ಕುಶಾಲನಗರ, ನ. ೧೯: ಕಾವೇರಿ ನೀರಾವರಿ ನಿಗಮದ ಮೂಲಕ ರೂ. ೫ ಕೋಟಿ ವೆಚ್ಚದಲ್ಲಿ ಕುಶಾಲನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ರೂ. ೫ ಕೋಟಿ ವೆಚ್ಚದಲ್ಲಿ ಕುಶಾಲನಗರ ಪ್ರವಾಸಿ ಮಂದಿರ ವೃತ್ತದಿಂದ ಹಾರಂಗಿ ಇಲಾಖಾ ಕಚೇರಿ ತನಕ ಮತ್ತು ಜನತಾ ಕಾಲೋನಿಯ ಅಡ್ಡ ರಸ್ತೆಗಳು, ಕಾಂಪೌAಡ್ ಹಾಗೂ ಜನತಾ ಕಾಲೋನಿ ಜಂಕ್ಷನ್ ಬಳಿ ಒಟ್ಟು ೨ ಕಿ.ಮೀ. ರಸ್ತೆ ಅಭಿವೃದ್ಧಿ, ಡ್ರೆöÊನೇಜ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ರಸ್ತೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಸೂಚಿಸಿದರು. ಶೀಘ್ರದಲ್ಲೇ ಹಾರಂಗಿಯಲ್ಲಿ ಬೋಸ್ಟಿçಂಗ್ ಬ್ರಿಡ್ಜ್ ನಿರ್ಮಾಣಕ್ಕೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಕಾಂಗ್ರೆಸ್ ಪ್ರಮುಖ ನಂಜುAಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಎಸ್. ಆನಂದಕುಮಾರ್, ಮಾಜಿ ಜನಪ್ರತಿನಿಧಿಗಳಾದ ಎಂ.ಕೆ. ದಿನೇಶ್, ಜಗದೀಶ್, ಶಿವಶಂಕರ್, ಜಯಲಕ್ಷಿö್ಮ, ನಂಜುAಡಸ್ವಾಮಿ, ಎಂ.ಎA. ಪ್ರಕಾಶ್, ಪ್ರಮುಖರಾದ ಶಿವಕುಮಾರ್, ಚಂದನ್ ಕುಮಾರ್, ಹೆಬ್ಬಾಲೆ ರಂಜನ್ ಮತ್ತಿತರರು ಇದ್ದರು.