ಶನಿವಾರಸಂತೆ, ನ. ೧೬: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಅಭಿನಯ ಕಲಾ ಮಿಲನ ಚಾರಿಟೆಬಲ್ ಟ್ರಸ್ಟ್ನ ನಾಟ್ಯ ಮಿಲನ ನೃತ್ಯ ಶಾಲೆ ಶನಿವಾರಸಂತೆ ಶಾಖೆ ವತಿಯಿಂದ ನವೆಂಬರ್ ಕನ್ನಡ ರಾಜ್ಯೋತ್ಸವ ಹಬ್ಬದ ತಿಂಗಳ ಸಂಬAಧ ಶನಿವಾರಸಂತೆ ವ್ಯಾಪ್ತಿಯ ಶಾಲಾ-ಕಾಲೇಜು ಮಕ್ಕಳಿಗೆ ಕನ್ನಡ ನಾಡು-ನುಡಿಗೆ ಸಂಬAಧಿಸಿದAತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.
ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಶಿಕ್ಷಕಿ ಲಲಿತಾ ಮಾತನಾಡಿ, ಸ್ಥಳೀಯ ಮಕ್ಕಳ ಪ್ರತಿಭೆ ಅನಾವರಣಕ್ಕೆ ಅಭಿನಯ ಕಲಾ ಮಿಲನ ಚಾರಿಟೆಬಲ್ ಟ್ರಸ್ಟ್ನ ಕನ್ನಡ ನಾಡು-ನುಡಿಗೆ ಆದ್ಯತೆ ನೀಡುವ ಸ್ಪರ್ಧಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಬಹುಮಾನ ಗಳಿಕೆಗಿಂತಲೂ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಮುಖ್ಯವಾಗಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿಯ ಪರಿಚಯದೊಂದಿಗೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ನಾಟ್ಯ ಮಿಲನ ನೃತ್ಯ ಶಾಲೆಯ ಗುರು / ಸಾಹಿತಿ ಮಿಲನಾ ಭರತ್ ಪ್ರಾಸ್ತಾವಿಕ ನುಡಿಯಾಡಿ, ಶನಿವಾರಸಂತೆ ಹಾಗೂ ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ, ಸಂಗೀತ, ನಾಟ್ಯಕ್ಕೆ ಒತ್ತು ನೀಡಲು ಅಭಿನಯ ಕಲಾ ಮಿಲನ ಚಾರಿಟೆಬಲ್ ಟ್ರಸ್ಟ್ನ ತಿಂಗಳ ಸಂಭ್ರಮ ಕಾರ್ಯಕ್ರಮದಡಿ ವಿವಿಧ ಸಾಹಿತ್ಯ ಚಟುವಟಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಮಕ್ಕಳ ಪ್ರತಿಭೆ ಒರೆಹಚ್ಚಲು ಕನ್ನಡಪರ ಸ್ಪರ್ಧಾ ಕಾರ್ಯಕ್ರಮ ಉತ್ತಮ ಚಟುವಟಿಕೆ ಯಾಗಿದೆ ಎಂದರು.
ಸಾಹಿತಿ ಲಾವಣ್ಯ ಮೋಹನ್ ಮಾತನಾಡಿ, ಸಾಹಿತಿಗಳ ಪರಿಚಯದ ಜತೆಗೆ ಸ್ಥಳೀಯ ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಅಭಿನಯ ಕಲಾ ಮಿಲನ ಚಾರಿಟೆಬಲ್ ಟ್ರಸ್ಟ್ ಉತ್ತಮ ವೇದಿಕೆ ಒದಗಿಸಿದೆ. ಸ್ಪರ್ಧೆಯ ಮೂಲಕ ಮಕ್ಕಳ ಪ್ರತಿಭೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು. ವೇದಿಕೆಯಲ್ಲಿ ಟ್ರಸ್ಟ್ನ ಪದಾಧಿಕಾರಿಗಳಾದ ಇಂದಿರಾವತಿ ಭರತ್, ಜಿತೇಂದ್ರ ಗೌಡ, ಹೇಮಂತ್, ಸಾಹಿತಿ ಶ.ಗ. ನಯನತಾರಾ, ನಿಶ್ಚಲಾ, ಕವಯತ್ರಿ ಹೇಮಾ ಯೋಗೇಶ್, ಶಿಕ್ಷಕಿಯರಾದ ಜಿ.ಪಿ. ಕವಿತಾ, ಜ್ಯೋತಿ ನಿರಂಜನ್, ತೇಜಾವತಿ, ಪ್ರಕಾಶ್ಚಂದ್ರ, ಇತರರು ಹಾಜರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕಿ ಕವಿತಾ ಸ್ವಾಗತಿಸಿ, ಕಲಾವಿದೆ ಮಿಲನಾ ಭರತ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ನAತರ ಪದವಿಪೂರ್ವ ವಿದ್ಯಾರ್ಥಿಗಳಿಗೆ “ಕನ್ನಡ ಜ್ಞಾನಪೀಠ ವಿಜೇತ ಸಾಹಿತಿಗಳು’’ ವಿಷಯದ ಪ್ರಬಂಧ ಸ್ಪರ್ಧೆ, ೮-೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿ, ಸಂಸ್ಕೃತಿ, ವ್ಯಕ್ತಿ, ಪ್ರಶಸ್ತಿ ಪುರಸ್ಕಾರಗಳಿಗೆ ಸಂಬAಧಿಸಿ ರಸಪ್ರಶ್ನೆ ಸ್ಪರ್ಧೆ, ೫-೭ನೇ ತರಗತಿ ವಿದ್ಯಾರ್ಥಿಗಳಿಗೆ “ಹಳ್ಳಿ ಸೊಗಡಿನ ಚಿತ್ರಣ’’ ವಿಷಯದ ಬಗ್ಗೆ ಚಿತ್ರ ಕಲಾ ಸ್ಪರ್ಧೆ, ೧-೪ನೇ ತರಗತಿ ವಿದ್ಯಾರ್ಥಿಗಳಿಗೆ ಗೀತ ಗಾಯನ (ಜಾನಪದ, ಭಾವಗೀತೆ, ಚಲನಚಿತ್ರ) ಸ್ಪರ್ಧೆ ಹಾಗೂ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ಯಾವುದೇ ವಿಷಯದ ಕುರಿತು ಮಾತನಾಡುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕ್ಲಸ್ಟರ್ ವ್ಯಾಪ್ತಿಯ ೯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಶ.ಗ. ನಯನತಾರಾ, ಲಾವಣ್ಯಾ, ನಿಶ್ಚಲಾ, ಜ್ಯೋತಿ, ಹೇಮಾ, ತೇಜಸ್ವಿನಿ ಪಾಲ್ಗೊಂಡಿದ್ದರು.