ಕಣಿವೆ, ನ. ೩: ತಾ.೪ ರಂದು (ಇಂದು) ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶಿಕ್ಷಣ ಇಲಾಖೆಯ ಕುರಿತಾದ ಸಂವಾದ ಹಾಗೂ ವಿಶೇಷ ಸಭೆಯಲ್ಲಿ ಕುಶಾಲನಗರ ತಾಲೂಕಿನ ಅತ್ತೂರಿನ ಜ್ಞಾನಗಂಗಾ ವಸತಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಆಗಿರುವ ಶಿಕ್ಷಣ ತಜ್ಞ ಬಿ.ಎಸ್.ನಿಂಗಪ್ಪ ಅವರು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.