ಶನಿವಾರಸಂತೆ, ನ. ೧೨: ಪಟ್ಟಣದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರಿಕೆಜಿಯಿಂದ ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಯರ ಪೋಷಕರು ತಮ್ಮ ಮಕ್ಕಳಿಗೆ ವಿವಿಧ ವೇಷಭೂಷಣಗಳನ್ನು ತೊಡಿಸಿಕೊಂಡು ಸಂಭ್ರಮ- ಸಡಗರದಿಂದ ಪಾಲ್ಗೊಂಡಿದ್ದರು. ಮುಗ್ಧ ಮಕ್ಕಳ ಉಡುಗೆ-ತೊಡುಗೆ, ಶೃಂಗಾರ, ಹಾವ-ಭಾವ ಕಣ್ಮನ ವನ್ನು ಸೆಳೆಯುವಂತಿದ್ದವು.

ಶಾಲಾ ಸಭಾಂಗಣ ದಲ್ಲಿ ೪ ದಿನಗಳವರೆಗೆ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ವೇದಾವತಿ ವೇದಕುಮಾರ್, ವೀಣಾ ಚಿದಾನಂದ್, ಶ.ಗ. ನಯನತಾರಾ ಪ್ರಕಾಶ್ಚಂದ್ರ, ಸವಿತಾ ಪ್ರತಾಪ್, ಶಿಲ್ಪಾ ಸುರೇಶ್, ಅರ್ಪಿತಾ ಭುವನ್, ಶ್ವೇತಾ ವಸಂತ್, ಅನುಷಾ ಮಂಜುನಾಥ್, ಹೇಮಾ ಮುಳ್ಳೂರು, ಗುಣಶ್ರೀರಾಜು, ವಿದ್ಯಾಭರತ್, ಶರಣ್ ಕುಶಾಲನಗರ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಸುಪ್ರಜ ಗುರುಕುಲ ಶಾಲೆಯ ಪ್ರಾಂಶುಪಾಲೆ ಸುಜಲಾದೇವಿ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.