ಶನಿವಾರಸಂತೆ, ನ. ೧೪: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರ ೧೦೦ನೇ ವರ್ಷದ ಹುಟ್ಟುಹಬ್ಬವನ್ನು ಸಿಹಿಹಂಚಿ ಸಂಭ್ರಮದಿAದ ಆಚರಿಸಲಾಯಿತು.

ತಾಲೂಕು ರೈತ ಯುವ ಮೋರ್ಚಾ ಅಧ್ಯಕ್ಷ ರಕ್ಷಿತ್ ಗೌಡ ಮಾತನಾಡಿ, ಅವರ ಸಿದ್ಧಾಂತ ಅನುಕರಣೀಯ ಎಂದರು. ಸೋಮವಾರಪೇಟೆ ಬಿಜೆಪಿ ಮುಖಂಡ ಯೋಗೇಶ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಯತೀಶ್, ಉಪಾಧ್ಯಕ್ಷ ಯೋಗಾನಂದ್, ಮುಖಂಡರಾದ ಸಂದೀಪ್, ದಿವಾಕರ್, ನಿಂಗರಾಜ್, ಎನ್. ಚಂದ್ರಣ್ಣ, ರಾಜಣ್ಣ, ಹರೀಶ್ ಇತರ ಕಾರ್ಯಕರ್ತರು ಹಾಜರಿದ್ದರು.