ಮಡಿಕೇರಿ, ಅ. ೬: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಮಠದ ಪೀಠಾಧಿಪತಿ ಶ್ರೀ ವಾಸುದೇವ ಸದಾಶಿವ ಸ್ವಾಮೀಜಿ ಅವರು ತಲಕಾವೇರಿಯ ಕೈಲಾಸಾಶ್ರಮದಲ್ಲಿ ಗುರುವಾರ ವಾಸ್ತವ್ಯ ಹೂಡಿದ್ದು ಶುಕ್ರವಾರ ಸಂಜೆವರೆಗೂ ಇದ್ದರು. ಅವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯೊಂದು ದಾಖಲಾಗಿತ್ತು. ಆ ಬಳಿಕ ಅವರು ತಮ್ಮ ಮಠದಿಂದ ನಿರ್ಗಮನಗೊಂಡಿದ್ದು ಎಲ್ಲಿ ಹೋಗಿದ್ದಾರೆ ಎಂಬುದು ಅವರ ಶಿಷ್ಯ ವರ್ಗಕ್ಕೆ ಅರಿವಾಗದೆ ನಿಗೂಢವಾಗಿತ್ತು . ತಲಕಾವೇರಿಯಲ್ಲಿ ಅವರು ತಂಗಿದ್ದಾರೆ ಎಂಬ ವಿಷಯ ತಿಳಿದು “ಶಕ್ತಿ” ಕೈಲಾಸಾಶ್ರಮಕ್ಕೆ ತೆರಳಿ ಅವರನ್ನು ಸಂದರ್ಶಿಸಿತು. ಮಠದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂದು ಸ್ವಾಮೀಜಿ ಸೇರಿದಂತೆ ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್, ಅಕೌಂಟೆAಟ್ ಜಯಲಕ್ಷಿö್ಮ, ಪರಿಚಾರಕ ಶ್ರೇಯಸ್ ಹಾಗೂ ವಿಗ್ರಹಗಳನ್ನು ಪಡೆದಿರುವರೆನ್ನಲಾದ ನಾಗೇಂದ್ರ ಪ್ರಸಾದ್ ಎಂಬವರುಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಿತರಕ್ಷಣಾ ವೇದಿಕೆಯಿಂದ ಈ ದೂರು ನೀಡಲಾಗಿತ್ತು.
ಬಾಳೆಕುದ್ರು ಸದಾಶಿವ ಸ್ವಾಮೀಜಿ ಅವರು ರಹಸ್ಯವಾಗಿ ತಲಕಾವೇರಿಗೆ ಬಂದು ವಾಸ್ತವ್ಯ ಹೂಡಿದ್ದ ಕುರಿತು ಕುತೂಹಲದಿಂದ ಅವರಲ್ಲಿ ಈ ಬಗ್ಗೆ ಅಭಿಪ್ರಾಯ ಕೇಳಲಾಯಿತು. ನೀವು ಇಲ್ಲಿಗೆ ಬಂದ ಉದ್ದೇಶವೇನು ಎಂದಾಗ ಅನವಶ್ಯಕ ಗೊಂದಲದಿAದ ನಮಗೂ ರಕ್ಷಣೆ ಬೇಕಾಗಿದೆ. ಅದಕ್ಕಾಗಿ ಇಲ್ಲಿಗೆ ಬರಬೇಕಾಯಿತು. ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಲು ನಮ್ಮ ತಂಡ ಸಿದ್ಧವಾಗಿದೆ ಎಂದು "ಶಕ್ತಿ" ಯೊಂದಿಗೆ ಸ್ಪಷ್ಟಪಡಿಸಿದರು. ವಿಗ್ರಹ ಮಾರಾಟದ ಆರೋಪ ಹಾಗೂ ಮೊಕದ್ದಮೆ ವಿಚಾರವನ್ನು “ಶಕ್ತಿ” ಪ್ರಸ್ತಾಪಿಸಿತು. ಈ ಬಗ್ಗೆ ಸ್ವಾಮೀಜಿಯವರು ತಮ್ಮ ಸ್ಪಷ್ಟ ನಿಲುವನ್ನು ಈ ಕೆಳಗಿನಂತೆ ವ್ಯಕ್ತಪಡಿಸಿದರು.
ಹಿಂದಿನಿAದಲೂ ಪಿತೂರಿ
“ಈ ಒಂದು ಪಿತೂರಿ ವಿಷಯ ನಮ್ಮ ಮಠದಲ್ಲಿ ಸುಮಾರು ೨೦೧೩ ರಿಂದ ನಡೆದು ಬಂದಿದೆ. ನಮ್ಮ ಹಿರಿಯ ಗುರುಗಳ ಕಾಲದಲ್ಲಿಯೂ ಹೇಗಾದರೂ ಮಾಡಿ ಅವರನ್ನು ಪೀಠದಿಂದ ಇಳಿಸಲು ಅಲ್ಲಿರುವ ಕೆಲವು ಶಿಷ್ಯವರ್ಗ ಎಂದು ಹೇಳಿಕೊಳ್ಳುವಂತಹ ಹಲವು ಸ್ಥಳೀಯರು ಸಂಚಿನಿAದ ಕಿರುಕುಳ ನೀಡುತ್ತಲೇ ಬಂದಿದ್ದಾರೆ, ಮಠವನ್ನು ಹೇಗಾದರೂ ಮಾಡಿ ತಮ್ಮ ಅಧೀನಕ್ಕೆ ಪಡೆಯಲು ಷಡ್ಯಂತ್ರ ನಡೆಸುತ್ತಲೇ ಇದ್ದರು. ಮುಖ್ಯವಾಗಿ ಮಠದ ಭೂಮಿಯ ಮೇಲೆ ಹದ್ದುಗಣ್ಣಿಟ್ಟು ಅದನ್ನು ವಶಪಡಿಸಿಕೊಳ್ಳುವ ಸಲುವಾಗಿ ಕಾರ್ಯಾಚರಣೆ ನಡೆಸುತ್ತಲೇ ಇದ್ದು ತಾವು ಮಠದ ಅಧಿಕಾರ ವಹಿಸಿಕೊಂಡ ಬಳಿಕ ಇನ್ನೂ ಅಧಿಕವಾಗಿ ಈ ಕಾರ್ಯ ತಂತ್ರವನ್ನು ಮುಂದುವರಿಸಿದ್ದಾರೆ. ಮಠದ ವ್ಯವಸ್ಥೆಯಲ್ಲಿ ಕಾಲಾನುಕ್ರಮದಲ್ಲಿ ಕೆಲವು ವಿಗ್ರಹಗಳು (ಬಿಂಬಗಳು) ಭಿನ್ನವಾಗಿ ಹೋಗಿವೆ, ಹಾನಿಯಾಗಿವೆ. ಕರಾಳ ಉಗ್ರ ಲಕ್ಷಿö್ಮನರಸಿಂಹ ಸೇರಿದಂತೆ ಹಲವು ವಿಗ್ರಹಗಳೂ ಎಲ್ಲ ಶಿಷ್ಯರಿಗೇ ತಿಳಿದಿರುವಂತೆ ಭಿನ್ನವಾಗಿವೆ. ಹಿಂದಿನ ಗುರುಗಳ ಕಾಲದಲ್ಲಿ ಅಂತಹ ಬಿಂಬಗಳಿಗೆ ಸರಿಯಾಗಿ ಪೂಜೆಗಳು ಆಗುತ್ತಿರಲಿಲ್ಲ ಮತ್ತು ಪ್ರತ್ಯೇಕವಾಗಿ ಕೆಲವು ಬಿಂಬಗಳನ್ನು ಪೂಜಿಸಲಾಗುತ್ತಿತ್ತು. ೨೦೧೮ರಲ್ಲಿ ಪ್ರತಿಷ್ಠೆಯಾದ ಕೆಲವೊಂದು ಬಿಂಬಗಳು, ಅದು ಪ್ರಾಚೀನ ಅಲ.್ಲ ನಮ್ಮ ಪರಂಪರೆಯಿAದ ಬಂದದ್ದಲ್ಲ. ಅಂತಹ ಬಿಂಬಗಳನ್ನು ಪ್ರಶ್ನಾಚಿಂತನೆಯಲ್ಲಿ ನೋಡಿ ದೈವ ಭಕ್ತರಾದ ಮೆಟಲ್ ವರ್ತಕರೊಬ್ಬರಿಂದ ದುರಸ್ತಿಗೊಳಿಸಲು ನೀಡಿ ನಾವು ಸಿದ್ಧತೆ ಮಾಡಿದ್ದೇವೆ, ಯಾವುದೇ ರೀತಿಯಲ್ಲಿ ನಾಪತ್ತೆಯಾಗಿಲ್ಲ. ಅವರು ಉಪಕಾರ ಮಾಡಿದ್ದವರೇ ಹೊರತು ಯಾವದೇ ಅಕ್ರಮ ಎಸಗಿಲ್ಲ. ಆದರೆ, ಕೆಲವು ಪೂರ್ಣವಾಗಿ ಹಾಳಾದ ಬಿಂಬಗಳನ್ನು ಅನಿವಾರ್ಯವಾಗಿ ವಿಸರ್ಜಿಸಲಾಗಿದೆ.
ಹಿರಿಯರ ಮಾರ್ಗದರ್ಶನವನ್ನು ತೆಗೆದುಕೊಂಡಾಗ ಭಿನ್ನವಾಗಿರುವ ಬಿಂಬಗಳಿಗೆ ಪೂಜೆ ಮಾಡುವುದು ಅಶಾಸ್ತ್ರೀಯ ಎಂಬುದು ಖಚಿತಗೊಂಡಿತು. ಆದ್ದರಿಂದ, ಸಾಧ್ಯವಾದಷ್ಟು ಮಟ್ಟಿಗೆ ಅವುಗಳನ್ನು ಸರಿಯಾದ ರೂಪಕ್ಕೆ ತಂದು, ಧಾರ್ಮಿಕ ಪ್ರಕ್ರಿಯೆಗಳ ಮೂಲಕ ಪೂಜೆ ಮಾಡಬೇಕೆಂಬ ಉದ್ದೇಶದಿಂದ ಆ ಬಿಂಬಗಳನ್ನು ವರ್ತಕರಿಗೆ ನೀಡಲಾಗಿತ್ತು. ಅವರು ಅದನ್ನು ಅತ್ಯಂತ ಶ್ರದ್ಧೆ ಮತ್ತು ಪೂಜ್ಯ ಭಾವನೆಯಿಂದ ಗೌರವಯುತವಾಗಿ ಸಿದ್ಧಪಡಿಸಿ ಕೊಟ್ಟಿದ್ದಾರೆ. ನಂತರ ಅದಕ್ಕೆ ಬೇಕಾದ ದಾಖಲೆ ಪತ್ರಗಳನ್ನು ಮಾಡಿಕೊಂಡು, ನಮ್ಮ ಶ್ರೀಮಠದಲ್ಲಿ ಉಪಾಸನೆ ಮಾಡಿಕೊಂಡು ಬರಲಾಗಿದೆ. ನಮ್ಮ ಪರಂಪರೆಗೆ ಸಂಬAಧಪಟ್ಟAತಹ ಎಲ್ಲಾ ಪ್ರಾಚೀನ ಬಿಂಬಗಳು ಎಲ್ಲವೂ ಸಹ ನಮ್ಮ ಶ್ರೀಮಠದಲ್ಲಿ ಸುಭದ್ರವಾಗಿವೆ. ಅದು ಎಲ್ಲಿಯೂ ಹೋಗಿಲ್ಲ, ಕಳುವಾಗಿಲ್ಲ.
ಮಠದ ಹಿನ್ನೆಲೆ ಅವಲೋಕನ
ಆದಿ ಶಂಕರರು ಸ್ಥಾಪಿಸಿದ ಈ ಮಠದ ಇತಿಹಾಸವನ್ನು ಅವಲೋಕಿಸಿದರೆ ಇದು ಒಂದು ಸಮಾಜದ ಬ್ರಾಹ್ಮಣ ವರ್ಗಕ್ಕೆ ಮಾತ್ರ ಸೀಮಿತ ಅಲ್ಲ. ಇದು ಶಂಕರಾಚಾರ್ಯರ ಪೂರ್ವದ ಭಾಗವತ ಸಂಪ್ರದಾಯವನ್ನೂ ಒಳಗೊಂಡಿದೆ. ಪ್ರಹ್ಲಾದ, ಶಾಂಡಿಲ್ಯ ಮಹರ್ಷಿಗಳು, ಕೈವಲ್ಯ ತೀರ್ಥರು ಬಳಿಕ ಆದಿ ಶಂಕರಾಚಾರ್ಯರು ಶ್ರೀಮಠಕ್ಕೆ ಬಂದು ಭಾಗವತ ಮಠಕ್ಕೆ ಅದ್ವೆöÊತ ಸಿದ್ದಾಂತವನ್ನು ಬೋಧಿಸುತ್ತಾರೆ. ಹೀಗೆ ಭಾಗವತ ಮತ್ತು ಅದ್ವೆöÊತ ತತ್ವಗಳೆರಡರ ಸಂಗಮ ಇಲ್ಲಿದೆ. ಭೂತಾರಾಧನೆ, ದೈವಾರಾಧನೆಗಳೂ ಇಲ್ಲಿ ನಡೆಯುತ್ತಿವೆ.
ತುಳುನಾಡಿನ ಶಿವಳ್ಳಿ ಬ್ರಾಹ್ಮಣರು, ಕಂದಾವರದವರು, ಕೋಟ ಬ್ರಾಹ್ಮಣರು, ಸ್ಥಾನಿಕರು, ಹೆಬ್ಬಾರರು ಮತ್ತು ವೈದ್ಯ ಬ್ರಾಹ್ಮಣರು ಇವರಿಗೆಲ್ಲರಿಗೂ ಮೂಲ ಮಠವಿದು. ಇದು ಕೇವಲ ಸ್ಥಳೀಯÀ ಕೆಲವರ ಒಂದು ಕಪಿಮುಷ್ಟಿಗೆ ಬರಬೇಕು ಎನ್ನುವ ದುರಾಲೋಚನೆಯಿಂದ ಈ ಷಡ್ಯಂತ್ರ ಆಗಿದೆ. ನಮ್ಮ ಮಠದ ಶಿಷ್ಯವೃಂದದವರು ಶ್ರೀಮಠಕ್ಕೆ ಬಂದಾಗ, "ಇದೆಲ್ಲ ಮೂಲ ಬಿಂಬಗಳು, ಇದೆಲ್ಲ ಮಠದಲ್ಲಿಯೇ ಇದೆ, ಇಲ್ಲಿ ಪೂಜೆ ಆಗುತ್ತಿದೆ" ಎಂದು ನಾವೇ ಖುದ್ದಾಗಿ ತೆರೆದು ತೋರಿಸಿದ್ದೇವೆ.
ಆದರೂ ಕಪೋಲಕಲ್ಪಿತ ಆರೋಪವನ್ನು ನಮ್ಮ ಹಿಂದಿನ ಗುರುಗಳ ಮೇಲೆಯೂ ಮಾಡಿದ್ದು ಅವರ ವಿರುದ್ಧವೂ ಮೂರು ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ವಿನಾಕಾರಣ ನಮ್ಮವರೇ ಆದ ಕೆಲವರು ದುಷ್ಟ ಬುದ್ಧಿಯಿಂದ ಹೀಗೆಲ್ಲ ಮಾಡುತ್ತಿದ್ದಾರೆ” ಎಂದು ಬಾಳೆಕುದ್ರು ಸದಾಶಿವ ಸ್ವಾಮೀಜಿ “ಶಕ್ತಿ” ಯೊಂದಿಗೆ ತಮ್ಮ ಅಳಲು ತೋಡಿಕೊಂಡರು.
ಸ್ವಾಮೀಜಿಯವರೊಂದಿಗೆ ಪರಿಚಾರಕ ಶ್ರೇಯಸ್ ಎಂಬವರೂ ಬಂದಿದ್ದು ಶುಕ್ರವಾರ ರಾತ್ರಿ ಕಾರಿನಲ್ಲಿ ಇಬ್ಬರೂ ತಲಕಾವೇರಿಯಿಂದ ನಿರ್ಗಮಿಸಿದ್ದಾರೆ.