ಶನಿವಾರಸಂತೆ, ನ. ೬: ಪಟ್ಟಣದ ತ್ಯಾಗರಾಜ ಕಾಲೋನಿ ಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪ ಟ್ಟಿದ್ದ ೩೬ನೇ ವರ್ಷದ ಗೌರಿ-ಗಣೇಶ ವಿಸರ್ಜನೋತ್ಸವ ಶನಿವಾರ ರಾತ್ರಿ ಶ್ರದ್ಧಾಭಕ್ತಿ ಯೊಂದಿಗೆ ವಿಜೃಂಭಣೆಯಿAದ ಜರುಗಿತು. ದೇವಾಲಯದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಪಟ್ಟಣವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿತ್ತು.

ರಾತ್ರಿ ೮ ಗಂಟೆಗೆ ಗೌರಿ-ಗಣೇಶ ಮೂರ್ತಿಯನ್ನು ವಿದ್ಯುತ್ ದೀಪಗಳಿಂದ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಬೆಳ್ಳಾರೆಯ ಯುವಶಕ್ತಿ ಗೊಂಬೆ ಬಳಗದ ವತಿಯಿಂದ ಸಿಂಹವೇಶ ಗುರುವಾಯನಕೆರೆ ಹೆಸರಾಂತ ಶ್ರೀವಂಶಿಕ ಆಟ್ ಅವರಿಂದ ಕೀಲು ಕುದುರೆ ಪ್ರದರ್ಶನ ಹಾಗೂ ಸಕಲೇಶಪುರ ಹಿಂದೂ ಫಯರ್ ಬ್ರ‍್ಯಾಂಡ್ ವತಿಯಿಂದ ನಾಸಿಕ್ ಬ್ಯಾಂಡ್ ಮತ್ತು ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘದವರಿAದ ಶ್ರೀ ಗಣಪತಿಯಿಂದ ನೂಪುರಾಸುರ ವಧೆ ಎಂಬ ಕಥಾನಕವನ್ನು ಅತ್ಯಾಕರ್ಷಕ ಟ್ಯಾಬ್ಲೋ ಪ್ರದರ್ಶನದೊಂದಿಗೆ ಪ್ರಸ್ತುತಪಡಿಸಿದರು.

ಚಿತ್ತಾಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ಶನಿವಾರಸಂತೆಯ ಪ್ರಸಿದ್ಧ ಎಸ್.ವಿ.ಎಲ್. ಪ್ರೋ ಡಿ.ಜೆ. ಸೌಂಡ್ಸ್, ಲೈಟಿಂಗ್ಸ್ ಮತ್ತು ಸ್ಟುಡಿಯೋ ಪ್ರದರ್ಶನ ದೊಂದಿಗೆ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಮೆರವಣಿಗೆ ಮಾಡ ಲಾಯಿತು. ಝಗಮಗಿಸುವ ಬೆಳಕಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾವಿರಾರು ಮಂದಿ ಪ್ರದರ್ಶನಗಳನ್ನು ನೋಡಿ ಸಂಭ್ರಮಿಸಿದರು. ಮೆರವಣಿಗೆ ನಂತರ ಭಾನುವಾರ ಬೆಳಗ್ಗಿನ ಜಾವ ಗೌರಿ-ಗಣೇಶ ಮೂರ್ತಿಗಳನ್ನು ಸಮೀಪದ ಕಾಜೂರು ನದಿಯಲ್ಲಿ ವಿಸರ್ಜಿಸಲಾಯಿತು.

ವಿಸರ್ಜನೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಿಗ್ಗೆ ಅರ್ಚಕ ಮಂಜುನಾಥ ಶರ್ಮ ಅವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ಶಾಂತಿ ಹೋಮ, ದುರ್ಗಾ ಪೂಜೆ ನಡೆಯಿತು. ಮಧ್ಯಾಹ್ನ ಶ್ರೀ ವಿಜಯ ವಿನಾಯಕ ಸ್ವಾಮಿಗೆ ಮಹಾಪೂಜೆ, ಮಹಾಮಂಗಳಾರತಿ ನಡೆದು, ತೀರ್ಥ-ಪ್ರಸಾದ ವಿತರಣೆಯಾಯಿತು. ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್. ಮಧು, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.