*ಗೋಣಿಕೊಪ್ಪ, ನ. ೪: ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಮಚ್ಚಮಾಡ ಸುಮಂತ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಮಾತನಾಡಿ, ೧೯೪೭ ಸ್ವತಂತ್ರ ಬಂದರೂ ಸಹ ಸುಮಾರು ೧೨೧ ವರ್ಷಗಳ ಹಿಂದೆ ಕೊಡಗಿನಲ್ಲಿರುವಂತಹ ಹಿರಿಯ ಚೇತನಗಳು ಸಹಕಾರ ವ್ಯವಸ್ಥೆಗಳನ್ನು ಕೊಡಗಿನಲ್ಲಿ ಸ್ಥಾಪನೆ ಮಾಡುವ ಮೂಲಕ ಇಡೀ ಭಾರತ ದೇಶದಲ್ಲೇ ಎರಡನೇ ಸ್ಥಾನದಲ್ಲಿ ಸ್ಥಾಪನೆ ಮಾಡಿದ ಕೀರ್ತಿ ಜಿಲ್ಲೆಗೆ ದೊರಕಿದೆ ಎಂದರು.

ಸುಮಾರು ೬೯ ಸಹಕಾರ ಸಂಘಗಳಲ್ಲಿ ಸುಮಾರು ೯ ಸಹಕಾರ ಸಂಘಗಳು ನೂರು ವರ್ಷ ಪೂರೈಸಿದಂತ ಇತಿಹಾಸವಿದೆ. ಕೊಡಗಿನಲ್ಲಿರುವಂತಹ ಸಹಕಾರ ಸಂಘಗಳಲ್ಲಿ ವಿಶೇಷವಾದ ಸಹಕಾರ ವ್ಯವಸ್ಥೆ ಎಂದರೆ ರೈತರು ಬೆಳೆದಂತಹ ಭತ್ತವನ್ನು ಸದಸ್ಯರಿಗೆ ಸದಸ್ಯತ್ವವನ್ನು ನೀಡುವುದರ ಮೂಲಕ ದವಸ ಭಂಡಾರದಲ್ಲಿ ಎಲ್ಲಾ ವ್ಯವಹಾರಗಳು ಧಾನ್ಯದ ರೂಪದಲ್ಲಿ ನಡೆಯುವಂತಹ ಏಕೈಕ ಸಹಕಾರ ಸಂಘವೆAದರೆ ಕೊಡಗು ಜಿಲ್ಲೆಯಲ್ಲಿ ಇರುವಂತಹ ದವಸ ಭಂಡಾರಗಳು ಮಾತ್ರ. ಸುಮಾರು ೧೩ ಸಹಕಾರ ದವಸ ಭಂಡಾರಗಳು ಕೆಲಸವನ್ನು ಪ್ರಾರಂಭಿಸಿ ಕ್ರಿಯಾಶೀಲರಾಗಿದ್ದರು. ಆದರಿಂದು ಡಿಸಿಸಿ ಬ್ಯಾಂಕಿನ ಮತದಾನಕ್ಕೋಸ್ಕರ ದವಸ ಭಂಡಾರಗಳು ಉಳಿದಿದೆ ಎಂಬAತಾಗಿರುವುದನ್ನು ಅತಿ ಬೇಸರದಿಂದ ಹೇಳಬೇಕಾಗುತ್ತದೆ ಎಂದರು. ಶೆಟ್ಟಿಗೇರಿ ಸಹಕಾರ ಪತ್ತಿನ ಸಂಘದ ವಿಶೇಷ ಎಂದರೆ ಸುಮಾರು ೫೦ ವರ್ಷಗಳಲ್ಲಿ ೨೧ ಅಧ್ಯಕ್ಷರು ಬದಲಾವಣೆ ಆಗಿರುವುದು, ಒಂದು ವರ್ಷಕ್ಕೆ ಆರು ತಿಂಗಳಿಗೆ ಅಧ್ಯಕ್ಷರನ್ನು ಬದಲಾವಣೆ ಮಾಡಿದಲ್ಲಿ ಆಡಳಿತ ವೈಫಲ್ಯ, ಆಡಳಿತ ಕುಂಠಿತ ಸಂಘದ ಅಭಿವೃದ್ಧಿ ಸಮೇತ ಕುಂಠಿತ ಆಗುವಂತ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಕುಂಞAಗಡ ಅರುಣ್ ಭೀಮಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಟಿ.ಶೆಟ್ಟಿಗೇರಿ, ತಾವಳಗೇರಿ, ನೆಮ್ಮಲೆ, ಹರಿಹರ ಗ್ರಾಮಗಳ ಕೃಷಿಕ ರೈತ ಸದಸ್ಯರು, ಒಟ್ಟು ಸೇರಿ ಒಂದೊAದು ಗ್ರಾಮದಲ್ಲಿ ಪ್ರತ್ಯೇಕವಾಗಿ ಸರ್ವಿಸ್ ಕೋ ಆಪರೇಟಿವ್ ಸೊಸೈಟಿ ನಡೆಸುತ್ತಿದ್ದರು ಈ ಎಲ್ಲಾ ಗ್ರಾಮಗಳನ್ನು ವಿಲೀನಗೊಳಿಸಿ ಸರಕಾರದ ಆದೇಶದ ಅನ್ವಯ ಸೆಪ್ಟೆಂಬರ್ ೨೬, ೧೯೭೬ರಲ್ಲಿ ವ್ಯವಸಾಯ ಸೇವಾ ಸಂಘ ಎಂಬುದಾಗಿ ಸ್ಥಾಪಿಸಲಾಯಿತೆಂದರಲ್ಲದೇ, ಸಂಘದಲ್ಲಿ ನಡೆಸುತ್ತಿರುವ ವಹಿವಾಟಿನ ಬಗೆ ಮಾಹಿತಿ ನೀಡಿ, ಸಂಘವು ೨೦೨೫/ ೨೬ನೇ ಸಾಲಿನಲ್ಲಿ ೯೦ ಲಕ್ಷ ೧೦ ಸಾವಿರ ನಿವ್ವಳ ಲಾಭ ಗಳಿಸಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಪಳೆಯಂಡ ರಾಬಿನ್ ದೇವಯ್ಯ ಅವರು ಮಾತನಾಡಿ, ಕೊಡಗಿನಲ್ಲಿ ೯೦ ದವಸ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದೆ ನಮ್ಮ ಪೂರ್ವಿಕರ ಶ್ರಮದ ಫಲವಾಗಿ ಇಂದು ನಾವು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಸಂಘವು ೭೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವಂತಶಲೀ ಎಂದು ಆಶಿಸಿದರಲ್ಲದೇ, ಮುಂದಿನ ಪೀಳಿಗೆಗೆ ಸಹಕಾರ ಸಂಘಗಳನ್ನು ಉಳಿಸಿಕೊಳ್ಳುವಂತ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.

ಟಿ ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಚ್ಚಮಾಡ ಸುಮಂತ್ ಅವರು ಮಾತನಾಡಿ, ಸಂಘದ ಸದಸ್ಯರು ಇದುವರೆವಿಗೂ ಸಂಘದಲ್ಲಿ ವ್ಯವಹಾರ ನಡೆಸುವ ಮೂಲಕ ಸಂಘವನ್ನು ಮುನ್ನಡೆಸಲು ಪ್ರಯತ್ನಪಟ್ಟಿರುವ ಹಾಗೇ ಇನ್ನು ಮುಂದೆಯೂ ಸಹಕಾರ ನೀಡುವುದರೊಂದಿಗೆ ಸಂಘವು ಜಿಲ್ಲೆಯಲ್ಲಿ ಎರಡನೇ ಸ್ಥಾನ ಗಳಿಸಿದ ಹಾಗೆಯೇ ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಲು ಸಹಕಾರ ನೀಡುವಂತೆ ಮನವಿ ಮಾಡಿದರು.

ಸುವರ್ಣ ಮಹೋತ್ಸವದ ಸಂದರ್ಭ ಸಂಘದ ಮಾಜಿ ಅಧ್ಯಕ್ಷರಿಗೆ ಹಾಗೂ ಹಾಗೂ ಅತಿಥಿ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸಂಘದ ಸರ್ವ ಸದಸ್ಯರಿಗೆ ಗೋಡೆ ಗಡಿಯಾರ ಕೊಡುಗೆ ನೀಡುವುದರೊಂದಿಗೆ ಸಿಹಿ ಹಂಚಲಾಯಿತು. ಟಿ ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚಟ್ಟಂಗಡ ರಂಜು ಕರುಂಬಯ್ಯ ಅವರು ಸ್ವಾಗತಿಸಿ, ತೀತೀರ ಸೋಮಣ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೈಲಜಾ, ನಿರ್ದೇಶಕರುಗಳಾದ ಮಚ್ಚಮಾಡ ಯು..ಮುತ್ತಪ್ಪ , ಎಂ.ಎA ನಾಚಪ್ಪ , ಕಟ್ಟೇರ ಎ.ವಿಶ್ವನಾಥ್, ಚೊಟ್ಟೆಯಂಡಮಾಡ ಎಂ. ಮುದ್ದಯ್ಯ, ಸಿ. ಟಿ.ಸರಿತ, ಬೊಳ್ಳಜೀರ ಸಿ. ಸುಶೀಲ, ಅಂಡಮಾಡ ಎಂ ವಿಶ್ವನಾಥ್, ತೀತೀರ ಸುಬ್ರಮಣಿ, ಕುಡುವಚೇರಿರ ಎಸ್. ಉಮೇಶ್, ಎಂ.ರವಿ, ಆರ್. ಸಂಪತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.