ಮಡಿಕೇರಿ ನ. ೧೯: ಪೆಟ್ರೋಲ್ನಲ್ಲಿ ಶೇ.೩೦ರಷ್ಟು ಎಥೆನಾಲ್ ಮಿಶ್ರಣ ಮಾಡಿ ಟರ್ಮಿನಲ್ ಕೇಂದ್ರಗಳಿAದ ಪೆಟ್ರೋಲ್ ಬಂಕ್ಗಳಿಗೆ ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಕೇಂದ್ರ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ. ರಮೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡುತ್ತಿರುವುದರಿಂದ ಗ್ರಾಹಕರಿಗೆ ಶುದ್ಧ ಪೆಟ್ರೋಲ್ ದೊರೆಯದೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ರಿಜ್ವಾನ್ ಹರ್ಷದ್ ಅವರು ತಮ್ಮ ಇಲಾಖೆಯ ಮೂಲಕ ಈ ಕುರಿತು ಪರಿಶೀಲನೆ ನಡೆಸಿ, ಪೆಟ್ರೋಲ್ನಲ್ಲಿ ಶೇ.೩೦ರಷ್ಟು ಎಥೆನಾಲ್ ಮಿಶ್ರಣವಾಗಿರುವುದನ್ನು ಪತ್ತೆಹಚ್ಚಿ ದೃಢೀಕರಿಸಿದ್ದಾರೆ. ಈ ಸಂಬAಧ ಪ್ರಯೋಗಾಲಯದ ವರದಿಯನ್ನು ಮುಂದಿನ ಕ್ರಮಕ್ಕಾಗಿ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪೆಟ್ರೋಲ್ ಬಂಕ್ಗಳ ಪಾತ್ರವಿಲ್ಲ. ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ ಮಾಡುವ ಕಾರ್ಯ ಟರ್ಮಿನಲ್ ಕೇಂದ್ರಗಳಲ್ಲೇ ನಡೆಯುತ್ತಿದೆ. ಪೆಟ್ರೋಲ್ ಬಂಕ್ಗಳು ಎಥೆನಾಲ್ ಅನ್ನು ಶೇ.೩೦ರಷ್ಟು ಪ್ರಮಾಣದಲ್ಲಿ ಸ್ವತಃ ಮಿಶ್ರಣ ಮಾಡುತ್ತಿಲ್ಲ. ಬದಲಾಗಿ ಟರ್ಮಿನಲ್ಗಳಲ್ಲೇ ಹೆಚ್ಚಿನ ಪ್ರಮಾಣದ ಮಿಶ್ರಣ ನಡೆಯುತ್ತಿರುವ ಆರೋಪವಿದೆ. ಈ ಕಾರ್ಯದ ಹಿಂದೆ ಯಾರಿದ್ದಾರೆ ಮತ್ತು ಇದಕ್ಕೆ ಹೊಣೆ ಯಾರು ಎಂಬುದನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕೆAದು ಆಗ್ರಹಿಸಿದ್ದಾರೆ.