ಸೋಮವಾರಪೇಟೆ, ನ. ೯: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಳ್ಳಿ ಗ್ರಾಮದಲ್ಲಿರುವ ಬಿಎಸ್ಎನ್ಎಲ್ ಟವರ್ನಲ್ಲಿ ನೆಟ್ವರ್ಕ್ ಸಮಸ್ಯೆ ಇರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿಯಾದ ಬೆನ್ನಲ್ಲೇ ಬಿಎಸ್ಎನ್ಎಲ್ನ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು.
ಕೊತ್ನಳ್ಳಿ-ಕುಡಿಗಾಣ ಭಾಗದಲ್ಲಿ ಇರುವ ಬಿಎಸ್ಎನ್ಎಲ್ ಟವರ್ನಿಂದ ಕಳೆದ ಕೆಲ ದಿನಗಳಿಂದ ಸರಿಯಾಗಿ ನೆಟ್ವರ್ಕ್ ಲಭಿಸದೇ ಇರುವುದರಿಂದ ಸಾರ್ವಜನಿಕರ ಸಂವಹನಕ್ಕೆ ಸಮಸ್ಯೆಯಾಗಿತ್ತು. ಸ್ಥಳೀಯರು ಸಮಸ್ಯೆಯ ಬಗ್ಗೆ ‘ಶಕ್ತಿ’ಯ ಗಮನ ಸೆಳೆದ ಬಗ್ಗೆಯೂ ಪತ್ರಿಕೆಯಲ್ಲಿ ವರದಿಯಾಗಿತ್ತು.
ಅಂತೆಯೇ ಬಿಎಸ್ಎನ್ಎಲ್ನ ಟಿಡಿಎಂ ಉನ್ನಿಕೃಷ್ಣನ್ ಅವರನ್ನು ಸಂಪರ್ಕಿಸಿ ಗ್ರಾಮಸ್ಥರ ಅಳಲನ್ನು ವಿವರಿಸಿದ್ದು, ಅಧಿಕಾರಿಗಳ ನಿರ್ದೇಶನದಂತೆ ಇಂದು ಬಿಎಸ್ಎನ್ಎಲ್ನ ಕೆಟಿಓ ಹರ್ಷ, ಅಭಿಯಂತರ ಜೋಜೋ, ಸಂಸದರ ಕಚೇರಿಯ ರಂಜನ್ ಅವರುಗಳು ಕೊತ್ನಳ್ಳಿ ಗ್ರಾಮಕ್ಕೆ ತೆರಳಿ ಖುದ್ದು ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಗ್ರಾಮಸ್ಥರು ನೆಟ್ವಕ್ ಇಲ್ಲದೇ ಇರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಟವರ್ಗೆ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಅಡಚಣೆ ಯಾಗುತ್ತಿದೆ. ಸೋಲಾರ್ ಮೂಲಕ ಟವರ್ ಕಾರ್ಯ ನಿರ್ವಹಿಸುತ್ತಿದ್ದು, ಮೋಡ, ಮಳೆಗಾಲದ ಸಮಯದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಈ ಹಿನ್ನೆಲೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣಕ್ಕೆ ಸೋಲಾರ್ ಪ್ಯಾನಲ್ನ್ನು ಸರಿಪಡಿಸಿ ಶುಚಿಗೊಳಿಸಲಾಗುವುದು. ವಿದ್ಯುತ್ ಸಂಪರ್ಕದ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.