ವರದಿ : ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ನ. ೨೨: ಗೋಣಿಕೊಪ್ಪಲುವಿನ ಕ್ಯಾಲ್ಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಕೈಗ್ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ಅಮ್ಮತ್ತಿಯ ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಕೈಗ್ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಕೊನೆಯ ಕ್ಷಣದವರೆಗೂ ಕುತೂಹಲ ಮೂಡಿಸಿದ ಪಂದ್ಯದಲ್ಲಿ ಕೋಣನಕಟ್ಟೆ ಇಲೆವೆನ್ ತಂಡವು ಸಡನ್‌ಡೆತ್‌ನಲ್ಲಿ ಕೂರ್ಗ್ ಚಾರ್ಮರ್ಸ್ ಮಡಿಕೇರಿ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಪAದ್ಯದ ಆರಂಭದಿAದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೋಣನಕಟ್ಟೆ ಇಲೆವೆನ್ ತಂಡ ಮೊದಲ ಗೋಲು ದಾಖಲಿಸಿ ಮುನ್ನಡೆ ಸಾಧಿಸಿತು. ಮತ್ತೊಂದೆಡೆ ಕೂರ್ಗ್ ಚಾರ್ಮರ್ಸ್ ತಂಡಕ್ಕೆ ಹಲವು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದರೂ ಅವುಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ನಂತರ ಆಟದ ವೇಗ ಹೆಚ್ಚಿಸಿದ ಕೂರ್ಗ್ ಚಾರ್ಮರ್ಸ್ ತಂಡದ ಆಟಗಾರರು ನಾಲ್ಕನೇ ಅವಧಿಯಲ್ಲಿ ಆಕರ್ಷಕ ಫೀಲ್ಡ್ ಗೋಲು ದಾಖಲಿಸುವ ಮೂಲಕ ಪಂದ್ಯವನ್ನು ೧-೧ ಗೋಲುಗಳಿಂದ ಸಮಬಲಗೊಳಿಸಿದರು. ದ್ವಿತೀಯಾರ್ಧದಲ್ಲಿ ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿದ ತಂಡಗಳು ಗೋಲು ಗಳಿಸಲು ಹಲವು ಪ್ರಯತ್ನ ನಡೆಸಿದರೂ ಯಶಸ್ಸು ದೊರೆಯಲಿಲ್ಲ. ನಿಗದಿತ ನಾಲ್ಕು ಕ್ವಾರ್ಟರ್‌ಗಳ ಆಟ ಮುಕ್ತಾಯಗೊಂಡರೂ ಫಲಿತಾಂಶ ನಿರ್ಧಾರವಾಗದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಅಲ್ಲಿಯೂ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ ಕಾರಣ ಸಡನ್ ಡೆತ್ ನಿಯಮದ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು.

ಸಡನ್ ಡೆತ್‌ನಲ್ಲಿ ಕೋಣನಕಟ್ಟೆ ತಂಡದ ಚೆಪ್ಪುಡಿರ ದಿವಾನ್ ಸುಬ್ಬಯ್ಯ ನಿರ್ಣಾಯಕ ಗೋಲು ದಾಖಲಿಸುವ ಮೂಲಕ ತಂಡಕ್ಕೆ ೧-೦ ಗೋಲುಗಳ ಜಯ ತಂದುಕೊಟ್ಟರು. ಈ ಮೂಲಕ ಕೋಣನಕಟ್ಟೆ ಇಲೆವೆನ್ ತಂಡ ಕೈಗ್ ಹಾಕಿ ಕಪ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೂರ್ಗ್ ಚಾರ್ಮರ್ಸ್ ಮಡಿಕೇರಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು.

ಪಂದ್ಯ ವೀಕ್ಷಿಸಲು ಕ್ರೀಡಾಂಗಣದ ಗ್ಯಾಲರಿಯಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಸೇರಿದ್ದರು. ಎರಡೂ ತಂಡಗಳ ಸ್ಥಳೀಯ ಹಾಗೂ ಅತಿಥಿ ಆಟಗಾರರ ಉತ್ತಮ ಆಟ ಪ್ರೇಕ್ಷಕರನ್ನು ರಂಜಿಸಿತು.

ಫೈನಲ್ ಪಂದ್ಯಕ್ಕೆ ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಉದ್ಯಮಿ ಗುಮ್ಮಟ್ಟಿರ ಕಿಲನ್ ಗಣಪತಿ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಹ್ಮಣ್ಯ, ಕೈಗ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಸುದೀನ್ ಮಂದಣ್ಣ, ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಮೊಳ್ಳೆರ ಸದಾ ಅಪ್ಪಚ್ಚು, ಜನಾರ್ದನ ಸಾಲಿಯಾನ್, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಡ ಲವ, ಮೈಸೂರಿನ ಮಾತಂಡ ಅಯ್ಯಪ್ಪ, ಡಾ. ಸೋನಿಯಾ ಮಂದಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಫೈನಲ್ ಪಂದ್ಯದಲ್ಲಿ ಕ್ಯಾಲ್ಸ್ ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಅಶ್ವಿನಿ ನಾಚಪ್ಪ, ದತ್ತ ಕರುಂಬಯ್ಯ, ಗೋಣಿಕೊಪ್ಪಲು ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ಕೈಗ್ ಸಂಸ್ಥೆಯ ಸಿಇಒ ಸುಭಾಷ್ ಚಂಗಪ್ಪ, ಉಪಾಧ್ಯಕ್ಷೆ ಯೋಗಿತಾ, ಸಿಎಫ್‌ಒ ಸಂಗೀತಾ ಸುದೀನ್, ಶಶಿ ಮೇದಪ್ಪ, ಕಲ್ಪನಾ ಸೋಮಯ್ಯ, ದೀಕ್ಷಾ ತಿಮ್ಮಯ್ಯ, ಹರಿಣಿ, ರೇವಣ್ಣ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಪದಾಧಿಕಾರಿಗಳಾದ ನೆಲ್ಲಮಕ್ಕಡ ಸಂಪತ್ ದೇವಯ್ಯ, ಅಪ್ಪು ಕಾರ್ಯಪ್ಪ, ಹರಿ, ಮಂಡೇಪAಡ ಸಚಿನ್, ಪೊನ್ನಪ್ಪ, ಮಚ್ಚಾರಂಡ ಕಿರಣ್, ಕುಂಞAಗಡ ಕಿರಣ್, ಕುಟ್ಟಂಡ ಭೋಜಿ ಅಯ್ಯಪ್ಪ, ಮೂಕೊಂಡ ರಮಣ, ಅಲ್ಲಪ್ಪಿರ ಕಾರ್ಯಪ್ಪ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.

ಹಾಕಿ ಇಂಡಿಯಾದ ಬಾಲಾಜಿ ಕುಮಾರ್, ಗೋಪಿನಾಥ್ ರವಿ, ಕಲ್ಮಾಡಂಡ ಸೋಮಣ್ಣ, ಬೊಳ್ಳಚಂಡ ನಾಣಯ್ಯ, ತಾಮರೈ ಕಣ್ಣನ್ ಹಾಗೂ ಹರೀಶ್ ಪಮ್ಮಿ ಶೆಟ್ಟಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ತಾಂತ್ರಿಕ ವಿಭಾಗದಲ್ಲಿ ಸುಮನ್, ಕುಮಾರನ್ ಹಾಗೂ ಫಾಸಲ್ ಮಹಮೂದ್ ಕಾರ್ಯನಿರ್ವಹಿಸಿದರು.

ಮಾಳೇಟಿರ ಶ್ರೀನಿವಾಸ್, ಕೋದೇಂಗಡ ಲೇಖನ ಅಯ್ಯಣ್ಣ ಹಾಗೂ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ವೀಕ್ಷಕ ವಿವರಣೆ ನೀಡಿದರು. ಮಾಚಿಮಂಡ ಸುವಿನ್ ಗಣಪತಿ ಸ್ವಾಗತಿಸಿ, ಮಾಳೇಟಿರ ಶ್ರೀನಿವಾಸ್ ನಿರೂಪಿಸಿ, ಕೊಲ್ಲಿರ ಗೋಪಿ ಚಿಣ್ಣಪ್ಪ ವಂದಿಸಿದರು.

ಬೊಟ್ಯತ್‌ನಾಡ್ ತೃತೀಯ

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬೊಟ್ಯತ್‌ನಾಡ್ ಕುಂದ ಹಾಗೂ ಮಾದುರಪ್ಪ ಕೊಡವ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನ್ ಕ್ಲಬ್ ಬಲಂಬೇರಿ ತಂಡಗಳು ಪ್ರಬಲ ಪೈಪೋಟಿ ನೀಡಿದವು.

ಮಧ್ಯಂತರದ ವೇಳೆಗೆ ಎರಡೂ ತಂಡಗಳು ತಲಾ ೩ ಗೋಲು ದಾಖಲಿಸುವ ಮೂಲಕ ಪಂದ್ಯದಲ್ಲಿ ರೋಚಕತೆ ಮೂಡಿಸಿದವು. ಮಧ್ಯಂತರದ ಬಳಿಕವೂ ಗೋಲುಗಳಿಗಾಗಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಮುಂದುವರಿಯಿತು.

ಅAತಿಮವಾಗಿ ಬೊಟ್ಯಾತ್‌ನಾಡ್ ಕುಂದ ತಂಡವು ಮಾದುರಪ್ಪ ಕೊಡವ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ತಂಡವನ್ನು ೭-೫ ಗೋಲುಗಳ ಅಂತರದಿAದ ಮಣಿಸಿ ಮೂರನೇ ಸ್ಥಾನ ಪಡೆದುಕೊಂಡಿತು. ಸೋಲು ಕಂಡ ಬಲಂಬೇರಿ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಬೊಟ್ಯತ್‌ನಾಡ್ ಕುಂದ ತಂಡದ ಪರ ಮಂಡಚAಡ ದೀಪಕ್ ೨, ನವನೀತ್ ಸಿಂಗ್ ೨, ವಿನಯ್ ರಾಣಾ ನಾಗೇಶ್ ಹಾಗೂ ಪೆಮ್ಮಂಡ ಸೋಮಣ್ಣ ತಲಾ ೧ ಗೋಲು ದಾಖಲಿಸಿದರು. ಬಲಂಬೇರಿ ತಂಡದ ಪರ ಸತೀಶ್ ಮುಂಡಾ ೩ ಹಾಗೂ ಅಕ್ ಸಕ್ ಮತ್ತು ದೀಪಕ್ ಮಿನ್ಸಾ ತಲಾ ೧ ಗೋಲು ಬಾರಿಸಿದರು.

ಸನ್ಮಾನ

ಕಾರ್ಯಕ್ರಮದಲ್ಲಿ ನಿವೃತ್ತ ಕರ್ನಲ್ ಅಯ್ಯುಡ ಗಣಪತಿ ಹಾಗೂ ಕ್ಯಾಲ್ಸ್ ವಿದ್ಯಾಸಂಸ್ಥೆಯ ಅಮ್ಮಂಡಿರ ಚೇತನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮೂರನೇ ಆವೃತ್ತಿ ಘೋಷಣೆ

ಕೈಗ್ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ನಾಪೋಕ್ಲುವಿನ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ೨೦೨೭ರಲ್ಲಿ ಮೂರನೇ ಆವೃತ್ತಿಯ ಹಾಕಿ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ಸಂಘಟಕರು ಘೋಷಿಸಿದರು.