ಮಡಿಕೇರಿ, ನ. ೩: ತಾಯಿ ಮಣ್ಣು / ವಂಶಪಾರAಪರ್ಯ, ಭೂಮಿ ಮತ್ತು ಮಾತೃಭಾಷೆ ಕೊಡವ ಜನಾಂಗದಲ್ಲಿ ಪರಮೋಚ್ಚವಾದದ್ದು ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿದರು. ಪೊನ್ನಂಪೇಟೆಯಲ್ಲಿ ನಡೆದ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,

ಮಹಾನ್ ತತ್ವಜ್ಞಾನಿ ಜಾರ್ಜ್ ಬರ್ನಾರ್ಡ್ ಶಾ ಅವರ ಮಾತನ್ನು ಉಲ್ಲೇಖಿಸಿ ಮಾತನಾಡಿ, ಯಾವುದೇ ಸಮುದಾಯವನ್ನು ನಾಶ ಮಾಡಲು ಬಯಸುವವರು ಮೊದಲು ಆ ಸಮುದಾಯದ ಭೂಮಿ ಮತ್ತು ಭಾಷೆಯನ್ನು ನಾಶ ಮಾಡುತ್ತಾರೆ. ೧೯೫೬ರಲ್ಲಿ ಕೊಡವಲ್ಯಾಂಡ್ ಕರ್ನಾಟಕದಲ್ಲಿ ವಿಲೀನವಾದಾಗಿನಿಂದ ಕೊಡವರ ವಿಷಯದಲ್ಲಿ ಜಾರ್ಜ್ ಬರ್ನಾರ್ಡ್ ಶಾ ಅವರ ಈ ಸತ್ಯವಾಣಿ ನಿಜವಾಗಿದೆ ಎಂದರು.

ಕೊಡವಲ್ಯಾAಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತವನ್ನು ಸಾಧಿಸಲು ನಮ್ಮ ವಂಶಪಾರAಪರ್ಯ ಭೂಮಿಯನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡದಂತೆ ನೋಡಿಕೊಳ್ಳಬೇಕು. ಭೂಮಿ ಮತ್ತು ಭಾಷೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸಾಧಿಸುವ ಹಾಲ್‌ಮಾರ್ಕ್. ಭೂಮಿ ಇಲ್ಲದೆ ಕೇವಲ ಕೊಡವಲ್ಯಾಂಡ್‌ನ ಅಸ್ಥಿಪಂಜರವನ್ನು ಬಯಸುವುದು ತರ್ಕಹೀನ ಎಂದು ಎನ್. ಯು. ನಾಚಪ್ಪ ಅಭಿಪ್ರಾಯಪಟ್ಟರು.

ಕೊಡವರು ವಿಶ್ವದ ಅತಿದೊಡ್ಡ ಜನಾಂಗೀಯ ವೈವಿಧ್ಯತೆಯ ರಾಷ್ಟçದಲ್ಲಿ ನಮ್ಮ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ಮಾತೃಭೂಮಿಯಲ್ಲಿ ನಮ್ಮ ಭವಿಷ್ಯವನ್ನು ನಿರ್ಧರಿಸಲು ಸಂವಿಧಾನದ ಅಡಿಯಲ್ಲಿ ಸುರಕ್ಷಿತ ಸ್ಥಳ ಮತ್ತು ಸ್ಥಾನವನ್ನು ಬಯಸುತ್ತೇವೆ. ಇದು ನಮ್ಮ ಸಹಜ ಹಕ್ಕು, ಜನ್ಮಸಿದ್ದ ಹಕ್ಕು, ಮೂಲಭೂತ ಹಕ್ಕು, ಸಂವಿಧಾನಾತ್ಮಕ ಹಕ್ಕು ಮತ್ತು ಮಾನವ ಹಕ್ಕು. ಭೂಮಿಯ ಮೇಲಿನ ಯಾವುದೇ ಶಕ್ತಿಯೂ ಇದನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಕೊಡವ ಸಾಮೂಹಿಕ ಸಂಪರ್ಕ ಅಭಿಯಾನವನ್ನು ಸಿಎನ್‌ಸಿಯಿಂದ ಕೊಡಗಿನಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮಗಳ ಮೂಲಕ ಆಯೋಜಿಸಲಾಗುತ್ತಿದೆ. ಸಿಎನ್‌ಸಿಯ ಈ ಸಾಮೂಹಿಕ ಸಂಪರ್ಕ ಕಾರ್ಯಕ್ರಮವು ಮುಖ್ಯವಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸಂವಿಧಾನದ ೩೭೧ ನೇ ವಿಧಿ, ೫ ನೇ ಮತ್ತು ೬ ನೇ ಪರಿಚ್ಛೇದಗಳ ಅಡಿಯಲ್ಲಿ ಸ್ವಯಂ ಆಡಳಿತದ ಮೇಲೆ ಗಮನ ಹರಿಸುತ್ತದೆ. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಲಾದ “ಸಂಘ” ಅದೃಶ್ಯ ಕ್ಷೇತ್ರ ಮಾದರಿಯಲ್ಲಿ ಪಾರ್ಲಿಮೆಂಟ್ ಮತ್ತು ರಾಜ್ಯ ಶಾಸನಸಭೆಯಲ್ಲಿ ದೇಶೀಯ ಪ್ರಕೃತಿ ಆರಾಧಕ ಕೊಡವರಿಗೆ ಪ್ರತ್ಯೇಕ ಶಾಸನಸಭಾ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿದರು.

ಸಂವಿಧಾನದ ವಿಧಿ ೪೯ ಮತ್ತು ೧೯೬೪ರ ವಿಶ್ವಸಂಸ್ಥೆಯ ವೆನಿಸ್ ಚಾರ್ಟರ್ ಅಡಿಯಲ್ಲಿ ದೇವಟ್‌ಪರಂಬು ಕೊಡವ ನರಮೇಧ ದುರಂತದ ಸ್ಥಳದಲ್ಲಿ, ಹಾಗೆಯೇ ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಅರಮನೆಯಲ್ಲಿ ಸಂಚುಗಳ ಮೂಲಕ ನಡೆಸಲಾದ ಕೊಡವ ರಾಜಕೀಯ ಮಾರಣಹೋಮಗಳ ಸ್ಥಳದಲ್ಲಿ ಅಂತರರಾಷ್ಟಿçÃಯ ನರಮೇಧ ಸ್ಮಾರಕ ನಿರ್ಮಾಣ, ಕೊಡವ ಅಧ್ಯಾತ್ಮಿಕ ವಾಸಸ್ಥಾನಗಳು (ಮಂದ್), ಪವಿತ್ರ ಕಾಡುಗಳು (ದೇವಬನ) ಮತ್ತು ಇತರ ಪರಂಪರೆಯ ತಾಣಗಳನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಬೇಕು, ಸಂವಿಧಾನದ ೮ ನೇ ಪರಿಚ್ಛೇದದಲ್ಲಿ ಶಾಸ್ತಿçÃಯ ಕೊಡವ ಭಾಷೆಯನ್ನು ಸೇರಿಸಬೇಕು, ದೊಡ್ಡ ಪ್ರಮಾಣದ ಜನಸಂಖ್ಯಾ ಬದಲಾವಣೆಯನ್ನು ತಡೆಯಲು, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರ ಮಾದರಿಯಲ್ಲಿ ಕೊಡಗಿನ ಪ್ರದೇಶವನ್ನು ‘ಇನ್ನರ್ ಲೈನ್ ಪರ್ಮಿಟ್’ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿದರು.

ಜನಜಾಗೃತಿ ಕಾರ್ಯಕ್ರಮದಲ್ಲಿ ಮೀದೇರಿರ ಕವಿತಾ ರಾಮು, ಕೂಕಂಡ ಲತಾ ಪೂವಯ್ಯ, ಚಿರಿಯಪಂಡ ರಾಜ ನಂಜಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಆಲೆಮಾಡ ರೋಷನ್, ಚೊಟ್ಟೆಯಂಡಮಾಡ ಉತ್ತಯ್ಯ, ಆಲೆಮಾಡ ನವೀನ್, ಮತ್ರಂಡ ಜಯ, ಮತ್ರಂಡ ರಾಜೇಂದ್ರ, ಮಂಡAಗಡ ಬೋಪಣ್ಣ, ಚೋಣಮಾಡ ವಿಕ್ರಮ್, ಕಾಯಪಂಡ ಚಿಣ್ಣಪ್ಪ, ಮತ್ರಂಡ ನವೀನ್, ಕೊಟ್ಟಂಗಡ ಸುಬ್ಬಯ್ಯ, ಕೋದೆಂಗಡ ಶಂಭು ನಾಣಯ್ಯ, ಆಲೆಮಾಡ ಚೆಂಗಪ್ಪ, ಕೇಚೆಟ್ಟಿರ ಶರಣು ತಿಮ್ಮಯ್ಯ, ಮತ್ರಂಡ ನರೇಂದ್ರ, ಕೋಟೆರ ಕವಿನ್, ಅಪ್ಪೆಂಗಡ ಸುಜಿತ್ ಸೋಮಯ್ಯ, ಕೋಳೆರ ರಾಜ ನರೇಂದ್ರ, ಆಲೆಮಾಡ ಸುಧೀರ್, ಬೊಟ್ಟಂಗಡ ಗಿರೀಶ್, ಕಾಕಮಾಡ ದೀಕ್ಷಿತ್, ವಲ್ಲಂಡ ಶಂಭು, ಕೇಚೆಟ್ಟಿರ ಸಿಂಗಪ್ಪ, ಮುಕ್ಕಾಟಿರ ಅರುಣ, ಗಾಂಡAಗಡ ಪೂಣಚ್ಚ, ಆಲೆಮಾಡ ರಿಚಿ ಕಾರ್ಯಪ್ಪ , ಆಲೆಮಾಡ ರಮೇಶ್, ಕೊಟ್ಟಂಗಡ ಅಯ್ಯಪ್ಪ, ಮುದ್ದಿಯಡ ಧವನ್ ಅಪ್ಪಣ್ಣ, ಮಲ್ಚೀರ ಲೋಕೇಶ್, ಕಳ್ಳಿಚಂಡ ಪೂಣಚ್ಚ, ಕಡೆಮಾಡ ಮನೋಜ್ ಮೇದಪ್ಪ, ಮುದ್ದಿಯಡ ಮುದ್ದಪ್ಪ, ಕಲ್ಲಿಚಂಡ ಉತ್ತಪ್ಪ, ಮತ್ರಂಡ ಮಂಜು, ಕಡೆಮಾಡ ಸುಚನ್ ಸುಬ್ಬಯ್ಯ, ಮೀದೇರಿರ ರಾಮು, ಅಜ್ಜಿಕುಟ್ಟಿರ ರತನ್, ಮುದ್ದಿಯಡ ಪ್ರಕಾಶ್, ಚೀರಂಡ ಬೋಪಯ್ಯ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಕೂಕಂಡ ರಾಜ ಕಾವೇರಪ್ಪ, ಕೊಟ್ಟುಕತ್ತಿರ ಸೋಮಣ್ಣ, ಚೀರಂಡ ಅಯ್ಯಪ್ಪ, ಅಪ್ಪೆಂಗಡ ಮಾಲೆ ಪೂಣಚ್ಚ, ಕೊದೆಂಗಡ ದಾದ ಅಪ್ಪಣ್ಣ, ಜಮ್ಮಡ ಮೋಹನ್, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೇರಿನ್, ಕಾಕಮಾಡ ಪೂಣಚ್ಚ, ಚೇಂದಿರ ಬೋಪಣ್ಣ, ಕೊದೆಂಗಡ ವಿಠಲ್, ಕಳಕಂಡ ಸೋಮಯ್ಯ, ಮಚ್ಚಮಾಡ ಸೋಮಣ್ಣ, ಕರ್ತೂರ ಉತ್ತಯ್ಯ, ಮುಕ್ಕಾಟಿರ ಬೋಪಣ್ಣ, ಚಿರಿಯಪಂಡ ದೇವಯ್ಯ, ಚೀರಂಡ ಪೂಣಚ್ಚ, ಮಲ್ಚೀರ ಪೂಣಚ್ಚ, ಕಳಕಂಡ ಮಾಚ್ಚಯ್ಯ, ಬಾಚಮಾಡ ಸೋಮೇಶ್, ಅಜ್ಜಿಕುಟ್ಟಿರ ರಂಜಿ ಬೊಳ್ಳಿಯಪ್ಪ, ಮುಕ್ಕಾಟಿರ ಕವನ್, ಚೊಟ್ಟೆಯಂಡಮಾಡ ಲವ, ಪಟ್ರಪಂಡ ನಂಜಪ್ಪ, ಚಿಮ್ಮಣಮಡ ನಂಜಪ್ಪ, ಪೆಮ್ಮಂಡ ಗಣಪತಿ, ಕೂಕಂಡ ಪೂವಯ್ಯ, ಕಳಕಂಡ ಪ್ರವಿ, ಕೋಣಿಯಂಡ ಸಂಜು ಸೋಮಯ್ಯ, ಕುಪ್ಪುಡಿರ ದೇವಯ್ಯ, ಕೇಚೆಟ್ಟಿರ ಪ್ರಭು, ಗುಡ್ಡಮಾಡ ಕುಟ್ಟಪ್ಪ, ಕಿರುಂದAಡ ರಾಮಪ್ಪ, ಗಾಂಡAಗಡ ಕೌಶಿಕ್ ದೇವಯ್ಯ, ಕಾಟಿಮಾಡ ಡಿಕ್ಕಿ ಅಣ್ಣಯ್ಯ, ಮಾಚಿಮಾಡ ಸಂಜು, ಬಾಚಮಾಡ ಬೊಳ್ಳಿಯಪ್ಪ, ಆಲೆಮಾಡ ರಾಜ ಸೋಮಯ್ಯ, ಮುದ್ದಿಯಡ ಗಣೇಶ್, ಪೆಮ್ಮಂಡ ಕಾರ್ಯಪ್ಪ, ಐನಂಡ ತಿಮ್ಮಯ್ಯ, ಗಾಂಡAಗಡ ಕುಶಾಲಪ್ಪ, ನೆಲ್ಲಿರ ಉತ್ತಪ್ಪ, ಪೆಮ್ಮಂಡ ಲಿಥಿನ್, ಪೆಮ್ಮಂಡ ಗಿರೀಶ್, ಆಲೆಮಾಡ ಕಾರ್ತಿಕ್, ಆಲೆಮಾಡ ಬೋಪಣ್ಣ, ಪೆಮ್ಮಂಡ ನೂತನ್ ಗಣೇಶ್, ಚೆಂಧೀರ ಗಣೇಶ್ ಗಣಪತಿ, ಮಲ್ಲಂಡ ನಟೇಶ್, ಬಾಚಮಾಡ ಪ್ರಕಾಶ್ ರಾಜಪ್ಪ, ಕಾಳಿಮಾಡ ತಿಮ್ಮಯ್ಯ, ಸೋಮೆಯಂಡ ಕಾವೇರಪ್ಪ, ಆಲೆಮಾಡ ಪೂವಯ್ಯ, ಚೊಟ್ಟೇಕಾಳಪಂಡ ಅಚ್ಚಯ್ಯ, ಅಜ್ಜಮಾಡ ಸೋಮಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ ಹಾಜರಿದ್ದರು. ಕೊಟ್ಟುಕತ್ತಿರ ಸೋಮಣ್ಣ ಸ್ವಾಗತಿಸಿದರು, ಆಲೆಮಾಡ ರೋಷನ್ ವಂದನಾರ್ಪಣೆ ಸಲ್ಲಿಸಿದರು.

ಮುಂದಿನ ೯ನೇ ಮಾನವ ಸರಪಳಿ ಕಾರ್ಯಕ್ರಮವು ಕಡಂಗದಲ್ಲಿ ತಾ.೧೧ ರಂದು ಜರುಗಲಿದೆ.