ಗೋಣಿಕೊಪ್ಪಲು. ನ. ೧೩: ಗೋಣಿಕೊಪ್ಪಲುವಿನ ದಿ ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಚೆಸ್ಕಾಂ ನಿರ್ದೇಶಕ ಮಂಡಳಿಯ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಎ.ಜೆ. ಬಾಬು ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕಿರಿಯಮಾಡ ಅರುಣ್ ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಕಡೇಮಾಡ ಸುನೀಲ್ ಮಾದಪ್ಪ ಅವರು ಎ.ಜೆ. ಬಾಬು ಅವರಿಗೆ ಶಾಲು, ಹೂಗುಚ್ಛ ನೀಡಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಿ.ಎನ್. ಪ್ರಕಾಶ್, ಎನ್.ಕೆ. ದೇವಯ್ಯ, ಸಿ.ಡಿ. ಸುಬ್ಬಯ್ಯ, ಎ.ಕೆ. ಉಮ್ಮರ್, ಎಚ್.ಎನ್. ಮುರುಗನ್, ಸಿ.ಎಸ್. ಸುಮಿ ಸುಬ್ಬಯ್ಯ, ಕೆ.ಬಿ. ಗಿರೀಶ್ ಗಣಪತಿ, ಸಿ.ಡಿ. ಮಾದಪ್ಪ, ಕೆ.ಬಿ. ಪ್ರತಾಪ್, ಪಿ.ಜಿ. ರಾಜಶೇಖರ್, ಎಚ್.ವಿ. ಜಗದೀಶ್, ಪ್ರವಿ ಮೊಣ್ಣಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಕಾರ್ತಿಕ್ ಹಾಗೂ ಸೊಸೈಟಿಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕರಾದ ಎ.ಜೆ. ಬಾಬು ಅವರ ಆಯ್ಕೆಯು ಕೊಡಗು ಜಿಲ್ಲೆಗೆ ಹಾಗೂ ನಮ್ಮ ಸೊಸೈಟಿಗೆ ಹೆಮ್ಮೆಯ ವಿಷಯವಾಗಿದೆ ಅಧ್ಯಕ್ಷರಾದ ಕಿರಿಯಮಾಡ ಅರುಣ್ ಪೂಣಚ್ಚ ಹೇಳಿದರು. ಸಿಇಒ ಕಾರ್ತಿಕ್ ಸ್ವಾಗತಿಸಿ, ವಂದಿಸಿದರು.