ಮಡಿಕೇರಿ, ನ. ೬: ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಹÉÆಲ-ಗದ್ದೆಗಳು ಮಾಯವಾಗುತ್ತಿದ್ದು, ಈ ಸ್ಥಳಗಳಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಇಲ್ಲಿನ ಮೂಲನಿವಾಸಿಗಳು ತಮ್ಮ ಜಮೀನುಗಳನ್ನು ಹೊರಗಿನವರಿಗೆ ಪರಭಾರೆ ಮಾಡದಂತೆ ಅಮ್ಮತ್ತಿ ರೈತ ಸಂಘದ ಗೌರವಾಧ್ಯಕ್ಷ ಕೆ.ಯು ಗಣಪತಿ ಅವರು ಮನವಿ ಮಾಡಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರಜಿಲ್ಲೆ, ರಾಜ್ಯಗಳಿಂದ ಕೊಡಗಿಗೆ ಬರುತ್ತಿರುವ ಉದ್ಯಮಿಗಳು ಇಲ್ಲಿ ಅಂದಾಜು ೨೦ ಪಟ್ಟು ಹೆಚ್ಚು ಬೆಲೆ ನೀಡಿ ಆಸ್ತಿ ಖರೀದಿಸಿ ಇದರಲ್ಲಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಇದು ಮುಂದುವರಿದರೆ ಇಲ್ಲಿನ ಹೊಲ-ಗದ್ದೆಗಳು ಮಾಯವಾಗಿ ಮೂಲನಿವಾಸಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದರು. ಇಲ್ಲಿಗೆ ಬರುವ ಉದ್ಯಮಿಗಳು ಇಲ್ಲಿಯ ನಿವಾಸಿಗಳನ್ನೇ ತಮ್ಮ ಉದ್ಯಮಕ್ಕೆ ಕೆಲಸಗಾರರಾಗಿ ಬಳಸಿಕೊಳ್ಳುತ್ತಿದ್ದಾರೆ. ಗದ್ದೆ-ಹೊಲಗಳು ಮಾಯವಾಗುತ್ತಿದ್ದು, ಇದರಿಂದಾಗಿ ಮೂಲನಿವಾಸಿಗಳ ಸಂಸ್ಕೃತಿಗೂ ಧಕ್ಕೆ ಆಗಲಿದೆ ಎಂದರು.

ಈ ಹಿಂದೆ ಎಲ್ಲಾ ಜಮೀನುಗಳಲ್ಲಿ ಬೆಳೆ ಬೆಳೆಯುತ್ತಿದ್ದು ನೀರು ನಿಂತು ವರ್ಷದ ೩೬೫ ದಿನವೂ ಕುಡಿಯುವ ನೀರಿಗೆ ಅಭಾವವಿರಲಿಲ್ಲ. ಆದರೀಗ ಕುಡಿಯುವ ನೀರಿಗೂ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ ಆದುದರಿಂದ ಮೂಲ ನಿವಾಸಿಗಳು ಈಗಲಾದರು ಎಚ್ಚೆತ್ತುಕೊಂಡು ತಮ್ಮ-ತಮ್ಮ ಜಮೀನುಗಳನ್ನು ವಲಸೆ ಬಂದ ಜನರಿಗೆ ಪರಭಾರೆ ಮಾಡದಂತೆ ಕೋರಿದರು. ಜಮ್ಮಾ ಜಾಗವನ್ನು ಯಾವ ಕಾರಣಕ್ಕೂ ಪರಭಾರೆ ಮಾಡ ಬಾರದು. ಹಣಕಾಸಿನ ತೊಂದರೆಯಾದಲ್ಲಿ ದರದಲ್ಲಿ ಕಡಿಮೆ ಮಾಡಿ ಇಲ್ಲಿನವರಿಗೇ ಕೊಡಬೇಕು. ಹೊರಗಿನವರಿಗೆ ಮಾರಿದರೆ ಇಲ್ಲಿನ ಭೌಗೋಳಿಕ ವ್ಯವಸ್ಥೆ ಹದಗೆಡುತ್ತದೆ ಎಂದರು.

ನಮ್ಮ ಜಿಲ್ಲೆಯಲ್ಲಿ ಹುಟ್ಟಿ ಮೂರು ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಕಾವೇರಿಯ ನೀರು ನಮಗೇ ಲಭ್ಯವಾಗುತ್ತಿಲ್ಲ. ನಮಗೆ ಕಾವೇರಿಯ ನೀರು ಬೇಕೇಬೇಕು. ಅದಕ್ಕೆ ತಕ್ಕ ಸ್ಥಳದಲ್ಲಿ ಏತ ನೀರಾವರಿಯ ವ್ಯವಸ್ಥೆಯನ್ನು ಮಾಡಿ ಎಲ್ಲಾ ರೈತರ ಜಮೀನಿನಲ್ಲಿ ಬೆಳೆ ಬೆಳೆಯುವಂತಾಗಬೇಕೆAದರು.

೧೦ ಹೆಚ್.ಪಿ ಉಚಿತ ವಿದ್ಯುತ್‌ಗೆ ಒತ್ತಾಯ

ಕೊಡಗಿನ ಕಾಫಿಯಿಂದ ಸರಕಾರದ ಬೊಕ್ಕಸಕ್ಕೆ ಅಧಿಕ ಹಣ ಸಂದಾಯವಾಗುತ್ತಿದೆ. ಆದರೆ ಕಾಫಿ ತೋಟಕ್ಕೆ ನೀರು ಹಾಯಿಸಲು ೧೦ ಹೆಚ್.ಪಿ ವರೆಗಿನ ಪಂಪ್ ಸೆಟ್ಟಿನ ಶುಲ್ಕವನ್ನು ಹಿಂದಿನ ಸರಕಾರವು ವಿನಾಯಿತಿ ಮಾಡುವಂತೆ ಘೋಷಣೆ ಮಾಡಿದ್ದು, ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಗಣಪತಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಪೌತಿ ಖಾತೆಗೆ ಸಂಬAಧಿಸಿದAತೆಯೂ ಹಲವಾರು ಸಮಸ್ಯೆಗಳಿದ್ದು, ಈಗಲೂ ಹಳೇ ವಿಧಾನದಂತೆ ಒಂದು ಆರ್.ಟಿ ಸಿ.ಯಲ್ಲಿ ೫೦ ರಿಂದ ೧೦೦ಜನರ ಹೆಸರು ನೊಂದಾಯಿಸಲ್ಪಟ್ಟಿದೆ. ಅದರಲ್ಲಿ ಎಷ್ಟೋ ಜನರು ಮೃತರಾಗಿದ್ದಾರೆ. ಅವರ ಹೆಸರನ್ನು ಆರ್.ಟಿ.ಸಿ. ಯಿಂದ ತೆಗೆಯದೆ ಹಾಗೆಯೇ ಉಳಿದಿದೆ. ಈ ಸಮಸ್ಯೆ ಬಗೆಹರಿಸಲು ಸರಕಾರವು ಒಂದು ಸರಳವಾದ ಕಾನೂನನ್ನು ತರಬೇಕೆಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಮನೆಯಪಂಡ ಗೌತಮ್ ಪೊನ್ನಪ್ಪ ಮಾತನಾಡಿ, ಕೊಡಗಿಗೆ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ವಾರ್ಷಿಕವಾಗಿ ಭೇಟಿ ನೀಡುತ್ತಿದ್ದಾರೆ. ಪ್ರಸ್ತುತ ಎಲ್-ನಿನೋದಿಂದಾಗಿ ಮಳೆಯ ಕೊರತೆ ಕಾಡಿದ್ದು, ಸ್ಥಳೀಯರಿಗೇ ನೀರಿನ ಅಭಾವ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೂ ನೀರನ್ನು ಪೂರೈಸಿದಾಗ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಮಿತಿಮೀರಲಿದೆ. ಇದರ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಹಾಗೂ ಖಜಾಂಚಿ ಪಟ್ಟಡ ಬಿ ಅರುಣ್ ಚಂಗಪ್ಪ ಇದ್ದರು.