ಮಡಿಕೇರಿ, ನ. ೯: ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ಹುಟ್ಟುಹಬ್ಬವನ್ನು ನಗರ ಯುವ ಕಾಂಗ್ರೆಸ್ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕೇಕ್, ಜ್ಯೂಸ್ ಹಾಗೂ ಹೂವಿನ ಗಿಡ, ಆಲದ ಮರದ ಗಿಡವನ್ನು ವಿತರಿಸಲಾಯಿತು. ಬಸ್, ಆಟೋ ಸೇರಿದಂತೆ ವಾಹನಗಳಲ್ಲಿ ತೆರಳುತ್ತಿದ್ದ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಕೇಕ್ ನೀಡಿ ಸಂಭ್ರಮ ಹಂಚಿಕೊಳ್ಳಲಾಯಿತು.

ಕಾಂಗ್ರೆಸ್ ಯುವ ಘಟಕದ ನಗರಾಧ್ಯಕ್ಷ ಅರ್ಜುನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಮೊದಲ ಬಾರಿಗೆ ಯುವ ಘಟಕದಿಂದ ಇಂತಹ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ರಾಹುಲ್ ಮಾರ್ಷಲ್, ನಗರ ಉಪಾಧ್ಯಕ್ಷರಾದ ಸುಹೈಬ್, ಯಶ್ವಂತ್, ಥಾಮಸ್, ವಿಜು, ದಕ್ಷಿತ್, ಮೋನಿಷ್, ಪ್ರ.ಕಾ ಶಾಹುಲ್ ಅಮಿನ್, ಅಜ್ಮನ್, ಕಾರ್ಯದರ್ಶಿಗಳಾದ ಮುಫಿತ್, ಬಾತಿಷ್, ಸಹ ಕಾರ್ಯದರ್ಶಿಗಳಾದ ಪ್ರತಾಪ್, ಶಾಹಿಲ್, ಅಭಿಲಾಷ್, ದೀಕ್ಷಿತ್, ವಿಕ್ಕಿ, ಮಹೇಶ್, ಗಗನ್, ಕಿಶನ್ ಮತ್ತಿತರರು ಇದ್ದರು.