ಮಡಿಕೇರಿ, ನ. ೧೮: ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿಯ ೨೦೨೬-೨೯ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ ಜಿಲ್ಲಾ ಅಧ್ಯಕ್ಷ ಶುಹೈಬ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಸ್ತ ಕೇಂದ್ರ ಮುಷಾವರ ಸದಸ್ಯ ಎಂ.ಎA. ಅಬ್ದುಲ್ಲಾ ಫೈಝಿ ಉಸ್ತಾದ್ ಅವರು ಎಸ್.ಕೆ.ಎಸ್.ಎಸ್.ಎಫ್ ಕುರಿತು ಮಾತನಾಡಿ, ಎಲ್ಲಾ ಸಮಸ್ತ ಕಾರ್ಯಕರ್ತರು ಅಹ್ಲುಸ್ಸುನ್ನತ್ ವಲ್ ಜಮಾಅತ್ನ ಆದರ್ಶದಡಿಯಲ್ಲಿ ಜೀವಿಸಬೇಕು ಹಾಗೂ ಸುನ್ನಿ ಆದರ್ಶದ ವಿರುದ್ಧ ನಡೆಯುವವರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿ ಸಭೆಯನ್ನು ಉದ್ಘಾಟಿಸಿದರು.
ಎಸ್.ಕೆ.ಎಸ್.ಎಸ್.ಎಫ್ ಸಮುದಾಯಕ್ಕೆ ನೀಡಿದ ಕೊಡುಗೆ ಕುರಿತು ಜಿಲ್ಲಾ ಅಧ್ಯಕ್ಷ ಶುಹೈಬ್ ಫೈಝಿ ಮಾತನಾಡಿದರು. ಸಮಸ್ತ ವಿದ್ಯಾಭ್ಯಾಸ ಸಂಸ್ಥೆಗಳ ಉಪಯೋಗವನ್ನು ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಸದುಪಯೋಗಪಡಿಸಿಕೊಳ್ಳಬೇಕೆಂದು ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಮನವಿ ಮಾಡಿದರು.
ಸಭೆಯಲ್ಲಿ ಆರಿಫ್ ಫೈಝಿ, ಇಕ್ಬಾಲ್ ಮೌಲವಿ, ಸಿದ್ದೀಕ್ ಹಾಜಿ, ಹಕೀಮ್ ಹಿಶಾಮಿ ಮತ್ತಿತರರು ಉಪಸ್ಥಿತರಿದ್ದರು. ಎಸ್ಕೆಎಸ್ಎಸ್ಎಫ್ ಕೇಂದ್ರ ಸಮಿತಿ ಸದಸ್ಯ ಫಾರೂಕ್ ಫೈಝಿ ಅವರು ನೂತನ ಸಮಿತಿ ಆಯ್ಕೆಗೆ ನೇತೃತ್ವ ವಹಿಸಿದ್ದರು.
ಅಧ್ಯಕ್ಷರಾಗಿ ರಫೀಕ್ ಬಾಖವಿ ಕೊಡಗರಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಮುಸ್ಲಿಯಾರ್, ಖಜಾಂಚಿಯಾಗಿ ಶಮೀರ್ ನೆಲ್ಲಿಹುದಿಕೇರಿ, ವರ್ಕಿಂಗ್ ಸೆಕ್ರೆಟರಿಯಾಗಿ ಅಬ್ದುಲ್ ಹಕೀಂ ಹಿಶಾಮಿ ವೀರಾಜಪೇಟೆ,, ಉಪಾಧ್ಯಕ್ಷರಾಗಿ ಹನೀಫ್ ಫೈಝಿ ಎಡಪಾಲ, ಜಂಶೀರ್ (ಇಣ್ಣಿ) ನೆಲ್ಲಿಹುದಿಕೇರಿ, ಆಸಿಫ್ ಅಝ್ಹರಿ, ರಶೀದ್ ದಾರಿಮಿ ಚೋಕಂಡಳ್ಳಿ, ಹಮೀದ್ ಕೆ.ಎ ಕುಶಾಲನಗರ, ಜೊತೆ ಕಾರ್ಯದರ್ಶಿಗಳಾಗಿ ಮನ್ಸೂರ್ ಅಲಿ ಹಸನಿ, ಅಯಾಸ್ ಸಿದ್ದಾಪುರ, ಹನೀಫ್ ಫೈಝಿ ಗುಂಡಿಗೆರೆ. ಸೆಕ್ರೆಟರಿಯೇಟ್ ಸದಸ್ಯರಾಗಿ ಶುಹೈಬ್ ಫೈಝಿ ಕೊಳಕೇರಿ, ಅಬೂಬಕರ್ ಸಿದ್ದೀಕ್ ಹಾಜಿ, ಎಕ್ಸಿಕ್ಯೂಟಿವ್ ಸದಸ್ಯರಾಗಿ ಜಂಶೀರ್ ವಾಫಿ, ಅಶ್ರಫ್ ಫೈಝಿ ಗುಂಡಿಗೆರೆ, ಅಹ್ಮದ್ ಮುಸ್ಲಿಯಾರ್, ಶರಫು ಸಿದ್ದಾಪುರ, ಶೌಕತ್ ಒಂಟಿಯAಗಡಿ, ನೌಶಾದ್ ದಾರಿಮಿ, ಇಸ್ಮಾಯಿಲ್ ನೆಲ್ಲಿಹುದಿಕೇರಿ, ಸಹದ್ ಫೈಝಿ, ಸಲಾಂ ಅರಕ್ಕಾಡ್, ಜುನೈದ್ ಕಡಂಗ, ಯಹ್ಯಾ ಕೊಡ್ಲಿಪೇಟೆ, ಹುಸೈನ್ ಫೈಝಿ ಬಜಗುಂಡಿ, ಆರ್ಗನೈಸಿಂಗ್ ಸೆಕ್ರೆಟರಿಗಳಾಗಿ ಶಾಜಹಾನ್, ಶರಫುದ್ದೀನ್ ವೀರಾಜಪೇಟೆ, ಶರೀಫ್ ಎಂ.ಐ. ಆಯ್ಕೆ ಆದರು. ಜಿಲ್ಲಾ ಕಾರ್ಯದರ್ಶಿ ರಫೀಕ್ ಬಾಖವಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಕರೀಂ ಮುಸ್ಲಿಯಾರ್ ವಂದಿಸಿದರು.