ಕುಶಾಲನಗರ, ನ. ೧೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಿವಾಸಿಗಳು ಕಾಲ್ನಡಿಗೆ ಮೂಲಕ ತೆರಳಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜು ನೇತೃತ್ವದಲ್ಲಿ ಸುಂದರನಗರದ ಕೋರೆ ರಸ್ತೆ ವ್ಯಾಪ್ತಿಯ ಹಕ್ಕುಪತ್ರ ವಂಚಿತ ನಿವಾಸಿಗಳು ಕುಶಾಲನಗರ ಪ್ರವಾಸಿ ಮಂದಿರದ ಬಳಿಯಿಂದ ಕುಶಾಲನಗರ ಮುಖ್ಯರಸ್ತೆ ಮೂಲಕ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜು, ಸುಂದರನಗರದ ಕೋರೆ ರಸ್ತೆಯ ಸುಮಾರು ೫೦ ರಿಂದ ೬೦ ಕುಟುಂಬಗಳು ಹಕ್ಕುಪತ್ರದಿಂದ ವಂಚಿತವಾಗಿವೆ. ಶೀಘ್ರದಲ್ಲೇ ಹಕ್ಕುಪತ್ರ ಒದಗಿಸಲು ಸಂಬAಧಿಸಿದವರು ಕ್ರಮವಹಿಸಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭ ಗ್ರಾಮದ ನಿವಾಸಿ ಡಿಎಸ್ಎಸ್ ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಸೌಮ್ಯ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಗಂಗಾಧರ ಸೇರಿದಂತೆ ನಿವಾಸಿಗಳಾದ ಶಶಿಕಲಾ, ವಿಜಯಕುಮಾರ್, ಮುತ್ತು, ಗುರು, ಗಣೇಶ್, ವಳ್ಳಿ ಮಹೇಂದ್ರ ಮತ್ತಿತರರು ಇದ್ದರು.