ಮಡಿಕೇರಿ, ನ. ೧೯: ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರದ ಎಂಎಸ್‌ಎAಇ. ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿರುವ ವಿಶ್ವಬ್ಯಾಂಕ್ ನೆರವಿನ ರ‍್ಯಾಂಪ್ (ರೈಸಿಂಗ್ ಅಂಡ್ ಅಕ್ಸಲರೇಟಿಂಗ್ ಎಂಎಸ್‌ಎAಇ ಪರ್‌ಪಾರ್ಮೆನ್ಸ್) ಯೋಜನೆಯಡಿ, ದಿನಾಂಕ ೦೪.೦೯.೨೦೨೪ ರಂದು ಅಥವಾ ನಂತರ ವಾಣಿಜ್ಯ ಉತ್ಪಾದನೆಯನ್ನು ಆರಂಭಿಸಿರುವ ಕೊಡಗು ಜಿಲ್ಲೆಯ ಹೊಸ ಉತ್ಪಾದನಾ ಆಧಾರಿತ ಸೂಕ್ಷö್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ (ವ್ಯಾಪಾರ ಹಾಗೂ ಸೇವಾ ವಲಯಕ್ಕೆ ಅವಕಾಶವಿಲ್ಲ) ಗರಿಷ್ಠ ರೂ. ೧ ಕೋಟಿ ರೂ ವರೆಗಿನ ಅವಧಿ ಸಾಲಕ್ಕೆ ಮೊದಲ ೧೨ ತಿಂಗಳ ಬಡ್ಡಿಯಲ್ಲಿ ಶೇ.೬ ರಂತೆ ಅಥವಾ ಗರಿಷ್ಠ ರೂ. ೬ ಲಕ್ಷಗಳವರೆಗೆ (ಯಾವುದು ಕಡಿಮೆಯೋ ಅದು) ಒಂದು ಬಾರಿಯ ಬಡ್ಡಿ ಸಹಾಯಧನವನ್ನು ನೇರವಾಗಿ ಸಾಲದ ಖಾತೆಗೆ ಜಮೆ ಮಾಡಲು ಅರ್ಹ ಘಟಕಗಳಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ. ಆಸಕ್ತ ಹೊಸ ಉದ್ಯಮಿಗಳು ಸಂಬAಧಪಟ್ಟ ಬ್ಯಾಂಕ್ ಶಾಖೆಯ ಮೂಲಕ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ - ೫೭೧೨೦೧ ಇಲ್ಲಿಗೆ ಖುದ್ದಾಗಿ ಅಥವಾ ದೂರವಾಣಿ ಮುಖೇನ (ದೂರವಾಣಿ ಸಂಖ್ಯೆ: ೦೮೨೭೨-೨೨೮೭೪೬, ೭೯೭೫೫೫೬೭೭೯, ೮೫೫೩೨೨೬೬೬೪, ೯೮೪೫೫೯೬೨೫೨) ಸಂಪರ್ಕಿಸುವAತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.