ಸಿದ್ದಾಪುರ, ನ. ೧೮: ಅಮ್ಮತ್ತಿ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಅಮ್ಮತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾಗವಹಿಸಿದ ಸೇವ್ದ ಡ್ರೀಮ್ಸ್ ಸಂಸ್ಥೆ ಸ್ಥಾಪಕ ಜಾಬೀರ್ ನಿಜಾಮಿ ಉಸ್ತಾದ್ ಮಾತನಾಡಿ, ಆಟೋ ಚಾಲಕರು ನಿಜವಾದ ಸಮಾಜ ಸೇವಕರು ಎಂದ ಅವರು ದಿನನಿತ್ಯ ತಮ್ಮ ವೃತ್ತಿಯಲ್ಲಿ ತೊಡಗಿರುವ ಚಾಲಕರು ಒಂದು ದಿನ ಕುಟುಂಬ ಸಮೇತ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಎಂದರು.
ಮೂರ್ನಾಡು ನಕ್ಷತ್ರ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ ಮಾತನಾಡಿ, ಪ್ರತಿಯೊಬ್ಬ ಸದಸ್ಯರು ಸಂಘಟನೆಗೆ ಗೌರವ ನೀಡಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಮತ್ತು ಭಾಗವಹಿಸಿದ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೇವ್ದ ಡ್ರೀಮ್ಸ್ ಸಂಸ್ಥೆ ವತಿಯಿಂದ ಒಂದು ವೀಲ್ಚೇರ್ಅನ್ನು ಅಮ್ಮತ್ತಿ ಆಟೋ ಮಾಲೀಕರ ಮತ್ತು ಚಾಲಕರ ಸಂಘಕ್ಕೆ ಹಸ್ತಾಂತರ ಮಾಡಲಾಯಿತು. ಸಂಘದ ಸದಸ್ಯರಿಗೆ ಮತ್ತು ಕುಟುಂಬಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹೆರಾಲ್ಡ್ ಮಸ್ಕರೇನ್ಹಸ್, ಎಂ.ಎA. ಲಿಜೇಶ್, ಅಮ್ಮತ್ತಿ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಅಭಿಜಿತ್, ಉಪಾಧ್ಯಕ್ಷ ಶ್ರೀಜು, ಕಾರ್ಯದರ್ಶಿ ಶಿವರಾಜು, ಸಹಕಾರ್ಯದರ್ಶಿ ಇಬ್ರಾಹಿಂ, ಸಂಘದ ನಿರ್ದೇಶಕರು, ಸದಸ್ಯರು ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು. ಅಭಿಜಿತ್ ಕಾರ್ಯಕ್ರಮ ನಿರೂಪಿಸಿದರು.