ಶ್ರೀಮಂಗಲ, ನ. ೧೫: ಕೊಡಗು ಜಿಲ್ಲೆಯಲ್ಲಿ ನೀರಾ (ಬೊಳ್ಳೆಕಳ್ಳ್) ಇಳಿಸಲು ಹಾಗೂ ಬಳಕೆಗೆ ಅವಕಾಶ ಕಲ್ಪಿಸಬೇಕೆಂಬ ಬೆಳೆಗಾರರ ಬೇಡಿಕೆಗೆ ಪ್ರತಿಕ್ರಿಯಿಸಿದ ಶಾಸಕ ಪೊನ್ನಣ್ಣ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನಿನಡಿ ನೀರಾ ಇಳಿಸಲು ಮತ್ತು ಬಳಕೆಗೆ ಅವಕಾಶವಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಹಿಂದಿನಿAದಲೂ ಸ್ವಾಭಾವಿಕವಾಗಿ ನೀರಾ ತಯಾರಿಸುವ ಹಾಗೂ ಬಳಸುವ ಪರಂಪರೆ ಇದ್ದರೂ ಕಾರಣಾಂತರಗಳಿAದ ನಿಷೇಧ ಹೇರಲಾಗಿದೆ ಎಂದರು.

ಬಿರುನಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ ಈ ಕುರಿತು ಸಾರ್ವಜನಿಕರು, ಬೆಳೆಗಾರರು ಮನವಿ ಸಲ್ಲಿಸಿದ ಸಂದರ್ಭ ಪ್ರತಿಕ್ರಿಯಿಸಿದ ಅವರು, ನೆರೆಯ ಜಿಲ್ಲೆಯಲ್ಲಿ ಲಭ್ಯವಿರುವ ಅವಕಾಶ ಕೊಡಗು ಜಿಲ್ಲೆಯಲ್ಲಿಯೂ ಇರಬೇಕೆಂಬುದು ಜನರ ಆಶಯವಾಗಿದೆ. ನೀರಾ ಇಳಿಸಲು ಅವಕಾಶ ಕಲ್ಪಿಸುವುದರಿಂದ ಬೆಳೆಗಾರರು ಹಾಗೂ ಕೃಷಿಕರಿಗೆ ಅನುಕೂಲವಾಗಲಿದೆ. ಈ ವಿಚಾರವನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡಗಿನ ಬೆಳೆಗಾರರಿಗೆ ಅನುಕೂಲವಾಗುವಂತೆ ಅನುಮತಿ ಕೊಡಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಸ್ಥಳೀಯರು ತಯಾರಿಸಿದ್ದ ನೀರಾವನ್ನು ಶಾಸಕ ಪೊನ್ನಣ್ಣ ಹಾಗೂ ಸ್ಥಳೀಯರು ಸೇವಿಸಿದ್ದು ಗಮನ ಸೆಳೆಯಿತು.