ವೀರಾಜಪೇಟೆ, ನ. ೧೩: ಸಾಧಿಕ್ ಆರ್ಟ್ಸ್ ಲಿಂಕ್ ವೀರಾಜಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಸಹಯೋಗದಲ್ಲಿ ೧೦ನೇ ವರ್ಷದ ಕಲಾ ಉತ್ಸವ ಕೊಡಗು ೨೦೨೬ ಕಲಾ ಶಿಬಿರಕ್ಕೆ ಆರ್ಜಿ ಗ್ರಾಮದ ಖಾಸಗಿ ಸ್ಥಳದಲ್ಲಿ ಗಣ್ಯರಿಂದ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

೫೧ ದಿನಗಳ ಕಾಲ ನಡೆಯುವ ಕಲಾ ಶಿಬಿರದ ಲೋಗೊ ಬಿಡುಗಡೆಗೊಳಿಸಿದ ಭಾರತೀಯ ವಿಧ್ಯಾಭವನದ ಚಿತ್ರಕಲಾ ಶಿಕ್ಷಕ ಪ್ರಸನ್ನ ಕುಮಾರ್ ಮಾತನಾಡಿ, ಕಲೆಗಳನ್ನು ಜೀವಂತವಾಗಿರಿಸಲು ಕಲಾ ಶಿಬಿರಗಳನ್ನು ಆಯೋಜಿಸಬೇಕು. ಆ ಮೂಲಕ ಕಲೆಗಾರರನ್ನು ಬೆಳಕಿಗೆ ತರಬಹುದು ಎಂದರು. ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ವೀರಾಜಪೇಟೆ ಪುರಸಭೆಯ ಮಾಜಿ ಸದಸ್ಯ ಮೊಹಮ್ಮದ್ ರಾಫಿ, ಚಿತ್ರಕಲೆಗಳನ್ನು ಪ್ರೋತ್ಸಾಹಿಸುವ ಮನಸ್ಸುಗಳು ಕ್ಷೀಣಿಸಿವೆ, ಕಲಾವಿದರನ್ನು ಗೌರವಿಸುವುದು ಕಡಿಮೆಯಾಗಿದೆ ಎಂದು ವಿಷಾದಿಸಿದರು. ಬೈರಂಬಾಡ ಗ್ರಾಮದ ಹಿರಿಯ ಕಲಾವಿದÀ ಮುಕ್ಕಾಟಿರ ವಿಠಲ್ ಸೋಮಯ್ಯ ಮಾತನಾಡಿ, ಚಿತ್ರಕಲೆಗಳು ಮತ್ತು ಕಲೆಗೆ ಸಂಬAಧಿಸಿದ ವಿಷಯಗಳಿಗೆ ಜೀವತುಂಬುವ ಕಲೆಗಾರರಿಗೆ ಮನ್ನಣೆ ದೊರಕುವ ಶಿಬಿರಗಳು ಆಯೋಜನೆಗೊಳ್ಳಬೇಕು ಎಂದರು. ಕಾರ್ಯಕ್ರಮ ಉದ್ದೇಶಿಸಿ ಚಿತ್ರ ಕಲಾವಿದರಾದ ರೂಪೇಶ್ ನಾಣಯ್ಯ, ಸುಲೈಮಾನ್, ಸ್ಥಳ ದಾನಿಗಳಾದ ಆರ್ಜಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎನ್. ಉಪೇಂದ್ರ ಮಾತನಾಡಿದರು. ಸಾಧಿಕ್ ಆರ್ಟ್ಸ್ ಲಿಂಕ್‌ನ ಮಾಲೀಕ ಶಿಬಿರದ ಆಯೋಜಕ ಸಾಧಿಕ್ ಹಂಸ ಕಾರ್ಯಕ್ರಮದ ಅಧÀ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿ ಶಾಲೆಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿ. ನಿರೂಪಿಸಿ, ವಂದಿಸಿದರು.