ಮಡಿಕೇರಿ, ನ. ೧೬: ರಾಜ್ಯ ಸರ್ಕಾರವು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸೇನಾ ತರಬೇತಿ ನೀಡುವ ಯೋಜನೆಯ ಜಾರಿಗೆ ಮುಂದಾಗಿದ್ದು ಇದಕ್ಕೆ ಪೂರಕವಾಗಿ ಟೆಂಡರ್ ಕರೆದಿದ್ದು ಕೂಡಲೇ ಅದನ್ನು ರದ್ದುಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಅಲ್ಲದೆ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ಯಥಾಸ್ಥಿತಿ ಮುಂದುವರಿಸುವAತೆ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಹಿರಿಯರಾದ ಸೋಮನಾಥ ನಂದಪುರಿ ಅವರು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ೨೦೨೬-೨೭ನೇ ಸಾಲಿನಲ್ಲಿ ಕೇವಲ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ೬೦ ದಿನಗಳ ಸೇನಾ ತರಬೇತಿ ನೀಡಲು ಅಲ್ಪಾವಧಿ ಟೆಂಡರ್ ಕರೆದಿರುವುದು ಅತ್ಯಂತ ಆಘಾತಕಾರಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ; ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿ ಕೇವಲ ಒಂದು ನಿರ್ದಿಷ್ಟ ಧಾರ್ಮಿಕ ಗುಂಪಿಗೆ ಮಾತ್ರ ರಕ್ಷಣಾ ಸಂಬAಧಿತ ತರಬೇತಿ ನೀಡುವುದು ಮತ್ತು ಹಿಂದೂ ಸೇರಿದಂತೆ ಇತರೆ ಸಮುದಾಯಗಳ ಅರ್ಹ ಬಡ ವಿದ್ಯಾರ್ಥಿಗಳನ್ನು ಇದರಿಂದ ಹೊರಗಿಡುವುದು ಭಾರತೀಯ ಸಂವಿಧಾನದ ವಿಧಿ ೧೪ (ಸಮಾನತೆಯ ಹಕ್ಕು) ಹಾಗೂ ವಿಧಿ ೧೫(೧) (ಧರ್ಮದ ಆಧಾರದ ಮೇಲೆ ತಾರತಮ್ಯ ನಿಷೇಧ)ದ ಸ್ಪಷ್ಟ ಉಲ್ಲಂಘನೆಯಾಗಿದೆ. ಭಾರತೀಯ ಸೇನೆಯು ದೇಶದ ಏಕತೆ ಅಖಂಡತೆ ಮತ್ತು ಸಮಗ್ರತೆಯ ಸಂಕೇತವಾಗಿದೆ. ದೇಶ ರಕ್ಷಣೆಗೆ ಸಿದ್ದರಾಗುವ ಯುವ ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಿ ಪ್ರತ್ಯೇಕ ತರಬೇತಿ ನೀಡುವುದು ಸಂವಿಧಾನದ ವಿಧಿ ೫೧ಂ(ಛಿ) ಮತ್ತು ೫೧ಂ(e) ಅಡಿಯಲ್ಲಿನ ರಾಷ್ಟಿçÃಯ ಭಾವೈಕ್ಯತೆಯ ಮೂಲಭೂತ ಕರ್ತವ್ಯಗಳಿಗೆ ತೀರ ವಿರುದ್ಧವಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯ, ಭಾರತೀಯ ಸೇನೆ ಅಥವಾ ನಿರ್ದೇಶನಾಲಯದ ಯಾವುದೇ ಸಮಾಲೋಚನೆ ಮತ್ತು ಮೇಲ್ವಿಚಾರಣೆ ಇಲ್ಲದೆ ಖಾಸಗಿ ಸಂಸ್ಥೆಗಳ ಮೂಲಕ ಸೇನಾ ಮಾದರಿಯ ತರಬೇತಿ ನೀಡುವುದು ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯವನ್ನು ತಂದೊಡ್ಡಬಹುದು ಎಂದು ಸೋಮನಾಥನಂದಪುರಿ ಅವರು ಹೇಳಿದರು. ಸರ್ಕಾರಕ್ಕೆ ನಿಜವಾಗಿಯೂ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶವಿದ್ದರೆ ಧರ್ಮದ ಬದಲಾಗಿ ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡದ ಮೇಲೆ ಶಾಲಾ ಕಾಲೇಜುಗಳು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಹಾಗೂ ಅಧಿಕೃತ ಎನ್‌ಸಿಸಿ ಮೂಲಕ ಎಲ್ಲಾ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಸಮಾನ ತರಬೇತಿ ನೀಡಲಿ. ಧಾರ್ಮಿಕ ತಾರತಮ್ಯದಿಂದ ಕೂಡಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯದ ಟೆಂಡರ್ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಲಿ ಎಂದು ಅವರು ಆಗ್ರಹಿಸಿದರು.

ದಿನಾಂಕ ೧೨.೧೧.೨೦೨೬ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕೆಲವು ಸಂಘಟನೆಗಳು ಒಟ್ಟುಗೂಡಿ ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಸಂರಕ್ಷಣಾ ಕಾಯ್ದೆ ೨೦೨೨ ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ೨೦೨೦ಗಳನ್ನು ಹಿಂಪಡೆಯುವAತೆ ಒತ್ತಾಯಿಸಿ ಪ್ರತಿಭಟನೆ ನಡೆಸಿವೆ. ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಮಾಡುತ್ತಿರುವ ಒತ್ತಾಯಕ್ಕೆ ವಿಶ್ವ ಹಿಂದೂ ಪರಿಷತ್‌ನ ತೀವ್ರ ವಿರೋಧವಿದ್ದು, ಸರ್ಕಾರವು ಪ್ರತಿಭಟನಾಕಾರರ ಒತ್ತಾಯವನ್ನು ತಿರಸ್ಕರಿಸಬೇಕೆಂದು ಸೋಮನಾಥನಂದಪುರಿ ಒತ್ತಾಯಿಸಿದರು. ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಸಂರಕ್ಷಣಾ ಕಾಯ್ದೆ ೨೦೨೨ ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ; ಬದಲಾಗಿ ಬಲವಂತ, ವಂಚನೆ, ಆಮಿಷದಿಂದ ಅಥವಾ ಜನರನ್ನು ದಾರಿ ತಪ್ಪಿಸಿ ಮಾಡುವ ಕಾನೂನುಬಾಹಿರ ಮತಾಂತರಗಳನ್ನು ಮಾತ್ರ ಇದು ತಡೆಯುತ್ತದೆ. ಈ ಕಾಯ್ದೆಯು ಸಂಪೂರ್ಣವಾಗಿ ಸಂವಿಧಾನಬದ್ಧವಾಗಿದೆ. ಭಾರತೀಯ ಕೃಷಿ ಪದ್ಧತಿಯ ಬೆನ್ನೆಲುಬಾಗಿರುವ ಗೋವು ಬಹು ಸಂಖ್ಯಾತ ಹಿಂದೂಗಳ ಪವಿತ್ರ ಭಾವನೆಯ ಪ್ರತೀಕವಾಗಿದೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ೨೦೨೦(ಗೋ ಹತ್ಯೆ ನಿಷೇಧ ಕಾಯ್ದೆ) ರೈತರ ಹಿತಾಸಕ್ತಿ ಹಾಗೂ ಪಶು ಸಂಪತ್ತಿನ ರಕ್ಷಣೆಗೆ ಅತ್ಯಗತ್ಯವಾಗಿದೆ. ಈ ಕಾಯ್ದೆಯನ್ನು ಹಿಂಪಡೆಯುವುದು ಅಥವಾ ದುರ್ಬಲಗೊಳಿಸುವುದು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ ರಾಜ್ಯದಲ್ಲಿ ಅನಗತ್ಯ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯಬಾರದು ಎಂದರು.

ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಲು, ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸೇನಾ ತರಬೇತಿ ನೀಡುವ ಯೋಜನೆ ಜಾರಿಗೆ ಹಾಗೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಸರ್ಕಾರ ಮುಂದಾಗುವುದಾಗಿ ಮಾಹಿತಿ ಇದ್ದು, ಸರ್ಕಾರ ಯಾವುದೇ ಕಾರಣಕ್ಕೂ ಇಂತಹ ನಿರ್ಧಾರಗಳನ್ನು ಕೈಗೊಳ್ಳಬಾರದೆಂದು ಅವರು ಆಗ್ರಹಿಸಿದರು.

ವಿಶ್ವ ಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ಪುದಿಯೋಕ್ಕಡ ರಮೇಶ್ ಮಾತನಾಡಿ, ಸರ್ಕಾರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯೋಜನೆಗಳನ್ನು ಕೈಗೊಂಡಲ್ಲಿ ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಗೋಷ್ಠಿಯಲ್ಲಿ ಭಜರಂಗದಳ ಜಿಲ್ಲಾ ಸಹ ಸಂಯೋಜಕ್ ದುರ್ಗೇಶ್ ಭಜರಂಗಿ, ತಾಲೂಕು ಸಹ ಸಂಯೋಜಕ್ ಬಿ.ಎ.ಜೀವನ್, ವಿಹಿಂಪ ಪ್ರಚಾರ ಪ್ರಮುಖ ಶಾನ್ ಸೋಮಣ್ಣ, ನಗರ ಅಧ್ಯಕ್ಷ ಗುರುಪ್ರಸಾದ್ ಉಪಸ್ಥಿತರಿದ್ದರು.