ಮಡಿಕೇರಿ, ನ. ೯: ನಗರದ ಹೊರವಲಯದ ಹೆರವನಾಡು ಸಮೀಪ ಶನಿವಾರ ನಸುಕಿನಲ್ಲಿ ಗೋವುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಮೀಪದಲ್ಲೇ ವ್ಯಕ್ತಿಯೊಬ್ಬರು ಗೋವುಗಳನ್ನು ಮಾರಾಟ ಮಾಡಿದ್ದು, ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಯಲು ಹೋದಾಗ ಗಾಬರಿಗೊಂಡ ಚಾಲಕ ನಿಲ್ಲಿಸದೇ ವೇಗವಾಗಿ ಚಾಲನೆ ಮಾಡಿ ಪರಾರಿಯಾಗಿದ್ದಾನೆ. ಇದರಿಂದ ಪೊಲೀಸರು, ಬಜರಂಗದಳದ ದುರ್ಗೇಶ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ. ಈ ಸಂಬAಧ ವಾಹನದ ಚಾಲಕ ಹಾಗೂ ಗೋವುಗಳನ್ನು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ