ಮಡಿಕೇರಿ, ನ. ೧೭: ಕೊಡಗು ವಿದ್ಯಾಲಯದ ೪ನೇ ತರಗತಿಯ ವಿದ್ಯಾರ್ಥಿಗಳಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ, ಸಡಗರ ಹಾಗೂ ಪರಿಸರ ಜಾಗೃತಿಯ ಸಂದೇಶದೊAದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಸ್ವಾಗತ ನೃತ್ಯದೊಂದಿಗೆ ಆರಂಭಿಸಲಾಯಿತು.
ವಿದ್ಯಾರ್ಥಿಗಳು ಸುಮಧುರ ಹಾಡನ್ನು ಹಾಡುವ ಮೂಲಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು.
ಶಾಲೆಯ ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್, ಮುಖ್ಯ ಆಡಳಿತಾಧಿಕಾರಿಗಳಾದ ರವಿ.ಪಿ, ಶೈಕ್ಷಣಿಕ ಸಂಯೋಜಕಿ ಮಿಲನ್ ಕುಮಾರಿ ಹಾಗೂ ಶಿಕ್ಷಕಿಯರಾದ ಲಾವಣ್ಯ ಹಾಗೂ ಮಮತ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದೀಪಾವಳಿ ಹಬ್ಬದ ಮಹತ್ವ, ಅದರ ಪೌರಾಣಿಕ ಹಿನ್ನೆಲೆ ಹಾಗೂ ಆಚರಣೆಯ ಉದ್ದೇಶವನ್ನು ವಿದ್ಯಾರ್ಥಿಗಳು ಸುಂದರವಾದ ನಾಟಕದ ಮೂಲಕ ಪ್ರಸ್ತುತಪಡಿಸಿದರು. ಬೆಳಕು ಕತ್ತಲೆಯನ್ನು ದೂರಮಾಡುವಂತೆ, ನಮ್ಮ ಬದುಕಿನಲ್ಲಿರುವ ಅಜ್ಞಾನ ಮತ್ತು ಅಸತ್ಯವನ್ನು ದೂರಮಾಡಿ ಸತ್ಯ, ಪ್ರೀತಿ ಹಾಗೂ ಒಳಿತಿನ ಹಾದಿಯಲ್ಲಿ ಸಾಗಬೇಕು ಎಂಬ ಸಂದೇಶವನ್ನು ಮಕ್ಕಳ ನಾಟಕ ಸಾರಿತು. ಪಟಾಕಿಗಳ ಸಿಡಿತದಿಂದ ಉಂಟಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಪ್ರಕೃತಿಯ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಿಳಿಸಿದರು. ದೀಪಾವಳಿಯ ಸಂಭ್ರಮದ ಹೆಸರಿನಲ್ಲಿ ನಮ್ಮ ಭೂಮಿಯ ಆರೋಗ್ಯವನ್ನು ಹಾಳುಮಾಡಬಾರದು, ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು ಎಂಬ ಜಾಗೃತಿ ಸಂದೇಶವನ್ನು ನೀಡಿದರು.
ಶಿಕ್ಷಕಿ ಲಾವಣ್ಯ, ದೀಪಾವಳಿ ಹಬ್ಬದ ಮೂರು ದಿನಗಳಾದ ನರಕ ಚತುರ್ದಶಿ, ಲಕ್ಷಿö್ಮ ಪೂಜೆ ಹಾಗೂ ಬಲಿಪಾಡ್ಯಮಿಯ ಮಹತ್ವ ಮತ್ತು ಅವುಗಳ ಆಚರಣೆಯ ಕುರಿತು ಮಾಹಿತಿ ನೀಡಿದರು. ಹಬ್ಬದ ಸಂಪ್ರದಾಯ, ಧಾರ್ಮಿಕ ಹಿನ್ನೆಲೆ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಿದರು.
ನಂತರ ಶಾಲೆಯ ಪ್ರಾಂಶುಪಾಲರಾದ ಕೆ.ಎಸ್ ಸುಮಿತ್ರ ದೀಪಾವಳಿ ಹಬ್ಬದ ಮಹತ್ವವನ್ನು ತಿಳಿಸುತ್ತಾ, ಹಬ್ಬವು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ನಮ್ಮ ಜೀವನದಲ್ಲಿ ಒಳ್ಳೆಯ ಗುಣಗಳು, ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಸಂದರ್ಭವಾಗಬೇಕು ಎಂದು ಮಕ್ಕಳಿಗೆ ತಿಳಿಹೇಳಿದರು.
ಇದೇ ಸಂದರ್ಭದಲ್ಲಿ, “ಒಂದು ನಿಮಿಷ - ಒಂದು ಸಂದೇಶ” ಎಂಬ ವಿಶೇಷ ವಿಭಾಗದಲ್ಲಿ ಭಾವನ ಎಸ್. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಪರಿಸರ ಸ್ನೇಹಿ ಹಬ್ಬದ ಆಚರಣೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಅರ್ಥಪೂರ್ಣ ಸಂದೇಶವನ್ನು ನೀಡಿದರು.
ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದರು. ಪೂರ್ಣಚಂದ್ರ ಶೆಟ್ಟಿ ಹಾಗೂ ವೈಶ್ವಿ ಎಸ್ ಬಂಗೇರ ನಿರೂಪಿಸಿದರು. ನೀಲ್ ನಾಚಪ್ಪ ಸ್ವಾಗತಿಸಿ, ತಾರಿತ್ ಪೊನ್ನಣ್ಣ ವಂದಿಸಿದರು. ದೀಪಾವಳಿಯ ಬೆಳಕು ಮತ್ತು ಸಂಭ್ರಮದೊAದಿಗೆ ಪರಿಸರ ಸಂರಕ್ಷಣೆ, ಪ್ರಕೃತಿಯ ಮೇಲಿನ ಪ್ರೀತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಸಾರಿದ ಈ ಕಾರ್ಯಕ್ರಮ ವಿಭಿನ್ನವಾಗಿತ್ತು.