ನ ಸ್ಥಳದಲ್ಲಿ ಪುರಾತನ ಕಾಲದ ಬೃಹತ್ ಅತ್ತಿ ಮರವಿತ್ತು. ೨೦೨೫ರಲ್ಲಿ ಜುಲೈ ೧ ರಂದು ಸುರಿದ ಭಾರೀ ಮಳೆ - ಗಾಳಿಯ ಸಂದರ್ಭ ಈ ಮರದ ಅರ್ಧಭಾಗ ಧರಾಶಾಹಿಯಾಗಿತ್ತು. ನಂತರದಲ್ಲಿ ಇದನ್ನು ಅನಿವಾರ್ಯವಾಗಿ ತೆರವುಗೊಳಿಸುವಂತಾಗಿತ್ತು. ಮತ್ತೆ ಈ ಮಂದ್‌ನಲ್ಲಿ ಶ್ರೀ ಅಜ್ಜಪ್ಪನ ಸಲಹೆ, ಆಶೀರ್ವಾದದೊಂದಿಗೆ ಹೊಸ ಗಿಡ ನಡೆಸಲು ಜಾಗ ಗುರುತು ಮಾಡುವ ಕಾರ್ಯ ೨೦೨೫ರ ನವಂಬರ್ ೩ ರಂದು ನಡೆದಿತ್ತು.

ಶಾಸ್ತೊçÃಕ್ತವಾಗಿ ಈ ಕೆಲಸ ಕೈಗೊಳ್ಳಲಾಗಿದ್ದು, ನವೆಂಬರ್ ೨೮ ರಂದು ಹೊಸದಾಗಿ ಗುರುತು ಮಾಡಿದ ಸ್ಥಳದಲ್ಲಿ ಸಂಪ್ರದಾಯ ಬದ್ಧ ರೀತಿಯಲ್ಲಿ ಜನಾಂಗ - ಸಮಾಜದ ಪ್ರಮುಖರು, ಗಣ್ಯರ ಉಪಸ್ಥಿತಿಯಲ್ಲಿ ಹೊಸದಾಗಿ ಆಲ್‌ಮರ (ಆಲದ ಮರ) ನೆಡಲಾಗಿತ್ತು. ಇದಾಗ ಬಳಿಕ ಮಡಿಕೇರಿ ಕೊಡವ ಸಮಾಜ ಮಂದ್‌ಗೆ ಸೇರಿದ ೩೦ ಸೆಂಟ್ ಜಾಗವನ್ನು ಸಂರಕ್ಷಣೆ ಮಾಡುವ ಮೂಲಕ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಇದೀಗ ಈ ಸ್ಥಳದ ಸುತ್ತಲು ಗ್ರಿಲ್‌ಗಳನ್ನು ಅಳವಡಿಸಿ ಕೂರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಗಿಡ ಬೆಳೆಯುತ್ತಿರುವ ಸ್ಥಳವನ್ನು ಪ್ರತ್ಯೇಕವಾಗಿ ಬೇಲಿ ಅಳವಡಿಸಿ ಪೋಷಿಸಲಾಗುತ್ತಿದೆ. ಜಾಗವನ್ನು ಸಮತಟ್ಟುಗೊಳಿಸಿ ಒಂದು ಬದಿಯಲ್ಲಿ ಸಣ್ಣ ಕೊಠಡಿಯೊಂದನ್ನು ನಿರ್ಮಿಸಲಾಗಿದ್ದು, ಸುತ್ತಲು ಹೂಗಿಡಗಳನ್ನು ಬೆಳೆಯಲಾಗುತ್ತಿದ್ದು, ಆಕರ್ಷಕ ಸ್ಥಳವಾಗಿ ಪರಿವರ್ತಿಸಲಾಗಿದೆ.

ಈ ಹಿಂದೆ ಮಡಿಕೇರಿಯಲ್ಲಿ ನಡೆದ ಕೊಡವಾಮೆ ಬಾಳೋ ಕಾರ್ಯಕ್ರಮದ ಸಂದರ್ಭ ಸಂಗ್ರಹಿತ ಹಣದಲ್ಲಿ ಉಳಿಕೆಯಾದ ಸುಮಾರು ರೂ. ೭ ಲಕ್ಷ ಸೇರಿದಂತೆ, ಮಡಿಕೇರಿ ಶಾಸಕ ಡಾ. ಮಂತರ್‌ಗೌಡ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಾಜಿ ಎಂಎಲ್‌ಸಿ ಶಾಂತೆಯAಡ ವೀಣಾ ಅಚ್ಚಯ್ಯ, ಉದ್ಯಮಿ ಶಾಂತೆಯAಡ ವಿಶಾಲ್ ಕಾರ್ಯಪ್ಪ ಅವರುಗಳು ನೀಡಿದ ತಲಾ ರೂ. ೫೦ ಸಾವಿರ ಹಾಗೂ ಆಡಳಿತ ಮಂಡಳಿ ಸದಸ್ಯರಿಂದ ಕ್ರೋಢೀಕರಿಸಿದ ರೂ. ೧ ಲಕ್ಷ ಹಣ ಸೇರಿದಂತೆ ಬಾಕಿ ಮೊತ್ತವನ್ನು ಕೊಡವ ಸಮಾಜದಿಂದ ಭರಿಸಿ ಸುಮಾರು ರೂ. ೧೪ ಲಕ್ಷ ವೆಚ್ಚದಲ್ಲಿ ಮಂದ್ ನವೀಕೃತಗೊಂಡಿದೆ.

ಉದ್ಘಾಟನೆ ಕಾರ್ಯ

ನೂತನವಾಗಿ ಅಭಿವೃದ್ಧಿಯಾದ ಈ ಕೋಲ್‌ಮಂದ್‌ನ ಉದ್ಘಾಟನೆ ಕಾರ್ಯ (ಕೋಲ್ ಮಂದ್‌ಕ್ ಮೊಳಿ ಇಡುವ ಆಯಿಮೆ) ನಿನ್ನೆ ಸಂಜೆ ಜರುಗಿತು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಅವರು ಉದ್ಘಾಟನೆ ನೆರವೇರಿಸಿದರು. ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ದಾನಿಗಳ ನಾಮಫಲಕ ಅನಾವರಣಗೊಳಿಸಿದರು.

ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಪುರುಷರು, ತಳಿಯತಕ್ಕಿ ಬೊಳಕ್ ಹಿಡಿದ ಮಹಿಳೆಯರು ಅಥಿತಿಗಳನ್ನು ಸಾಂಪ್ರದಾಯಿಕ ಸ್ವಾಗತದೊಂದಿಗೆ ಕರೆತರುವ ಮೂಲಕ ಉದ್ಘಾಟನಾ ಸಮಾರಂಭ ಜರುಗಿತು. ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಸೇರಿದಂತೆ ಹಲವಾರು ಪ್ರಮುಖರು, ಕೊಡವ ಸಂಘಟನೆ, ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಮಂದ್ ಉದ್ಘಾಟನಾ ಸಮಾರಂಭವನ್ನು ಸಾಕ್ಷೀಕರಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಡುವAಡ ಪಿ. ಮುತ್ತಪ್ಪ ಅವರು ಮಂದ್‌ನ ಸ್ಥಳವನ್ನು ಸಂರಕ್ಷಿಸಿ ಪಾವಿತ್ರö್ಯತೆ ಕಾಪಾಡಲು ಕಾರ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿ ಈ ನಿಟ್ಟಿನಲ್ಲಿ ನಡೆದ ಕೆಲಸ ಕಾರ್ಯಗಳ ಬಗ್ಗೆ ವಿವರವಿತ್ತರು.

ವೇದಿಕೆಯಲ್ಲಿ ಆಹ್ವಾನಿತ ಗಣ್ಯರು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಸಮಾಜದ ಆಡಳಿತ ಮಂಡಳಿ ಕಾರ್ಯದರ್ಶಿ ಬೊಪ್ಪಂಡ ಸರಳಾ ಕರುಂಬಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ ಸ್ವಾಗತಿಸಿದರು. ಚೋಕಿರ ಅನಿತಾ ದೇವಯ್ಯ ಕಾರ್ಯಕ್ರಮ ನಿರ್ವಹಿಸಿ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ವಂದಿಸಿದರು.

-ಶಶಿ ಸೋಮಯ್ಯ, ಕರುಣ್ ಕಾಳಯ್ಯ

ಯರ‍್ಯಾರು ಏನೆಂದರು

ದೇಶಕಟ್ಟು ಪಾಲಿಸಬೇಕು : ಪರದಂಡ ಸುಬ್ರಮಣಿ

ಕೊಡವ ಜನಾಂಗದವರು ದೇಶಕಟ್ಟು ಅನ್ನು ಸೂಕ್ತ ರೀತಿಯಲ್ಲಿ ಪಾಲಿಸಬೇಕು, ಪುತ್ತರಿ ಪದ್ದತಿಗೆ ಅದರದ್ದೇ ಆದ ಮಹತ್ವ ಇದೆ. ಕೋವಿ ಹಕ್ಕು ದುರ್ಬಳಕೆಯಾಗದಂತೆ ಗಮನ ಹರಿಸಬೇಕು ಎಂದು ಅ.ಕೊ.ಸ. ಅಧ್ಯಕ್ಷ ಪರದಂಡ ಸುಬ್ರಮಣಿ ಹೇಳಿದರು.

ಉತ್ತಮ ಶಿಕ್ಷಣ ನೀಡಿ : ವಿಷ್ಣು ಕಾರ್ಯಪ್ಪ

ಕೊಡವ ಪದ್ದತಿ - ಪರಂಪರೆಯ ಪರಿಪಾಲನೆಯೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷ ವಿಷ್ಣು ಕಾರ್ಯಪ್ಪ ಅಭಿಪ್ರಾಯಪಟ್ಟರು.

ವಿಶೇಷತೆ ಪ್ರತಿಬಿಂಬಿತವಾಗಬೇಕು : ನಾಚಪ್ಪ

ಭಾರತದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದು ನಿಜ. ಆದರೆ, ಕೊಡವ ಜನಾಂಗದವರು ತಮ್ಮದೇ ಆದ ವಿಶೇಷ ಸಂಸ್ಕೃತಿ - ಪದ್ದತಿ ಪರಂಪರೆ ಹೊಂದಿದ್ದಾರೆ. ಕೊಡವರ ಹಕ್ಕುಗಳೂ ವಿಭಿನ್ನವಾಗಿವೆ. ಈ ಬಗ್ಗೆ ಅರ್ಥೈಸಿಕೊಂಡು ತಮ್ಮ ಜನಾಂಗದ ವಿಶೇಷತೆಯನ್ನು ಪ್ರತಿಪಾದಿಸುವ ಮೂಲಕ ಸರಕಾರಕ್ಕೆ ಮನದಟ್ಟು ಮಾಡಬೇಕು. ಇದು ಈಗಿನ ಅನಿವಾರ್ಯತೆ ಕೂಡ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.

ನಾವು ಪಾಲಿಸಿ ಮುಂದಿನ ಪೀಳಿಗೆಗೆ ಬಿಡಬೇಕು : ಮಂಜು ಚಿಣ್ಣಪ್ಪ

ಕೊಡವಾಮೆ ಎಂಬುದು ಭಾರೀ ಮಹತ್ವದ್ದಾಗಿದೆ, ಪ್ರಸ್ತುತ ಹಲವು ಗೊಂದಲಗಳಲ್ಲಿ ಜನರಿದ್ದಾರೆ. ಈ ಹಿನ್ನೆಲೆಯಲ್ಲಿ ಮಹತ್ವ ಹಿಂದಿನ ಪರಂಪರೆಯನ್ನು ಮೊದಲು ಈಗಿನ ಪೀಳಿಗೆಯವರು ಅರಿತು ಪಾಲಿಸಬೇಕು. ನಂತರದಲ್ಲಿ ಮುಂದಿನ ಪೀಳಿಗೆಯವರೂ ಇದನ್ನು ಅನುಸರಿಸಲು ಅನುವು ಮಾಡಿಕೊಡಬೇಕಿದೆ ಎಂದು ಯುಕೋ ಅಧ್ಯಕ್ಷ ಮಂಜು ಚಿಣ್ಣಪ್ಪ ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಚುನಾವಣೆ ಇರಬಾರದು : ರವಿ ಕುಶಾಲಪ್ಪ

ಕೊಡವ ಸಮಾಜಗಳಿಗೆ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ನಡೆಯುವುದು ಉತ್ತಮ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಿ ವಹಿಸಬೇಕು. ಹಿಂದೆ ತಾವು ಜಿ.ಪಂ. ಅಧ್ಯಕ್ಷರಾಗಿದ್ದಾಗ ಮಂದ್‌ಗೆ ರೂ. ೫ ಲಕ್ಷ ಅನುದಾನ ವಿಶೇಷವಾಗಿ ನೀಡಲಾಗಿತ್ತು ಎಂದು ಜಿ.ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಸ್ಮರಿಸಿದರು.

ಮಂದ್ ಸಂರಕ್ಷಣೆ ಜವಾಬ್ದಾರಿ : ಮಹೇಶ್ ನಾಚಯ್ಯ

ಕೊಡವ ಸಂಸ್ಕೃತಿ ಆಚಾರ - ವಿಚಾರ ಉಳಿಸಿ ಬೆಳೆಸುವುದರೊಂದಿಗೆ ಪವಿತ್ರ ನೆಲೆಯಾದ ಮಂದ್- ಮಾನಿಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಕೊಡವ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ನುಡಿದರು.