ಮಡಿಕೇರಿ, ನ. ೧೭: ಇಲ್ಲಿನ ಸನ್‌ಶೈನ್ ನರ್ಸರಿಯಲ್ಲಿ ಮಕ್ಕಳ ದಿನಾಚರಣೆಯನ್ನು ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮದಿAದ ಆಚರಿಸಲಾಯಿತು.

ಮಕ್ಕಳ ದಿನಾಚರಣೆಯ ಮಹತ್ವ ತಿಳಿಯ ಪಡಿಸುವುದರ ಮೂಲಕ ಪುಟಾಣಿ ಮಕ್ಕಳ ಲಾಲನೆ-ಪಾಲನೆ, ಪೌಷ್ಠಿಕ ಆಹಾರ, ಶುಚಿತ್ವ, ಆರೋಗ್ಯ ಮತ್ತು ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಕುರಿತು ಜಾಗೃತಿ ಮೂಡಿಸಲಾಯಿತು, ಬಳಿಕ ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸಿದರು.