ನಾಪೋಕ್ಲು, ನ. ೧೯: ಕೊಡಗು ಜಿಲ್ಲೆಯ ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಮಹತ್ತರ ಉದ್ದೇಶದಿಂದ ಕೊಡಗು ಮುಸ್ಲಿಂ ಅಸೋಸಿಯೇಷನ್ ಸಂಘಟನೆ ರಚನೆಯಾಗಿದೆ.

ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಲು ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಸಿ.ಎ. ಫತ್ತಾಯಿ ಕಡಂಗ, ಕಾರ್ಯಾಧ್ಯಕ್ಷರಾಗಿ ಎ.ಎಂ. ಸಾದಲಿ ಮಾಪಿಳತೋಡು, ಉಪಾಧ್ಯಕ್ಷರುಗಳಾಗಿ ಎ.ಎಂ. ಅಬ್ದುಲ್ ರಶೀದ್ (ಮುತ್ತು) ಗೋಣಿಕೊಪ್ಪ, ಇರ್ಷಾದ್ ಅಹಮದ್ ಖಾನ್ ಬಿಳುಗುಂದ, ಎಜಾಸ್ ವೀರಾಜಪೇಟೆ, ಪಿ.ವೈ. ಅಬೂಬಕ್ಕರ್ ಕೊಂಡAಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಮಜೀದ್ ಚೋಕಂಡಳ್ಳಿ, ಸಹ ಕಾರ್ಯದರ್ಶಿಯಾಗಿ ಕೆ.ಎ. ಹಾರಿಸ್ ನಾಪೋಕ್ಲು, ಖಜಾಂಚಿಯಾಗಿ ಮಾಜಿ ಸೈನಿಕ ಅಬ್ದುಲ್ ಸಲಾಂ ಕಡಂಗ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಲೀಂ ಎಂ.ಎಸ್. ನಾಪೋಕ್ಲು, ಹಂಝ ಬೇಗೂರು, ಹಕೀಂ ಗೋಣಿಕೊಪ್ಪ, ಮುಜೀಬ್ ಸೋಮವಾರಪೇಟೆ ಅವರನ್ನು ಆಯ್ಕೆ ಮಾಡಲಾಗಿದೆ.