ವೀರಾಜಪೇಟೆ, ನ. ೨೨: ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ಬಾಳುಗೋಡುವಿನಲ್ಲಿ ಕಳೆದ ನಾಲ್ಕು ದಿನಗಳಿಂದ ವಿವಿಧ ಕೊಡವ ಸಮಾಜಗಳ ನಡುವೆ ನಡೆದ ಹಾಕಿ ಪಂದ್ಯಾವಳಿಯ ಫೈನಲ್ನಲ್ಲಿ ಆರಾಯಿರನಾಡು ಕೊಡವ ಸಮಾಜ ತಂಡವು ಮೂರ್ನಾಡು ಕೊಡವ ಸಮಾಜ ತಂಡವನ್ನು ೨-೧ ಗೋಲುಗಳಿಂದ ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮೂರ್ನಾಡು ಕೊಡವ ಸಮಾಜ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಪ್ರಥಮಾರ್ಧದ ೧೦ನೇ ನಿಮಿಷದಲ್ಲಿ ಆರಾಯಿರನಾಡು ತಂಡದ ಆಟಗಾರ ಚೇಂದAಡ ಬೋಪಣ್ಣ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಕ್ಕೆ ಪ್ರತಿಯಾಗಿ ೧೬ನೇ ನಿಮಿಷದಲ್ಲಿ ಮೂರ್ನಾಡು ತಂಡದ ದೇವಂಡಿರ ಆರ್ಯನ್ ಆಕರ್ಷಕ ಗೋಲು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು.
ದ್ವಿತೀಯಾರ್ಧದ ೩೮ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡ ಆರಾಯಿರನಾಡು ತಂಡದ ಇಂಡಿಯನ್ ನೇವಿ ಆಟಗಾರ ಐಚಂಡ ಪಳಂಗಪ್ಪ ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಆರಾಯಿರನಾಡು ತಂಡಕ್ಕೆ ಐದು ಹಾಗೂ ಮೂರ್ನಾಡು ತಂಡಕ್ಕೆ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಮೂರ್ನಾಡು ತಂಡ ಗೋಲು ಗಳಿಸಲು ಹಲವು ಪ್ರಯತ್ನಗಳನ್ನು ನಡೆಸಿದರೂ, ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಆರಾಯಿರನಾಡು ತಂಡದ ಗೋಲ್ಕೀಪರ್ ಅಪ್ಪಂಡೆರAಡ ಸುಬ್ರಮಣಿ ಅವರ ಅತ್ಯುತ್ತಮ ರಕ್ಷಣೆಯಿಂದ ಯಶಸ್ಸು ಕಾಣಲಿಲ್ಲ.
ಕುಪ್ಪಂಡ ದಿಲನ್ ಹಾಗೂ ಮಾಳೇಟಿರ ಕಾಳಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ತಾಂತ್ರಿಕ ಸಮಿತಿಯಲ್ಲಿ ಮಳವಂಡ ತಕ್ಷಕ್ ಹಾಗೂ ತಾಂತ್ರಿಕ ನಿರ್ದೇಶಕರಾಗಿ ಕನ್ನಂಬಿರ ಚಿಣ್ಣಪ್ಪ ಜವಾಬ್ದಾರಿ ನಿರ್ವಹಿಸಿದರು.
ಮಹಿಳಾ ವಿಭಾಗದಲ್ಲಿ ವೀರಾಜಪೇಟೆಗೆ ಜಯ
ಮಹಿಳೆಯರ ಫೈವ್-ಎ-ಸೈಡ್ ಹಾಕಿ ಪಂದ್ಯಾವಳಿಯ ಫೈನಲ್ನಲ್ಲಿ ವೀರಾಜಪೇಟೆ ಕೊಡವ ಸಮಾಜ ತಂಡವು ಮೂರ್ನಾಡು ಕೊಡವ ಸಮಾಜ ತಂಡವನ್ನು ಟೈಬ್ರೇಕರ್ನಲ್ಲಿ ೩-೨ ಗೋಲುಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ದಾಖಲಿಸಿ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಟೈಬ್ರೇಕರ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಪಂದ್ಯದ ಐದನೇ ನಿಮಿಷದಲ್ಲಿ ಮೂರ್ನಾಡು ತಂಡದ ಯೂನಿಯನ್ ಬ್ಯಾಂಕ್ ಆಟಗಾರ್ತಿ ಮೇಕೇರಿರ ಶೈನಾ ತಂಗಮ್ಮ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಒಂಬತ್ತನೇ ನಿಮಿಷದಲ್ಲಿ ವೀರಾಜಪೇಟೆ ಕೊಡವ ಸಮಾಜದ ನಾಪಂಡ ಸೌಮ್ಯ ಗೋಲು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು.
ಟೈಬ್ರೇಕರ್ನಲ್ಲಿ ವೀರಾಜಪೇಟೆ ತಂಡದ ನಾಪಂಡ ಸೌಮ್ಯ ಹಾಗೂ ಕೇಚೆಟ್ಟಿರ ಪಾರ್ವತಿ ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮೂರ್ನಾಡು ತಂಡದ ಪರ ಪಾಂಡAಡ ದೇಚಮ್ಮ ಮಾತ್ರ ಗೋಲು ದಾಖಲಿಸಲು ಸಾಧ್ಯವಾಯಿತು. ಅಂತಿಮವಾಗಿ ವೀರಾಜಪೇಟೆ ಕೊಡವ ಸಮಾಜ ತಂಡ ೩ ಜಯ ಸಾಧಿಸಿತು.
ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಾಜಿ ಅದ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ, ಉಪಾಧ್ಯಕ್ಷರು ಮಂಡುವAಡ ಮುತ್ತಪ್ಪ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ಉಟೋಪಚಾರ ಸಮಿತಿ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಹಗ್ಗಜಗ್ಗಾಟ ಸಮಿತಿ ಅಧ್ಯಕ್ಷ ಬೊಳಿಯಂಗಡ ದಾದು ಪೂವಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಹಂಚೆಟ್ಟಿರ ಮನು ಮುದ್ದಪ್ಪ ಸೇರಿದಂತೆ ವಿವಿಧ ಕೊಡವ ಸಮಿತಿಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು. ಚೆಪ್ಪುಡಿರ ಕಾರ್ಯಪ್ಪ ವೀಕ್ಷಕ ವಿವರಣೆ ನೀಡಿ ಕಾರ್ಯಕ್ರಮ ನಿರೂಪಿಸಿದರು.