ಚಿತ್ರ, ವರದಿ : ವಾಸು ಎ.ಎನ್.
ಸಿದ್ದಾಪುರ, ನ. ೧೮: ಸ್ವಾತಂತ್ರö್ಯ ಬಂದು ೮೦ ವರ್ಷಗಳು ಆದರೂ ಕೂಡ ಬುಡಕಟ್ಟು ಸಮುದಾಯದ ಜನರ ಬದುಕು ಮಾತ್ರ ಇನ್ನು ಸುಧಾರಿಸಿಲ್ಲ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಕಾಡಿನ ಮಧ್ಯೆ ಗುಡಿಸಲುಗಳನ್ನು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿರುವ ಪರಿಸ್ಥಿತಿ ಜಿಲ್ಲೆಯ ಶ್ರೀಮಂಗಲ ಹೋಬಳಿಯ ಬೀರುಗ ಚೆಪ್ಪ್ಪುಡಿಕೊಲ್ಲಿಯಲ್ಲಿದೆ.
ಈ ಭಾಗದಲ್ಲಿ ಸುಮಾರು ೫೦ ಕುಟುಂಬ ಗಳು ಕುಡಿಯುವ ನೀರು, ರಸ್ತೆ, ವಿದ್ಯುತ್, ಸಂಪರ್ಕ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಪರದಾಡುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾದವರನ್ನು ತುರ್ತಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕಾದರೆ ಹರಸಾಹಸ ಪಡುವಂತ ದುಸ್ಥಿತಿಯಾಗಿದೆ. ಕಾಡಾನೆ ಹಾಗೂ ಕಾಡು ಪ್ರಾಣಿಗಳ ಭೀತಿಯಲ್ಲಿ ಬದುಕುತ್ತಿರುವ ಈ ಕಡುಬಡ ಕುಟುಂಬಗಳ ಸಂಕಷ್ಟಕ್ಕೆ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂದು ಇಲ್ಲಿ ವಾಸಮಾಡುವ ನಿವಾಸಿಗಳು ಆರೋಪಿಸಿದ್ದಾರೆ. ಒಂದೆಡೆ ಗಿರಿಜನರ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಾಂತರ ರೂಪಾಯಿಗಳು ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಗಿರಿಜನ ಕುಟುಂಬಗಳಿಗೆ ಇದು ಸಿಗದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಸುಮಾರು ೫೦ ಕುಟುಂಬಗಳು ವಾಸವಿರುವ ಈ ಜಾಗದಲ್ಲಿ ಬಹುತೇಕರು ಈ ಹಿಂದಿನಿAದಲೂ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಾ ತೋಟದ ಲೈನ್ಮನೆಗಳಲ್ಲಿ ವಾಸ ಮಾಡಿಕೊಂಡಿದ್ದರು. ಈಗಲೂ ಕೂಡ ತೋಟಗಳಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಇದೀಗ ಬಹುತೇಕರು ತೋಟದ ಲೈನ್ ಮನೆಗಳಿಂದ ಹೊರಬಂದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಸ್ವಂತ ಮನೆ ನಿರ್ಮಿಸಿಕೊಂಡು ತಮ್ಮ ಸಂಸಾರದೊAದಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಜಾಗ ಹಾಗೂ ಮೂಲಸೌಕರ್ಯಗಳಿಗಾಗಿ ಸರ್ಕಾರಕ್ಕೆ ಸೇರಿದ ೫ ಎಕರೆ ಜಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯಿಂದ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದಾರೆ.
ಬೀರುಗದ ಚೆಪ್ಪುಡಿಕೊಲ್ಲಿ ಭಾಗದಲ್ಲಿ ನಿರ್ಮಿಸಿಕೊಂಡಿರುವ ಗಿರಿಜನರ ಗುಡಿಸಲುಗಳಿಗೆ ಮೂಲ ಸೌಕರ್ಯವನ್ನು ಒದಗಿಸಿಕೊಡುವಂತೆ ನಿವಾಸಿಗಳು ಸಂಬAಧಪಟ್ಟ ಗ್ರಾಮ ಪಂಚಾಯಿತಿಗೆ ಅರ್ಜಿಗಳನ್ನು ನೀಡಿದ್ದಾರೆ. ಆದರೆ ಈವರೆಗೂ ಈ ನಿವಾಸಿಗಳಿಗೆ ಕುಡಿಯುವ ನೀರು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರುವುದಿಲ್ಲ ಎಂದು ಗಿರಿಜನರು ದೂರಿದ್ದಾರೆ. ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಸುಮಾರು ಕಿಲೋಮೀಟರ್ಗಳಷ್ಟು ದೂರಕ್ಕೆ ತೆರಳಬೇಕಾದಂತ ದುಸ್ಥಿತಿ ಆಗಿದೆ. ಇವರು ಅಗತ್ಯ ವಸ್ತುಗಳನ್ನು ಖರೀದಿಸಲು ಸಮೀಪದ ಊರಾದ ಟಿ.ಶೆಟ್ಟಿಗೇರಿಗೆ ತೆರಳಬೇಕಾದರೆ ಈ ಭಾಗದಿಂದ ಬಸ್ಸು ಹಾಗೂ ವಾಹನಗಳ ಸಂಪರ್ಕವಿಲ್ಲದೆ ನಡೆದುಕೊಂಡು ಹೋಗುವಂತ ಪರಿಸ್ಥಿತಿ ಆಗಿದೆ.
ಸುಮಾರು ೫೦ ಕುಟುಂಬಗಳ ಬದುಕು ಅತಂತ್ರವಾಗಿದ್ದು, ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ. ಇಲ್ಲಿನ ಮಕ್ಕಳು ಕೂಡ ಭಯದಿಂದಲೇ ಶಾಲೆಗಳಿಗೆ ತೆರಳುವಂತಹ ಆತಂಕ ಮನೆ ಮಾಡಿದೆ. ಸರ್ವೇ ನಂಬರ್ ೧ರ ವ್ಯಾಪ್ತಿಯ ೫ ಎಕರೆ ಸರ್ಕಾರಿ ಜಾಗ ಪಹಣಿ ಪತ್ರದಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹೆಸರಿನಲ್ಲಿರುವ ಈ ಜಾಗದಲ್ಲಿ ಗಿರಿಜನರು ಗುಡಿಸಲು ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಐ.ಟಿ.ಡಿ.ಪಿ. ಇಲಾಖೆಯಿಂದ ಯಾವುದೇ ಸೌಲಭ್ಯ ಇಲ್ಲ
ಗಿರಿಜನರ ಅಭಿವೃದ್ಧಿಗಾಗಿ ಇರುವ ಐ.ಟಿ.ಡಿ.ಪಿ. ಇಲಾಖೆ ವತಿಯಿಂದ ಹಾಗೂ ಅಂಗನವಾಡಿ ಕೇಂದ್ರಗಳಿAದ ನೀಡುತ್ತಿರುವ ಪೌಷ್ಟಿಕ ಆಹಾರ ಇನ್ನಿತರ ಸೌಲಭ್ಯಗಳು ಮರೀಚಿಕೆಯಾಗಿದೆ. ಇಲ್ಲಿನ ನಿವಾಸಿಗಳು ಪಡಿತರ ಚೀಟಿ ಹಾಗೂ ಮೂಲ ದಾಖಲಾತಿಗಳನ್ನು ಹೊಂದಿಕೊAಡಿದ್ದು ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಇಲ್ಲಿನ ನಿವಾಸಿಗಳು ಚುನಾವಣೆಯ ಸಂದರ್ಭ ಮತ ಕೂಡ ಚಲಾಯಿಸುತ್ತಿದ್ದಾರೆ. ಆದರೆ ಇವರಿಗೆ ಸಂಬAಧಪಟ್ಟ ಇಲಾಖೆಗಳು ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇದಲ್ಲದೆ ಸಂಚಾರಿ ವೈದ್ಯಕೀಯ ಸೌಲಭ್ಯಗಳು ಕೂಡ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದೆ. ಕಾಡು ಪ್ರಾಣಿಗಳ ಮಧ್ಯೆ ಬದುಕು ಸಾಗಿಸುತ್ತಿರುವ ಈ ಮಂದಿಗೆ ಸಂಬAಧಪಟ್ಟ ಇಲಾಖೆಗಳು ಇವರ ಸಮಸ್ಯೆಗಳಿಗೆ ಸ್ಪಂದಿಸಬೇಕೆAದು ಒತ್ತಾಯಿಸಿದ್ದಾರೆ.
ಚೆಪ್ಪುಡಿಕೊಲ್ಲಿ ಭಾಗದಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಜೀವನ ಮಾಡುತ್ತಿರುವ ಗಿರಿಜನರು ಕೆಲಸಕ್ಕಾಗಿ ಸುತ್ತಮುತ್ತಲಿನ ಕಾಫಿ ತೋಟಗಳಿಗೆ ತೆರಳುತ್ತಾರೆ. ಇವರುಗಳು ತಮ್ಮ ಮೊಬೈಲುಗಳನ್ನು ಬಳಸಲು ಅದನ್ನು ಚಾರ್ಜ್ ಮಾಡಲು ವಿದ್ಯುತ್ ಸಂಪರ್ಕ ಇಲ್ಲದ ಹಿನ್ನೆಲೆಯಲ್ಲಿ ತಾವು ಕೆಲಸಕ್ಕೆ ತೆರಳುವ ಮಾಲೀಕರ ಮನೆಗಳಲ್ಲಿ ಅಥವಾ ಶೆಡ್ನಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. ನಾವು ವಾಸ ಮಾಡುತ್ತಿರುವ ಜಾಗದಲ್ಲಿ ಸೋಲಾರ್ ಕೂಡ ಇಲ್ಲದೆ ಸಂಕಷ್ಟದಲ್ಲಿ ಇದ್ದೇವೆ ಪ್ರಪಂಚ ನಾಗಾಲೋಟದಲ್ಲಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ಒದಗಿರುವುದು ದುರದೃಷ್ಟಕರ ಎಂದು ಸ್ಥಳೀಯ ನಿವಾಸಿ ಗಣೇಶ್ ತಿಳಿಸಿದರು.
ಶಾಶ್ವತ ಸೂರು ಒದಗಿಸಲು ಒತ್ತಾಯ
ಚೆಪ್ಪುಡಿಕೊಲ್ಲಿ ಭಾಗದ ಸರಕಾರಿ ಜಾಗದಲ್ಲಿ ವಾಸ ಮಾಡಿಕೊಂಡಿರುವ ಸುಮಾರು ೫೦ ಗಿರಿಜನ ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಕೂಡಲೇ ಸಂಬAಧಪಟ್ಟ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಲ್ಪಿಸಿಕೊಡಬೇಕು. ಮೂಲಭೂತ ಸೌಕರ್ಯದಿಂದ ವಂಚಿತರಾಗುವ ಕುಟುಂಬಕ್ಕೆ ಸಂಬAಧಪಟ್ಟ ಐಟಿಡಿಪಿ ಇಲಾಖೆಯವರು ಕೂಡ ಸ್ಪಂದಿಸಿ ಅಗತ್ಯ ಸೌಲಭ್ಯಗಳನ್ನು ಹಾಗೂ ಶಾಶ್ವತ ಸೂರು ಕಲ್ಪಿಸಿ ಕೊಡಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಹೆಚ್.ಎಸ್. ಗಣೇಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.