ಮಡಿಕೇರಿ, ನ. ೧೮: ಕೊಡಗು ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾಮಟ್ಟದ ೧೪ ವರ್ಷದೊಳಗಿನ ಬಾಲಕಿಯರ ೨೦೨೬-೨೭ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚೆಟ್ಟಿಮಾನಿಯ ಸಾಂದೀ ಪನಿ ವಿದ್ಯಾಪೀಠದ ಏಳನೇ ತರಗತಿಯ ವಿದ್ಯಾರ್ಥಿನಿ .ಹೆಚ್.ಎಮ್. ಜಿತಿಕಾ ೪೦೦ ಮೀಟರ್ ಓಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈಕೆ ಪದಕಲ್ಲು ಗ್ರಾಮದ ಹೆಚ್.ಎ. ಮಂಜು ಹಾಗೂ ಹೆಚ್.ಎಂ. ನಮಿತ ದಂಪತಿಯ ಪುತ್ರಿಯಾಗಿದ್ದಾರೆ.