ನಾಪೋಕ್ಲು, ನ. ೧೭ : ಶ್ರೀ ನಾರಾಯಣ ಧರ್ಮ ಪರಿಪಾಲನಾ (ಎಸ್.ಎನ್.ಡಿ.ಟಿ) ಯೋಗಂ, ನಾಪೋಕ್ಲು ಶಾಖೆ ವತಿಯಿಂದ ೧೭೨ನೇ ಶ್ರೀ ನಾರಾಯಣ ಗುರು ಜಯಂತಿ ಮತ್ತು ಕ್ರೀಡಾಕೂಟ ತಾ. ೨೫ ರಿಂದ ೨೯ ರವರೆಗೆ ವೈವಿಧ್ಯ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ.
ಇಲ್ಲಿಯ ಹಳೆ ತಾಲೂಕು ಜಿ.ಎಂ.ಪಿ. ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವ ಕ್ರೀಡಾಕೂಟ ದಲ್ಲಿ ಗ್ರಾಮಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾವಳಿಯು ತಾ. ೨೫ ಮತ್ತು ೨೬ ರಂದು ನಡೆಯಲಿದ್ದು, ವಿಜೇತರಿಗೆ ಪ್ರಥಮ ಬಹುಮಾನ ರೂ. ೨೦,೦೦೦ ಹಾಗೂ ದ್ವಿತೀಯ ಬಹುಮಾನ ರೂ. ೧೦,೦೦೦ ನಿಗದಿಪಡಿಸ ಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ. ೯೩೪೨೪೩೪೬೮೨ ಸಂಪರ್ಕಿಸಬಹುದಾಗಿದೆ.
ಜಿಲ್ಲಾಮಟ್ಟದ ಪುರುಷರ ಹಗ್ಗಜಗ್ಗಾಟವು ತಾ. ೨೭ ರಿಂದ ೨೯ ರವರೆಗೆ ನಡೆಯಲಿದ್ದು. ಪ್ರಥಮ ಬಹುಮಾನ ರೂ. ೨೨,೨೨೨ ಮತ್ತು ದ್ವಿತೀಯ ಬಹುಮಾನ ರೂ. ೧೧,೧೧೧ ಇರುತ್ತದೆ. ಹೆಚ್ಚಿನ ಮಾಹಿತಿಗೆ ಮೊ. ೮೨೧೭೦೦೭೫೪೫ ಸಂಪರ್ಕಿಸಬಹುದಾಗಿದೆ.
ಜಿಲ್ಲಾಮಟ್ಟದ ಮಹಿಳೆಯರ ಹಗ್ಗಜಗ್ಗಾಟವು ತಾ. ೨೭ ರಂದು ನಡೆಯಲಿದ್ದು, ಪ್ರಥಮ ಬಹುಮಾನ ರೂ. ೧೫,೦೦೦ ಹಾಗೂ ದ್ವಿತೀಯ ಬಹುಮಾನ ರೂ. ೧೦,೦೦೦ ನೀಡಲಾಗುತ್ತದೆ. ಗ್ರಾಮಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯು ತಾ. ೨೭ ರಿಂದ ೨೯ ರವರೆಗೆ ಜರುಗಲಿದ್ದು. ಪ್ರಥಮ ಬಹುಮಾನ ರೂ. ೧೫,೦೦೦ ಮತ್ತು ದ್ವಿತೀಯ ಬಹುಮಾನ ರೂ. ೧೦,೦೦೦ ಇರುತ್ತದೆ. ಹೆಚ್ಚಿನ ಮಾಹಿತಿಗೆ ಮೊ. ೮೩೧೭೪೪೦೯೫೬ ಸಂಪರ್ಕಿಸಬಹುದು, ಎಂದು ಶ್ರೀ ನಾರಾಯಣ ಧರ್ಮ ಪರಿಪಾಲನಾ (ಎಸ್.ಎನ್.ಡಿ.ಟಿ) ಯೋಗಂ, ನಾಪೋಕ್ಲು ಶಾಖೆಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.