ಮಡಿಕೇರಿ, ನ. ೧೭: ಶ್ರೀಮಂಗಲ ಮಹಾಗಣಪತಿ ದೇವಸ್ಥಾನದಲ್ಲಿ ಜ್ಯೋತಿಷಿ ಮಾಧವನ್ ಪುದುವಾಳ್ ಅವರಿಂದ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಯಿತು. ಸದ್ಯದಲ್ಲೇ ನೂತನ ದೇವಾಲಯ ಕೆಲಸ ಪ್ರಾರಂಭವಾಗಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕಿದೆ. ಸುಮಾರು ೧ ಕೋಟಿ ವೆಚ್ಚದಲ್ಲಿ ಭವ್ಯ ಗಣಪತಿ ಕ್ಷೇತ್ರ ಇಲ್ಲಿ ಬರಲಿದ್ದು, ದಾನಿಗಳ ಸಹಕಾರ ಪಡೆಯಲಾಗು ವುದು ಎಂದು ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್ ಅಪ್ಪಯ್ಯ ಈ ಸಂದರ್ಭ ಹೇಳಿದರು.
ಉಪಾಧ್ಯಕ್ಷ ಪೆಮ್ಮಣ ಮಾಡ ನಿತಿನ್, ಕಾರ್ಯದರ್ಶಿ ಎಂ ಟಿ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಎನ್ ಕೆ ಲಕ್ಷö್ಮಣ, ನಿರ್ದೇಶಕರಾದ ಎಂ ಕೆ ಉದಯ ಕುಮಾರ್, ರಾಜ, ಜಯಕಾಔತ್, ಹರೀಶ್, ಗಿರೀಶ್, ಅಭಿನ್ ಕುಮಾರ್, ಮಾಧಿರ ಸುಧಿ, ಕೆ ಎಸ್ ತಿಮ್ಮಯ್ಯ, ಸಾರ್ವಜನಿಕರಾದ ನಂದಿತಾ ಕಾರ್ಯಪ್ಪ ಸೀಮಾ ಮಚ್ಚಾಮಾಡ ಬೇಬಿ, ಶ್ವೇತ, ಸಿ ಎನ್ ಪ್ರಭು ಪ್ರಸಾದ್ ಇದ್ದರು.