ಮಡಿಕೇರಿ, ನ. ೧೯; ಮಡಿಕೇರಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಟಿಪ್ಪರ್ ಲಾರಿಗೆ ಡಿಕ್ಕಿಯಾದ ಪರಿಣಾಮ ಜಿಲ್ಲೆಯ ವ್ಯಕ್ತಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ.

ಮಡಿಕೇರಿ ಸಮೀಪದ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡಮಕಲ್ಲು ನಿವಾಸಿ ಆರ್ಮುಗಂ ಎಂಬವರೇ ಅಪಘಾತದಲ್ಲಿ ದುರ್ಮರಣ ಹೊಂದಿರುವ ದುರ್ದೈವಿ. ತಾ. ೧೮ರ ನಡುರಾತ್ರಿ ಎರಡು ಗಂಟೆ ವೇಳೆಗೆ ಪುತ್ತೂರು ಕಡೆಗೆ ತಮ್ಮ ಸಂಗಡಿಗರೊAದಿಗೆ ಪುತತೂರು ಕಡೆಗೆ ಕಾರಿನಲ್ಲಿ( ಕೆ.ಎ.೧೨. ಎಂ.ಬಿ. ೧೪೦೭) ತೆರಳುತ್ತಿದ್ದ ಸಂದರ್ಭ ಅಲ್ಲಿನ ಬೈಪಾಸ್ ರಸ್ತೆಯ ದರ್ಬೆ ಬಳಿಯ ಅಶ್ವಿನಿ ವೃತ್ತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್‌ಗೆ (ಕೆ.ಎಲ್..೧೪ ಎ ೯೩೪೪) ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಆರ್ಮುಗಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಾರಿನಲ್ಲಿದ್ದ ರಾಜನ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರೆ, ಚಾಲಕ ಮಣಿಕಂಠ ಎಂಬವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.