ಪಾಲಿಬೆಟ್ಟ, ನ. ೧೮: ಕಾಫಿ ತೋಟಗಳ ನಡುವೆ, ಮುಂಜಾನೆಯ ಮಂಜು ಆವೃತ ವಾತಾವರಣದಲ್ಲಿ ಪಕ್ಷಿಗಳ ಚಿಲಿಪಿಲಿಯ ಕಲರವದಲ್ಲಿ ಪ್ರಕೃತಿಯೊಂದಿಗೆ ಒಡಗೂಡುವ ಭಾವನೆಯು ಇತರ ವಸ್ತು ಸೃಷ್ಟಿತ ತಾತ್ಕಾಲಿಕ ಭಾವನೆಗಳಿಗಿಂತ ಶ್ರೇಷ್ಠವಾದದು ಎಂಬ ಪರಿಕಲ್ಪನೆಯಲ್ಲಿ ಪ್ರಕೃತಿಯೊಂದಿಗೆ ಒಡಗೂಡಿ ಅದರ ರಕ್ಷಣೆಗೆ ಪ್ರೇರಿತವಾಗಬೇಕೆಂಬ ಪ್ರಯತ್ನ 'ಕೂರ್ಗ್ ವೆಲ್ನೆಸ್ ಫೌಂಡೇಶನ್' ಆಯೋಜಿತ ವಿಶ್ವದಲ್ಲಿಯೇ ಏಕೈಕ ಬರಿಗಾಲು ಮ್ಯಾರಥಾನ್ ಮೂಲಕ ವರ್ಷಂಪ್ರತಿ ಆಗುತ್ತಿದೆ.
ಅದೇ ರೀತಿ ಈ ಬಾರಿಯೂ ಮ್ಯಾರಥಾನ್ನ ೧೦ನೇ ಆವೃತ್ತಿಗೆ ಪಾಲಿಬೆಟ್ಟದ ಟಾಟಾ ಕಾಫಿ ಸ್ಪೋರ್ಟ್ಸ್ ಮೈದಾನದಲ್ಲಿ ಡಿಸೆಂಬರ್ ೬ ರಂದು ಚಾಲನೆ ದೊರಕಲಿದೆ. ಪ್ರತಿ ವರ್ಷ ಜಿಲ್ಲೆ ಹಾಗೂ ಹೊರಜಿಲ್ಲೆ, ಹೊರರಾಜ್ಯ ಮಾತ್ರವಲ್ಲದೆ ಹೊರ ದೇಶಗಳಿಂದಲೂ ಕ್ರೀಡಾಪ್ರೇಮಿಗಳು ವಿಶ್ವದ ಏಕೈಕ ಬರಿಗಾಲು ಮ್ಯಾರಥಾನ್ನಲ್ಲಿ ಭಾಗವಹಿಸುತ್ತಾರೆ.
ಆಕರ್ಷಕ ಬಹುಮಾನ
ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಮ್ಯಾರಥಾನ್ ಆಯೋಜಿಸಲಾಗಿದೆ. ಇಬ್ಬರಿಗೂ ಸಮಾನ ನಗದು ಬಹುಮಾನ ನೀಡಲಾಗುವುದು. ಇದರೊಂದಿಗೆ ಹಿರಿಯ ನಾಗರಿಕರ ವಿಭಾಗವೂ ಈ ಬಾರಿಯ ಹೊಸ ಆಕರ್ಷಣೆಯಾಗಿದೆ.
ಮ್ಯಾರಥಾನ್ (೪೨ಕಿ.ಮೀ): ಮೊದಲ ಬಹುಮಾನ ರೂ.೩೩,೦೦೦, ೨ನೇ ಬಹುಮಾನ ರೂ.೧೫,೦೦೦.
ಹಾಫ್ ಮ್ಯಾರಥಾನ್ (೨೧ ಕಿ.ಮೀ): ಮೊದಲ ಬಹುಮಾನ ರೂ.೧೩,೦೦೦, ೨ನೇ ಬಹುಮಾನ ರೂ.೮,೦೦೦.
೧೦ ಕಿ.ಮೀ: ಮೊದಲ ಬಹುಮಾನ ರೂ.೬,೦೦೦, ೨ನೇ ಬಹುಮಾನ ರೂ.೪,೦೦೦.
೫ ಕಿ.ಮೀ ಓಟ: ರೂ.೩,೫೦೦ ಹಾಗೂ ೨ನೇ ಬಹುಮಾನ ರೂ. ೨,೦೦೦. ಹಿರಿಯ ನಾಗರಿಕರ ವಿಭಾಗ(೨೧ ಕಿ.ಮೀ): ಪ್ರಥಮ ರೂ.೧೦,೦೦೦, ಹಿರಿಯ ನಾಗರಿಕರ ವಿಭಾಗ (೧೦ ಕಿ.ಮೀ): ಪ್ರಥಮ ರೂ.೫,೦೦೦ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಎಲ್ಲಾ ವಿಭಾಗಗಳಲ್ಲಿಯೂ ಪ್ರತ್ಯೇಕವಾಗಿ ಪುರುಷ-ಮಹಿಳೆಯರಿಗೆ ಬಹುಮಾನ ಇರಲಿದೆ.
ಬರಿಗಾಲು ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವವರು hಣಣಠಿs://ಡಿಚಿಛಿesಡಿegisಣಡಿಚಿಣioಟಿs.ಛಿom/eveಟಿಣ/೪೧೪?uಣm_souಡಿಛಿe=ಕಿಖ&uಣm_meಜium=ಕಿಖ&uಣm_ಛಿಚಿmಠಿಚಿigಟಿ=ಕಿಖ&uಣm_iಜ=೪೧೪ ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೮೪೫೫೫೯೪೫೨ ಸಂಪರ್ಕಿಸಬಹುದಾಗಿದೆ.