ಕುಶಾಲನಗರ, ನ. ೧೬: ಸ್ವಚ್ಛ ಕಾವೇರಿಗಾಗಿ ಅಕ್ಟೋಬರ್ ೨೬ರಂದು ತಲಕಾವೇರಿ ಕ್ಷೇತ್ರದಿಂದ ಚಾಲನೆಗೊಂಡ ತಲಕಾವೇರಿ-ಪೂಂಪ್‌ಹಾರ್ ಕಾವೇರಿ ನದಿ ಜಾಗೃತಿ ರಥಯಾತ್ರೆ ತಾ. ೧೭ ರಂದು (ಇಂದು) ಮುಕ್ತಾಯಗೊಳ್ಳಲಿದೆ.

ಕಾವೇರಿ ನದಿ ಸ್ವಚ್ಛತಾ ಆಂದೋಲನ, ನಮಾಮಿ ಕಾವೇರಿ ಮತ್ತು ಅಖಿಲ ಭಾರತ ಸನ್ಯಾಸಿಗಳ ಸಂಘ ಆಶ್ರಯದಲ್ಲಿ ಜಿಲ್ಲೆಯಿಂದ ಸಾಗಿದ ಯಾತ್ರೆ ಕರ್ನಾಟಕ ಮತ್ತು ತಮಿಳುನಾಡು ವ್ಯಾಪ್ತಿಯ ಕಾವೇರಿ ನದಿ ತಟದಲ್ಲಿ ಸಂಚರಿಸಿ ನದಿ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸಿ ಸಮುದ್ರ ಸಂಗಮ ಸ್ಥಳವಾದ ಪೂಂಪ್‌ಹಾರ್ ಬಳಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ತಲಕಾವೇರಿಯಿಂದ ಕಳಸಗಳಲ್ಲಿ ಒಯ್ದ ಪವಿತ್ರ ತೀರ್ಥವನ್ನು ವಿಸರ್ಜನೆ ಮಾಡುವ ಮೂಲಕ ಈ ಬಾರಿಯ ಯಾತ್ರೆ ಸಮಾಪ್ತಿಗೊಳ್ಳಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.