ಮಡಿಕೇರಿ ನ. ೧೧: ಕೂರ್ಗ್ ಹೋಂಸ್ಟೇಸ್ ಅಸೋಸಿಯೇಷನ್ನ ೨೦೨೬-೨೮ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೀನ ಕಾರ್ಯಪ್ಪ ಹಾಗೂ ಕಾರ್ಯದರ್ಶಿಯಾಗಿ ಸಿ. ಮದನ್ ಸೋಮಣ್ಣ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನವೀನ್ ಅಂಬೆಕಲ್, ಖಜಾಂಚಿಯಾಗಿ ಹೇಮ್ ಮಾದಪ್ಪ, ಜಂಟಿ ಕಾರ್ಯದರ್ಶಿಯಾಗಿ ಪೊನ್ನಣ್ಣ ಎಂ.ಎಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ. ಅಕ್ಷಯ್, ಚೆಂಬAಡ ಸುನಿಲ್, ಡಿ.ಎಸ್. ಪ್ರೇಮ್, ಸ್ಯಾಮ್ ಜೋಸೆಫ್, ಶಶಿ ಮೊಣ್ಣಪ್ಪ, ಪಿ. ವಿಶಾಲ್ ಪೊನ್ನಣ್ಣ, ಸಿ.ಸಿ. ತಿಮ್ಮಯ್ಯ, ಭರತ್ ಮಂದಣ್ಣ, ವಿಜಯ್ ದೇವಯ್ಯ ಹಾಗೂ ರಾಜೇಶ್ ನೇಮಕಗೊಂಡರು.
ಮಡಿಕೇರಿಯ ಆಹಾನ್ ಹಿಲ್ಸ್ ರೆಸಾರ್ಟ್ನಲ್ಲಿ ಸಂಘದ ನಿರ್ಗಮಿತ ಅಧ್ಯಕ್ಷೆ ಮೋಂತಿ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ೨೧ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿ, ಹೋಂಸ್ಟೇ ಉದ್ಯಮದ ಪ್ರಗತಿ ಹಾಗೂ ಹೋಂಸ್ಟೇ ಮಾಲೀಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.