ಮಡಿಕೇರಿ, ನ. ೧೮: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ತಾ. ೨೦ ರಂದು ಮಡಿಕೇರಿಯ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂದು ಬೆಳಿಗ್ಗೆ ೧೧ ಗಂಟೆಗೆ ಆಯೋಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಉದ್ಘಾಟಿಸಲಿದ್ದು, ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಆಶಯ ನುಡಿಗಳನ್ನಾಡಲಿದ್ದಾರೆ. ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಗುರುತ್ವದ ಹಿರಿಮೆ ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಪದವಿ ಪೂರ್ವ ಶೀಕ್ಷಣ ಇಲಾಖೆ ಉಪನಿರ್ದೇಶಕ ಎ. ಗಣಪತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಯೋಗೇಶ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹೆಚ್.ಎಸ್. ಚೇತನ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್. ಪ್ರಸನ್ನ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಜಿ. ಕುಮಾರ್, ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗಪ್ಪ ಯಾಲಕ್ಕಿಕಟ್ಟೆ ಭಾಗವಹಿಸಲಿದ್ದು, ಶಿಕ್ಷಕರ ಸಂಘದ ಪ್ರಮುಖರ ಗೌರವ ಉಪಸ್ಥಿತಿ ಇರಲಿದೆ ಎಂದು ಹೇಳಿದರು.

೪೫ ಶಿಕ್ಷಕರಿಗೆ ಪ್ರಶಸ್ತಿ

೫ ತಾಲೂಕಿನ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಲ್ಲಾ ವಿಭಾಗದಲ್ಲಿ ತಲಾ ಮೂವರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಆಯಾ ತಾಲೂಕು ಘಟಕಗಳು ಶಿಕ್ಷಕರ ಸಂಘದೊAದಿಗೆ ಸಮಾಲೋಚಿಸಿ ಹೆಸರನ್ನು ಅಂತಿಮಗೊಳಿಸಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಲಾಯಿತು ಎಂದು ಕೇಶವ ಕಾಮತ್ ಮಾಹಿತಿ ನೀಡಿದರು.

ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಪ್ರಾಥಮಿಕ ಶಾಲಾ ವಿಭಾಗದಿಂದ ತೋಮರ ಸರಕಾರಿ ಶಾಲೆಯ ವಸಂತಿ, ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ಅಂತೋಣಿ ರಾಜೇಂದ್ರ ಪ್ರಸಾದ್, ರೋಜಿ ವಿನ್ನಿ ಡೇಸ, ಕುಟ್ಟ ಸರಕಾರಿ ಪ್ರಾಥಮಿಕ ಶಾಲೆಯ ಶಕುಂತಲಾ, ವೀರಾಜಪೇಟೆ ಕೂರ್ಗ್ ವ್ಯಾಲಿ ಸ್ಕೂಲ್, ಸುಮಾ ಚಿತ್ರ ಬಾನು, ಗೋಣಿಕೊಪ್ಪಲು ಲಯನ್ಸ್ ಶಾಲೆಯ ತಂಗಮ್ಮ ಪಿ.ಡಿ, ಮಡಿಕೇರಿ ತಾಲೂಕು ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಬೆಟ್ಟತ್ತೂರು ಪ್ರಾಥಮಿಕ ಶಾಲೆ ಚಂದ್ರು ಎಸ್.ಜೆ, ಮಡಿಕೇರಿ ಸಂತ ಮೈಕಲರ ಶಾಲೆಯ ಸಿಸ್ಟರ್ ಮೇರಿ ಸಿಸಿಲ್ಲಾ, ಸಂತ ಜೋಸೆಫರ ಶಾಲೆಯ ಜಾನ್ಸಿ. ಟಿ ಕ್ರೆಸಾ, ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕಿನಿಂದ ಕೊಡ್ಲಿಪೇಟೆ ಉರ್ದು ಶಾಲೆಯ ಮುಜಾಮಿಲ್ ಅಕ್ತರ್, ಮಾದಾಪುರದ ಎಸ್.ಜೆ.ಎಂ ಆಂಗ್ಲ ಮಾಧ್ಯಮ ಶಾಲೆಯ ಪ್ರಿಯಾ ಬಿ.ವಿ. ಸೋಮವಾರಪೇಟೆಯ ಓ.ಎಲ್.ವಿ ಸ್ಕೂಲ್‌ನ ರಾಣಿ ಎಸ್, ಮಣಜೂರು ಪ್ರಾಥಮಿಕ ಶಾಲೆಯ ಬಿ.ವಿ. ರಾಣಿ, ಕುಶಾಲನಗರ ಜ್ಞಾನಭಾರತಿ ಅನುದಾನಿತ ಶಾಲೆಯ ರೀಟಾ ಪಿ.ಜೆ, ಕೂಡಿಗೆ , ಅಂಜೆಲಾ ವಿದ್ಯಾನಿಕೇತನದ ರೇಖಾ. ಸಿ, ಆಯ್ಕೆಯಾಗಿದ್ದಾರೆ.

ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಪ್ರೌಢಶಾಲೆ ವಿಭಾಗದಿಂದ ಬಿಳುಗುಂದ ಸರ್ಕಾರಿ ಪ್ರೌಢಶಾಲೆಯ ಚೊಕೀರ ಅನಿತಾ, ದೇವಣಗೇರಿ ಪ್ರೌಢಶಾಲೆಯ ಲೋಕೇಶ್ ಎಚ್.ಡಿ., ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ಮುತ್ತಣ್ಣ ಎಂ.ಯು, ಗೋಣಿಕೊಪ್ಪಲು ಸರಕಾರಿ ಪ್ರೌಢಶಾಲೆಯ ರೇವತಿ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಅಯ್ಯಪ್ಪ ಪಿ.ಅರ್, ಬಾಳೆಲೆ ವಿಜಯಲಕ್ಷಿö್ಮÃ ಪ್ರೌಢಶಾಲೆಯ ಪಡಿಞರಂಡ ಪ್ರಭು ಕುಮಾರ್, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಸಂಗನಗೌಡ ಪಾಟೀಲ್, ಮಡಿಕೇರಿ ತಾಲೂಕು ಪ್ರೌಢಶಾಲೆ ವಿಭಾಗದಿಂದ ಕಡಗದಾಳು ಸರಕಾರಿ ಪ್ರೌಢಶಾಲೆಯ ಭಾರತಿ, ಚೇರಂಬಾಣೆ ಅನುದಾನಿತ ಪ್ರೌಢಶಾಲೆಯ ಪರಮೇಶ್ ಎಸ್.ಪಿ, ನಾಪೋಕ್ಲು ಅಂಕುರ್ ಪಬ್ಲಿಕ್ ಸ್ಕೂಲ್‌ನ ಕೇಟೋಳಿರ ರತ್ನ ಚರ್ಮಣ, ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ವಿಭಾಗದಲ್ಲಿ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ತೇಜಾಕ್ಷಿ ಎ. ಬಿ., ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆ ಸಂದೇಶ್ ಕೆ.ಎಸ್., ಮಸಗೋಡು ಚೆನ್ನಮ್ಮ ಆಂಗ್ಲ ಮಾಧ್ಯಮ ಶಾಲೆಯ ಕಾಂಚನ ಕೆ.ಎಸ್, ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಲತಾ ಎಸ್.ಪಿ. ಶಿರಂಗಾಲ ಕೆ.ಪಿ.ಎಸ್,ಶಾಲೆಯ ಶೇಖರ್ ಹೆಚ್.ಆರ್, ಕೂಡಿಗೆ ಸದ್ಗರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ಪುಷ್ಪಾ. ಎನ್. ಭಾಜನರಾಗಿದ್ದಾರೆ.

ವೀರಾಜಪೇಟೆ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶೈನ ಕೆ.ಕೆ, ವೀರಾಜಪೇಟೆ ಸಂತ ಅನ್ನಮ್ಮ ಪ.ಪೂ ಕಾಲೇಜು ರೆ.ಫಾ. ಮದಲೈ ಮುತ್ತು, ವೀರಾಜಪೇಟೆ ಕಾವೇರಿ ಪ.ಪೂ ಕಾಲೇಜಿನ ಎಂ.ಕೆ. ಪದ್ಮ, ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಲೋಕೇಶ್. ಪಿ.ಎ. ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಕೆ.ಸಿ.ಚಂದ್ರಶೇಖರ್, ಉಪನ್ಯಾಸಕರು, ಗೋಣಿಕೊಪ್ಪಲು ವಿದ್ಯಾನಿಕೇತÀÀನ ಪ.ಪೂ ಕಾಲೇಜಿನ ಎಸ್ ರಘುನಾಥ್, ಮಡಿಕೇರಿ ತಾಲೂಕು ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಕ್ತಕೇಶಿ ಪಿ.ಆರ್., ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ವಾಣಿ, ಮಡಿಕೇರಿ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನ ಎನ್.ಎಸ್, ಸಂಧ್ಯಾ,

ಸೋಮವಾರಪೇಟೆ ತಾಲೂಕು ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಆಲೂರು ಸಿದ್ದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಚಂದ್ರಶೇಖರ ಕೆ.ಎಂ, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ ಸೋಮಶೇಖರಪ್ಪ, ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪದವಿ ಪೂರ್ವ ಕಾಲೇಜಿನ ಸರ್ಪರಾಜ್ ಅಹಮ್ಮದ್, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿ. ರವೀಶ್, ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಜಯಕುಮಾರ್, ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಮಂಜುನಾಥ ಸಿ, ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮ ಜಿಲ್ಲಾಮಟ್ಟದ ಕೊನೆ ಕಾರ್ಯಕ್ರಮವಾಗಿದೆ. ೨೩ಕ್ಕೆ ಆಡಳಿತ ಮಂಡಳಿಯ ಅಧಿಕಾರ ಕೊನೆಗೊಳ್ಳಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ನಿರ್ದೇಶಕ ಹೆಚ್.ಎಸ್. ಪ್ರೇಮ್ ಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಾರ್ಯದರ್ಶಿ ಲಕ್ಸು ಸೋಮಣ್ಣ ಹಾಜರಿದ್ದರು.