ಸೋಮವಾರಪೇಟೆ, ನ. ೧೭: ನಿರಂತರ ಅಭ್ಯಾಸದಿಂದ ಯಾವುದೇ ಕ್ರೀಡೆಯಲ್ಲಾದರೂ ಯಶಸ್ಸು ಸಾಧಿಸಬಹುದು. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಸಾಕಷ್ಟು ಹಾಕಿ ಕ್ರೀಡಾಪಟುಗಳಿದ್ದು, ದೇಶದ ಕ್ರೀಡಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಿಸಿದರು.
ಹಾಕಿ ಕೂರ್ಗ್ ವತಿಯಿಂದ ಇಲ್ಲಿನ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಕೂರ್ಗ್ ಹಾಕಿ ಲೀಗ್ ಎ. ಡಿವಿಷನ್ ಹಾಗೂ ನಾಕ್ಔಟ್ ಪಂದ್ಯಾವಳಿಯ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಉದಯೋನ್ಮುಖ ಆಟಗಾರರು ಪರಿಚಯವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಾಕಿ ಕ್ರೀಡೆಗೆ ಬೇಕಾದ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲು ತಾವು ಬದ್ಧರಿರುವುದಾಗಿ ಮಂತರ್ ತಿಳಿಸಿದರು.
ಹಾಕಿ ಕೂರ್ಗ್ ವತಿಯಿಂದ ಆಯೋಜನೆಗೊಂಡಿದ್ದ ಲೀಗ್ ಪಂದ್ಯಾಟಗಳು ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ನಡೆದಿದ್ದು, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟಗಳನ್ನು ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ಡಾಲ್ಪೀನ್ಸ್ ಸ್ಫೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.
ಫೈನಲ್ ಪಂದ್ಯದಲ್ಲಿ ಬೊಟ್ಟಿಯತ್ತ್ನಾಡ್ ತಂಡವು ೫-೧ ಗೋಲುಗಳ ಅಂತರದಿAದ ಕೂರ್ಗ್ ಚಾಲೆಂರ್ಸ್ ತಂಡವನ್ನು ಮಣಿಸಿತು. ಪಂದ್ಯಾವಳಿಯ ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ಬೊಟ್ಟಿಯತ್ತ್ನಾಡ್ ತಂಡದ ನಾಗೇಶ್, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಇದೇ ತಂಡದ ದಾಸಂಡ ಅಚ್ಚಯ್ಯ, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು ಕೂರ್ಗ್ ಚಾಲೆಂರ್ಸ್ ತಂಡದ ವಿನೀಶ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಚಾಮರ್ಸ್ ತಂಡದ ಆಟಗಾರನಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಾಕಿ ಕೂರ್ಗ್ ಅಧ್ಯಕ್ಷ ಲವಕುಮಾರ್, ಕಾರ್ಯದರ್ಶಿ ಚೇತನ್, ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ಮಹೇಶ್, ಮಾಜಿ ಅಧ್ಯಕ್ಷರಾದ ಅಶೋಕ್, ಮಹೇಶ್ ಮಾಟ್ನಳ್ಳಿ, ಪದಾಧಿಕಾರಿಗಳಾದ ಕೆ.ಪಿ.ರಾಯ್, ಮಂಜು, ವಿನಾಯಕ, ಸÀಲಹೆಗಾರ ಕೆ.ಎಸ್. ಪ್ರಕಾಶ್, ಹಿರಿಯ ಹಾಕಿ ಆಟಗಾರ ಪಿ.ಎಲ್.ಮಂಜುನಾಥ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಕೆ.ಎನ್. ದೀಪಕ್ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಹಿರಿಯ ಚಾಲಕ ಜೀಪ್ ಮಂಜು ಅವರನ್ನು ಸನ್ಮಾನಿಸಲಾಯಿತು.