ಮಡಿಕೇರಿ, ನ. ೧೧: ಈ ತರುಣ ಸುಂದರಾAಗ, ಗಟ್ಟಿಮುಟ್ಟು, ಸದಾ ಚೈತನ್ಯದ ಚಿಲುಮೆ. ವಯಸ್ಸು ೨೨.
ಮೊನ್ನೆ ದೀಪಾವಳಿ ಲಕ್ಷ್ಮಿ ಪೂಜೆಗೆ ಅಂಗಡಿ ಅಲಂಕಾರ ಮಾಡುತ್ತಿದ್ದ. ಸಪ್ತಗಿರಿ ಎಂಟರ್ಪ್ರೆöÊಸಸ್ನಲ್ಲಿ ದುಡಿಯುತ್ತಿದ್ದ ಈತನಿಗೆ ಕಟ್ಟಡವನ್ನು ಎಷ್ಟು ಅಲಂಕಾರ ಮಾಡಿದರೂ ಸಾಲದು. ಹಬ್ಬ ಅಲ್ವಾ ಮನೆಗೆ ಹೋಗು ಎಂದು ಮಾಲೀಕ ಜೀವನ್ ಹೇಳುತ್ತಿದ್ದರು, ಇಲ್ಲ ಸರ್, ಕತ್ತಲಾಗಲಿ, ಕತ್ತಲೆಯಲ್ಲಿ ದೀಪ ಹೇಗೆ ಕಾಣುತ್ತದೆ ಎಂದು ನೋಡಿ ಮತ್ತೆ ಹೋಗುತ್ತೇನೆ ಎನ್ನುತ್ತಿದ್ದ. ಪೂಜೆಯ ಟೇಬಲ್ ಬಳಿ ಮಾತ್ರ ಬೆಳಗ್ಗೆ ಬಂದು ಅಲಂಕಾರ ಮಾಡುತ್ತೇನೆ ಎಂದಿದ್ದ. ದೊರೆತಿದ್ದ ಹಬ್ಬದ ಭಕ್ಷೀಸು ಹಣವನ್ನು ಹಿಡಿದು “ ನಾನು ಹಬ್ಬಕ್ಕೆ ಬಟ್ಟೆ ತೆಗೆಯುವುದಿಲ್ಲ. ತಾ ೧೫ ನನ್ನ ಹುಟ್ಟುಹಬ್ಬ, ಅದಕ್ಕಾಗಿ ಹೊಸ ಬಟ್ಟೆಯನ್ನು ‘ಆನ್ಲೈನ್’ ಬುಕ್ ಮಾಡಿರುವೆ. ನಾನು ಇಲ್ಲದಾಗ ಪಾರ್ಸಲ್ ಬಂದರೆ ಪಡೆದು ಇಟ್ಟುಕೋ” ಎಂದು ಸಹೋದ್ಯೋಗಿಯೊಂದಿಗೆ ಹೇಳಿದ್ದ.
ಸೂರ್ಯ ಮುಳುಗುತ್ತಿದ್ದಂತೆ ತಾನೇ ಮಾಡಿದ ಅಂಗಡಿಯ ಅಲಂಕಾರ ನೋಡಿ ಖುಷಿಯಿಂದ ಮನೆಗೆ ತೆರಳಿದ್ದ. ಅಂದಿನ ಸೂರ್ಯನ ದರ್ಶನವೇ ಆತನಿಗೆ ಕೊನೆಯದಾಗಿಬಿಟ್ಟಿತು.
ತರುಣನ ಹೆಸರು ಯೋಗೇಶ್. ಮನೆಯಲ್ಲಿ ಅಮ್ಮ ನಿರ್ಮಲ ಮತ್ತು ವಕೀಲ ಸಹೋದರನೊಂದಿಗೆ ವಾಸ. ಬೆಳಿಗ್ಗೆ ನಾಲ್ಕು ಗಂಟೆಗೆ ಮನೆಯ ಬಚ್ಚಿಲ ಬಾಗಿಲು ತೆರೆದುದರ ಶಬ್ದ ಕೇಳಿದೆ. ಸ್ವಲ್ಪವೇ ಸಮಯದಲ್ಲಿ ಬಚ್ಚಿಲ ಬಾಗಿಲ ಬಳಿ ಶಬ್ದವಾಗಿದೆ. ತಾಯಿ ಎದ್ದು ಓಡಿ ಬರುತ್ತಾರೆ. ಮಗ ಯೋಗೇಶ್ ಹಾಸಿಗೆ ಹತ್ತಲು ಹೊರಟವನು ಅಲ್ಲಿಯೇ ಕುಸಿದು ಬಿದ್ದುಬಿಟ್ಟಿದ್ದ. ಎಲ್ಲರೂ ಸೇರಿ ಆತನನ್ನು ಕೂರಿಸುತ್ತಾರೆ. ಏನಾಯಿತು ಎಂದು ಕೇಳುತ್ತಾರೆ. ‘ತಲೆಗೆ ತಾಗಿತು’ ಎಂದಷ್ಟೇ ಯೋಗೇಶ್ ಹೇಳುತ್ತಾನೆ. ಮನೆಯವರು ನೀರು ಕುಡಿಸುತ್ತಾರೆ. ಅದೇ ಕೊನೆಯ ಗುಟುಕು. ಬಾಹ್ಯದ ಓಡಾಟಗಳಿಗೆ ‘ಗುಡ್ ಬೈ’ ಹೇಳಿದ ಯೋಗೇಶ್ “ಕೋಮ”ಕ್ಕೆ ಜಾರಿ ಬಿಡುತ್ತಾನೆ. ಅವನು ಬೀಳಲು ಕಾರಣ ಬಹುಶಃ ಏರಿದ ರಕ್ತದ ಒತ್ತಡ ಇರಬೇಕು ಎಂದಷ್ಟೇ ವೈದ್ಯರು ಹೇಳುತ್ತಾರೆ.
ಮಡಿಕೇರಿಯಲ್ಲಿ ಚಿಕಿತ್ಸೆಗೆ ಯತ್ನಿಸಿ ಸ್ಕಾö್ಯನಿಂಗ್ ಮಾಡಿ ಮಂಗಳೂರಿಗೆ ಕರೆದೊಯ್ಯುತ್ತಾರೆ. ಹೊರನೋಟಕ್ಕೆ ಯಾವುದೇ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಗಾಯಗಳು ಇಲ್ಲದಿದ್ದರೂ ಮೆದುಳಿನ ಒಳಗೆ ಸಂಪೂರ್ಣ ರಕ್ತ ಸೇರಿಬಿಟ್ಟಿರುವದು ಸ್ಕಾö್ಯನಿಂಗ್ನಿAದ ತಿಳಿಯುತ್ತದೆ. ಅಲ್ಲಿಯೂ ಚಿಕಿತ್ಸೆ ಅಸಾಧ್ಯ ಎಂದು ಹೇಳುತ್ತಾರೆ. “ ವೆಂಟಿಲೇಟರ್” ಅಳವಡಿಸಿ ಕಳುಹಿಸುತ್ತಾರೆ. ದಿಙÆಢರಾಗಿದ್ದ ಕುಟುಂಬದ ಸದಸ್ಯರು ಅಸಹಾಯಕರಾಗಿ ದುರ್ದೈವಿಯನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸುತ್ತಾರೆ. “ ವೆಂಟಿಲೇಟರ್” ತೆಗೆದರೆ ಉಸಿರು ಕೊನೆಯಾಗುತ್ತದೆ ಎಂಬ ಸತ್ಯವನ್ನು ವೈದ್ಯರು ತಿಳಿಸುತ್ತಾರೆ.
ಜಾಗೃತರಾದ ಕುಟುಂಬದ ಸದಸ್ಯರು ಏನೂ ಮಾಡಲಾಗದೆ, ಯೋಗೇಶನ ಅಂಗಾAಗಗಳನ್ನು ಸಂಪೂರ್ಣ ದಾನ ಮಾಡುವುದಾಗಿ ಘೋಷಿಸುತ್ತಾರೆ. ಅಮಾವಾಸ್ಯೆ ಕಳೆದ ಕೂಡಲೇ ವೆಂಟಿಲೇಟರ್ ತೆಗೆಯಲು ಅನುಮತಿ ನೀಡುತ್ತಾರೆ.
ಇಂದು ದುಃಖದ ಮಡುವಿನಲ್ಲಿ ನಿಂತಿದ್ದ ಕುಟುಂಬ, ಆಪ್ತರು, ಮಿತ್ರರ ಸಮ್ಮುಖದಲ್ಲಿ ಯೋಗೇಶನ ಶರೀರವನ್ನು ಶಸ್ತçಚಿಕಿತ್ಸೆಯ ಕೊಠಡಿಗೆ ನಿಧಾನವಾಗಿ ಸಾಗಿಸಲಾಯಿತು. ಇತ್ತೀಚೆಗಷ್ಟೇ ಸಂಭ್ರಮದಿAದ ರಕ್ತದಾನವನ್ನು ಮಾಡಿದ್ದ ಯೋಗೇಶ್ ತನ್ನ ಸಾವಿನಲ್ಲೂ ಅಂಗಾAಗಗಳನ್ನು ನೀಡಿ ಪರರಿಗಾಗಿಯೇ ತಾನು ಜನಿಸಿದ್ದು ಎಂದು ಸಾಬೀತು ಮಾಡಿಬಿಟ್ಟ.
ಕೊಠಡಿಗೆ ಹೋದ ಆತ ಮರಳಲಿಲ್ಲ. ಆದರೆ ಯಾರದೋ ಶರೀರಕ್ಕೆ ಅಂಟಿದ ಆತನ ಎರಡು ಕಣ್ಣುಗಳು ಬಹುಶಃ ನಾಳೆಯಿಂದ ಕುಟುಂಬ, ಸ್ನೇಹಿತರನ್ನು ನೋಡುತ್ತವೆೆ. ಆದರೆ ಮಾತನಾಡುವದಿಲ್ಲ. ಲಿವರ್ ಜೋಡಣೆಯೂ ಅಷ್ಟೇ. ಶರೀರ ಬದಲಿಸಿ, ಮೌನವಾಗಿ ಕ್ರಿಯೆಯಲ್ಲಿ ತೊಡಗುತ್ತದೆ; ಆ ಶರೀರಗಳ ಉಸಿರು ಇರುವ ತನಕ.
ಜೀವನ ಅಂದರೆ ಇಷ್ಟೇನೆ.
- ಅನಂತಶಯನ