ಶನಿವಾರಸಂತೆ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಇಲಾಖೆಯ ಸಂಚಾರ ನಿಯಂತ್ರಣಾಧಿಕಾರಿ ಮಹೇಂದ್ರಕುಮಾರ್ ಧ್ವಜಾರೋಹಣ ನೆರವೇರಿಸಿ, ಕನ್ನಡ ನಾಡು-ನುಡಿ, ನೆಲ-ಜಲದ ಅಭಿಮಾನದ ಬಗ್ಗೆ ಮಾತನಾಡಿ, ಶುಭ ಕೋರಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಲೋಕೇಶ್, ವರ್ತಕ ಮಂಗಳ ರಾಂ, ಪ್ರಮುಖರಾದ ಆಯುಷ್, ಮಂಜುನಾಥ್, ವಿಜಯಕುಮಾರ್, ಪ್ರವೀಣ್ ಕುಮಾರ್, ಸುದೀಪ್, ಸಂತೋಷ್, ಪ್ರವೀಣ್, ರವಿ, ವೀರಭದ್ರ, ಮಂಜು, ಪೃಥ್ವಿ ಇತರರು ಹಾಜರಿದ್ದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಶ್ರೀವಿಘ್ನೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.ಪೊನ್ನಂಪೇಟೆ: ಕನ್ನಡ ಭಾಷೆ, ಸಂಸ್ಕೃತಿ, ನೆಲ, ನೀರು ಮತ್ತು ಮಣ್ಣನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಮಹತ್ವದ ಜವಾಬ್ದಾರಿ ಇದೆ ಎಂದು ಹಿರಿಯ ವೈದ್ಯ ಡಾ. ಶಿವಪ್ಪ ಅಭಿಪ್ರಾಯಪಟ್ಟರು.
ಸಮಾಜ ಸೇವಾ ಸಮಿತಿ ವತಿಯಿಂದ ಹರಿಶ್ಚಂದ್ರಪುರದ ನಾಯ್ಡು ಮನೆ ಅಂಗಳದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ಕನ್ನಡ ಎಂದರೆ ಪ್ರತಿಯೊಬ್ಬರ ಮನದಲ್ಲಿ ರೋಮಾಂಚನ ಮೂಡುತ್ತದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡ ಭಾಷೆಗಿದೆ. ಕವಿಗಳು, ಕಲಾವಿದರು, ವಿಜ್ಞಾನಿಗಳು, ಇಂಜಿನಿಯರ್ಗಳು, ಸಮಾಜ ಸೇವಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅನೇಕರು ಕನ್ನಡ ನಾಡು ಮತ್ತು ನುಡಿಯನ್ನು ಕಟ್ಟುವಲ್ಲಿ ತಮಗೆ ಅರಿವಿಲ್ಲದಂತೆಯೇ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಮಾತೃಭಾಷೆ ಬೇರೆಯಾಗಿದ್ದರೂ ನಾರಾಯಣಸ್ವಾಮಿ ನಾಯ್ಡು ಅವರು ಕನ್ನಡದ ಅಭಿಮಾನವನ್ನು ಎತ್ತಿಹಿಡಿದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯ, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಕುವೆಂಪು ಹಾಗೂ ಶಿವರುದ್ರಪ್ಪ ಅವರ ಎರಡು ಭಾವಗೀತೆಗಳನ್ನು ಹಾಡಿದರು.
ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪೃಥ್ವಿ ಮಾತನಾಡಿ, ಕನ್ನಡ ಭಾಷೆಯನ್ನು ಮಾತನಾಡುವುದೇ ಒಂದು ಸೊಗಸು. ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಕನ್ನಡದ ಕಂಪನ್ನು ಪಸರಿಸುವಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ನಾರಾಯಣಸ್ವಾಮಿ ನಾಯ್ಡು ಅವರ ಕಾರ್ಯ ಉಪಯುಕ್ತವಾಗಿದೆ ಎಂದರು.
ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಕಾಮತ್ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ನಮ್ಮೆದೆಯ ಉಸಿರು ಎಂದು ಹೇಳಿದರು.
ತೂಕ್ ಬೊಳಕ್ ಅಕಾಡೆಮಿ ಸಂಚಾಲಕ ಮುಲ್ಲೆಂಗಡ ಮದೋಶ್ ಪೂವಯ್ಯ ಮಾತನಾಡಿ, ಕನ್ನಡ ಭಾಷೆ ಮತ್ತು ಮಣ್ಣಿನ ರಕ್ಷಣೆಗಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ. ಕನ್ನಡ ಉಳಿಯಬೇಕಾದರೆ ಅದು ನಮ್ಮ ಹೃದಯ ಮತ್ತು ಮನಸ್ಸಿನ ಭಾಷೆಯಾಗಬೇಕು ಎಂದರು.
ಸಾಧಕರಿಗೆ ಸನ್ಮಾನ
ಸಮಾಜ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ರಮೇಶ್, ರಂಗ ಕಲಾವಿದ ಕೋಳೆರ ಸನ್ನು ಕಾವೇರಪ್ಪ, ಸಾಹಿತಿ ಹಾಗೂ ಪತ್ರಕರ್ತ ಜಗದೀಶ್ ಜೋಡುಬೀಟಿ, ಗೋಣಿಕೊಪ್ಪದ ಡಿ ಗ್ರೂಪ್ ನೌಕರ ನಂಜುAಡ, ಪಂಚಾಯಿತಿ ನೌಕರ ನೌಷದ್, ನೀರುಗಂಟಿ ವಿಶ್ವ, ಅಂಗನವಾಡಿ ಕಾರ್ಯಕರ್ತೆ ಲತಾ, ನಾಡಹಬ್ಬ ಸಮಿತಿ ಸ್ಥಾಪಕ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ಸಮಾಜ ಸೇವಕಿ ಕುಸುಮಾವತಿ, ಆಟೋ ಚಾಲಕಿ ಭವ್ಯ, ಲಕ್ಷಿö್ಮ ಬಸ್ ಮಾಲೀಕ ಕುಟ್ಟನ್ ಕೆ, ಕಿಲ್ಲೇರಿ ಮುತ್ತಪ್ಪ ದೇವಸ್ಥಾನದ ಸ್ಥಾಪಕ ಸಂಜೀವ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಕೆಡಿಪಿ ಸದಸ್ಯ ಸಮ್ಮದ್, ಸಿನಿಮಾ ನಟ ಕಾಡ್ಯಮಾಡ ಸುಮಾನ್, ಪ್ರಮುಖರಾದ ರಾಜಶೇಖರ್, ಚಂದ್ರ, ಕಲಾವಿದ ಮುನ್ನ, ಜಾರ್ಜ್, ಅಶ್ರಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹರಿಶ್ಚಂದ್ರಪುರ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.ಗುಡ್ಡೆಹೊಸೂರು: ಗುಡ್ಡೆಹೊಸೂರು ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಾಲೆಯ ಎಸ್ಡಿ.ಎಂ.ಸಿ ಅಧ್ಯಕ್ಷರಾದ ನಾಗೇಂದ್ರ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯ ಅವರು ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಶೇಖರ್ ಅವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು, ಶಾಲಾ, ಉಸ್ತುವಾರಿ ಸಮಿತಿಯವರು, ಶಿಕ್ಷಕ ವೃಂದದವರು ರಾಜ್ಯೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು. ನಂತರ ಡಾ. ಶ್ರೀ ಶಿವಕುಮಾರ ಸ್ವಾಮಿ ಅವರ ವೃತ್ತದ ಬಳಿ ಕನ್ನಡ ಗೀತೆಗೆ ನೃತ್ಯ ಕಾರ್ಯಕ್ರಮ ನೆರವೇರಿತು.ಮಡಿಕೇರಿ: ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮಡಿಕೇರಿಯ ಜಿಲ್ಲಾ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಲಾಯಿತು.
ಧ್ವಜಾರೋಹಣವನ್ನು ಜಿಲ್ಲಾ ಸ್ಕೌಟ್ಸ್ ಗೈಡ್ನ ಕೋಶಾಧಿಕಾರಿ ಮುದ್ದಯ್ಯ ನೆರವೇರಿಸಿದರು. ಈ ಸಂದರ್ಭ ಜಿಲ್ಲಾ ತರಬೇತಿ ಆಯುಕ್ತ ರಂಜಿತ್ ಕೆ.ಯು, ಸ್ಕೌಟ್ಸ್ ಗೈಡ್ನ ಮಡಿಕೇರಿ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ರವಿ ಪಿ.ಎಂ ಸೇರಿದಂತೆ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಮಡಿಕೇರಿ: ಕೊಡಗು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸ ಸಂಘದ ಆಶ್ರಯದಲ್ಲಿ ಚೆಂಬು ಗ್ರಾಮದ ಶ್ರೀ ಭಗವಾನ್ ಸಂಘ ಮತ್ತು ಯುವಕೇಸರಿ ಯುವಕಮಂಡಲದ ಸಹಯೋಗದಲ್ಲಿ ಬಾಲಂಬಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ನಿವೃತ್ತ ಶಿಕ್ಷಕ ಚೌಟಾಜೆ ಶೇಷಪ್ಪ ಅವರು ಕನ್ನಡ ಧ್ವಜಾರೋಹಣ ಮಾಡಿ, ಕನ್ನಡ ನಾಡು-ನುಡಿಯ ಮಹತ್ವದ ಕುರಿತು ಮಾತನಾಡಿದರು. ಸೊಸೈಟಿ ಅದ್ಯಕ್ಷರಾದ ಶ್ರೀ. ಅನಂತ್ ಯನ್.ಸಿ, ಮುಖ್ಯಕಾರ್ಯನಿರ್ವಹಣಾದಿಕಾರಿ ಬಿ.ಕೆ.ಆನಂದ, ಶ್ರೀ ಭಗವಾನ್ ಸಂಘದ ಅಧ್ಯಕ್ಷರಾದ ಸುಜಿತ್ ಕುಮಾರ್, ಯುವಕೇಸರಿ ಪ್ರತಿನಿಧಿ ಚಂದ್ರಕಾAತ್, ರಾಜ್ಯೋತ್ಸವ ಶುಭಾಶಯ ಕೋರಿದರು.
ಬಿ.ಸಿ ರೇಣುಕಾಕ್ಷ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಯುವಕೇಸರಿ ಯುವಕಮಂಡಲದ ಆಶ್ರಯದಲ್ಲಿ ಚೆಂಬು ಗ್ರಾಮದ ಜನರಿಗೆ ರಾಜ್ಯೋತ್ಸವ ಪ್ರಯುಕ್ತ ಕೇರಂ ಕ್ರೀಡಾಕೂಟ ಆಯೋಜಿಸಲಾಗಿತ್ತು.ಐಗೂರು: ಕಸಾಪ ಹೋಬಳಿ ಘಟಕದ ಐಗೂರಿನ ಕಸಾಪ ಕಛೇರಿಯ ಸಭಾಂಗಣದಲ್ಲಿ ೭೧ನೇ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕಸಾಪ ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ವಹಿಸಿದ್ದು, ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು, ಚೋಳರು, ರಾಷ್ಟçಕೂಟರು ಮತ್ತು ಕದಂಬರು ಆಳಿದ ಈ ನಾಡಿನ ಜನರು ಎಂದೆAದಿಗೂ ಕನ್ನಡವನ್ನು ಪ್ರೀತಿಸಬೇಕು. ಕನ್ನಡವನ್ನು ಉಳಿಸಿ ಬೆಳೆಸುವುದರ ಜೊತೆಗೆ ಇತರ ಭಾಷೆಗಳನ್ನು ಪ್ರೀತಿಸಬೇಕು ಎಂದರು.
ಕಾರ್ಯಕ್ರಮವನ್ನು ಲಯನ್ಸ್ ಸಂಸ್ಥೆಯ ಸಿ.ಕೆ ರೋಹಿತ್ ಉದ್ಘಾಟಿಸಿದರು. ಕಾಜೂರು ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕ ಸತೀಶ್ ಕುಮಾರ್, ೧೯೧೫ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಹಲವು ಸಮ್ಮೇಳನಗಳನ್ನು ನಡೆಸಿ ಕನ್ನಡತನವನ್ನು ಬೆಳೆಸಿದೆ. ನಮ್ಮ ಚಿಂತನೆ ಕನ್ನಡದ ನಾಡು ನುಡಿಯ ಕಡೆಗೆ ಇರಬೇಕು. ಇಂಗ್ಲೀಷ್ನಲ್ಲಿ ಕಾರ್ ಎಂಬ ಪದಕ್ಕೆ ಕನ್ನಡದಲ್ಲಿ ನಾವು ಕಾರು ಎಂದು ಮಾತ್ರ ಉಚ್ಚರಿಸುತ್ತೇವೆ. ಆದರೆ ಆ ಪದಕ್ಕೆ ಕನ್ನಡದ ಬೇರೆಯ ಪದವನ್ನು ಬಳಸಲು ನಾವು ಶ್ರಮಿಸಲಿಲ್ಲ.
ಕನ್ನಡದಲ್ಲಿ ೨೦,೦೦೦ ಶಾಸನಗಳು ದೊರಕಿದೆ. ವಚನ ಸಾಹಿತ್ಯ ಹನ್ನೊಂದನೇ ಶತಮಾನದಲ್ಲಿ ಆರಂಭವಾಗಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಶಿಕ್ಷಕ ಅಜಿತ್ ಕುಮಾರ್, ಹಲವಾರು ಮುಖ್ಯಮಂತ್ರಿಗಳು ರಾಜ್ಯವನ್ನು ಆಳಿದ್ದು, ೧೯೭೩ರ ನವೆಂಬರ್ ೧ ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು. ಐಗೂರಿನಲ್ಲಿ ಫೆಬ್ರವರಿ ೯ ರಂದು ಒಂಬತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ಸಮಾರಂಭ ಯಶಸ್ವಿಯಾಯಿತು ಎಂದರು.
ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ಸಿ.ಕೆ ರೋಹಿತ್, ಮುಖ್ಯ ಶಿಕ್ಷಕಿ ಸರಳ ಕುಮಾರಿ, ಶಿಕ್ಷಕಿ ಅನಸೂಯ ಮತ್ತು ಕೆ.ಪಿ ದಿನೇಶ್ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳಿಂದ ಕನ್ನಡದ ನೃತ್ಯ ಕಾರ್ಯಕ್ರಮಗಳು ನಡೆದವು. ಪ್ರಾರಂಭದಲ್ಲಿ ಶಿಕ್ಷಕಿ ಅನಸೂಯ ಸ್ವಾಗತಿಸಿ ಕೊನೆಗೆ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಸಿ.ಕೆ ರೋಹಿತ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಿತ್ಯ, ಮುಖ್ಯ ಶಿಕ್ಷಕ ಎಂ.ಟಿ ಸರಳಕುಮಾರಿ, ಅಜಿತ್ ಕುಮಾರ್, ಸಾಹಿತಿ ಹೇಮಂತ್ ಪಾರೇರ, ಶಿಕ್ಷಕಿ ಅನಸೂಯ, ಗ್ರಂಥಪಾಲಕ ಮೊಣ್ಣಪ್ಪ, ಮನೋಜ್ ಮುತ್ತಪ್ಪ, ಇಂದ್ರೇಶ್ ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು.ಮಡಿಕೇರಿ: ಮೂರ್ನಾಡು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಶಾಲೆಯ ಶಕ್ತಿ ತಂಡದ ವತಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ ರವಿ ಚೀಯಣ್ಣ ಹಾಗೂ ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಕವಿತಾ ಬಿ.ಎನ್ ಭಾಗವಹಿಸಿದ್ದರು.
ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ನಂತರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಲಾಯಿತು. ಶಾಲೆಯ ಪ್ರಾಂಶುಪಾಲರಾದ ಶಿಲ್ಪಾ ಪೊನ್ನಮ್ಮ ಹಾಗೂ ಉಪಪ್ರಾಂಶುಪಾಲರಾದ ಯಾಮಿನಿ ಸ್ಮಿತಾ ಅವರು ಉಪಸ್ಥಿತರಿದ್ದರು.
ಎಂ. ರವಿ ಚೀಯಣ್ಣ ಅವರು ಮಾತನಾಡಿ, ಕನ್ನಡ ಭಾಷೆಯ ಹಿರಿಮೆ, ಕನ್ನಡ ನಾಡಿನ ಇತಿಹಾಸ ಹಾಗೂ ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು. ಕವಿತಾ ಬಿ.ಎನ್ ಅವರು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವಂತೆ ಹಾಗೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಗೀತೆಗಳನ್ನು ಹಾಡಿ, ಆಕರ್ಷಕ ನೃತ್ಯ ಪ್ರದರ್ಶನಗಳ ಮೂಲಕ ಕನ್ನಡದ ಕಲಾ ವೈಭವವನ್ನು ಮೆರೆದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.ಕಣಿವೆ : ಪ್ರತಿಯೊಬ್ಬ ಕನ್ನಡಿಗರು ತಮ್ಮ ಸಂತಸ ಹಾಗೂ ಸಂಕಟಗಳನ್ನು ವ್ಯಕ್ತಪಡಿಸುವ ಮೆದುಳಿನ ಭಾಷೆ ಕನ್ನಡ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಸಿದ್ದಪ್ಪ ಹೆಳವರಹುಂಡಿ ಅಭಿಮತ ವ್ಯಕ್ತಪಡಿಸಿದರು.
ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೧ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡಿಗರ ಅಂತರAಗದ ಆತ್ಮಭಾಷೆಯಾಗಿರುವ ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಪಸರಿಸುವ ಹಾಗೂ ಕರುನಾಡಿನಲ್ಲಿ ಬೆಳಗಿಸುವ ಕಾಯಕ ಮುಂದಿನ ಜನಾಂಗವಾದ ಇಂದಿನ ವಿದ್ಯಾರ್ಥಿಗಳಲ್ಲಿ ಮೊಳಕೆಯೊಡೆಯಬೇಕು.
ಬ್ರಿಟಿಷರು ಭಾರತ ದೇಶವನ್ನು ಬಿಟ್ಟು ತೊಲಗುವಾಗ ಹೂಡಿದ ತಂತ್ರಗಳಿAದಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರಾಂತ್ಯಗಳು ಏಕೀಕರಣ ಸಮಿತಿಯ ನಿರಂತರ ಹೋರಾಟದ ಫಲವಾಗಿ ಸಮಗ್ರ ಕರ್ನಾಟಕವಾಗಿ ರೂಪುಗೊಂಡಿರುವ ಸಮಗ್ರ ಕರ್ನಾಟಕವನ್ನು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿಗೊಳಿಸಲು ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಪಣತೊಡಬೇಕಿದೆ ಎಂದರು.
ಮೈಸೂರು ರೇಷ್ಮೆ ಇಲಾಖೆಯ ನಿವೃತ್ತ ಮೇನೇಜರ್ ಪುಟ್ಟಪ್ಪ, ಜ್ಞಾನಗಂಗಾ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಕೆ.ಸುಧೀರ್, ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಸಂಸ್ಥೆಯ ಪ್ರಾಂಶುಪಾಲೆ ಜೆ.ಎ. ಸಂಜನಾ, ಆಡಳಿತಾಧಿಕಾರಿ ಮರ್ವಿನ್ ಕೊರಿಯಪ್ಪ, ಶಿಕ್ಷಕರಾದ ಭಾಸ್ಕರ್, ದೀಪಾ, ರೇವತಿ, ಜಲಾವತಿ, ಶ್ರೀಕಲ, ಜಿ.ಎಸ್.ಪುನೀತ್ ಇದ್ದರು.
ವಿದ್ಯಾರ್ಥಿಗಳಾದ ವಿಷುದ್ಧ ಪ್ರಾರ್ಥಿಸಿದರು.ತೇಜೋ ತನ್ನಯ್ ನಿರೂಪಿಸಿದರು. ತನ್ಮಯ್ ಸ್ವಾಗತಿಸಿದರು. ಶಾಲಾ ಮಕ್ಕಳಿಂದ ಕನ್ನಡ ಗಾಯನ, ವೀರ ಕನ್ನಡಿಗರ ಛದ್ಮವೇಶ ಸ್ಪರ್ಧೆ ನಡೆಯಿತು. ಬಳಿಕ ಯಕ್ಷಗಾನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಮಡಿಕೇರಿ: ವೀರಾಜಪೇಟೆ ವಿನಾಯಕ್ ಇಂಗ್ಲೀಷ್ ಸ್ಕೂಲ್ನಲ್ಲಿ ೭೧ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಜಯಕುಮಾರಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿ ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ಪ್ರಾರ್ಥನಾ ನೃತ್ಯದೊಂದಿಗೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಕನ್ನಡ ರಾಜ್ಯೋತ್ಸವದ ಮಹತ್ವದ ಕುರಿತು ಶಾಲೆಯ ಶಿಕ್ಷಕಿ ಪುಷ್ಪಮಣಿ ಟಿಎನ್ ಅವರು ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ನವೆಂಬರ್ ಒಂದರAದು ಆಚರಿಸಲಾಗುತ್ತದೆ. ಇದು ಕನ್ನಡಿಗರ ಹೆಮ್ಮೆಯ ಹಬ್ಬವಾಗಿದೆ. ೧೯೫೬ರ ನವಂಬರ್ ೧ ರಂದು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳು ಒಂದಾಗಿ ಮೈಸೂರು ರಾಜ್ಯ ರಚನೆಯಾಯಿತು. ೧೯೭೩ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದರು. ಕನ್ನಡ ನಾಡು ಅನೇಕ ಮಹಾನ್ ಕವಿಗಳು, ಸಾಹಿತಿಗಳು ಮತ್ತು ವೀರರನ್ನು ನೀಡಿದೆ. ನಾವು ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸಿ ಬೆಳೆಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳಿಂದ ಸುಮಧುರ ಕನ್ನಡ ಹಾಡುಗಳು ಮತ್ತು ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಎತ್ತಿ ತೋರಿಸುವ ಆಕರ್ಷಕ ಕಿರು ನಾಟಕ ಸೇರಿದಂತೆ ದಿತ್ಯಾಕೆ ಪಿ ಮತ್ತು ತಂಡದವರಿAದ ನೃತ್ಯ ಮತ್ತು ಅದ್ಭುತ ಸಾಂಸ್ಕೃತಿಕ ಪ್ರದರ್ಶನಗಳನ್ನು ಪ್ರಸ್ತುತಪಡಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಮುಖ್ಯಸ್ಥರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಹಮ, ದೃತಿ, ನಿರೀಕ್ಷಾ ಅನುಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ ವಂದಿಸಿದರು. ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿನಿಯರು ಸಿಬ್ಬಂದಿ ಹಾಗೂ ಪೋಷಕರು ಭಾಗವಹಿಸಿದ್ದರು.ಮಡಿಕೇರಿ: ಮಡಿಕೇರಿ ನಗರದ ಓಂಕಾರ್ ಆಟೋ ಸ್ನೇಹಿತರ ಬಳಗದ ವತಿಯಿಂದ ೭೧ನೇ ಕನ್ನಡ ರಾಜ್ಯೋತ್ಸವವನ್ನು ಆಟೋ ನಿಲ್ದಾಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಾಯಿ ಭುವನೇಶ್ವರಿಯ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಿ ಆಟೋ ಚಾಲಕರಿಗೆ ಶುಭ ಹಾರೈಸಿದರು.
ಇದೇ ಪ್ರಥಮ ಬಾರಿಗೆ ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುರಿತು ಓಂಕಾರ್ ಆಟೋ ಸ್ನೇಹಿತರ ಬಳಗದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘದ ಅಧ್ಯಕ್ಷ ಅಜ್ಜೆಟ್ಟಿರ ಲೋಕೇಶ್ ಧ್ವಜಾರೋಹಣ ನೆರವೇರಿಸಿದರು.
ಓಂಕಾರ್ ಆಟೋ ಸ್ನೇಹಿತರ ಬಳಗದ ಅಧ್ಯಕ್ಷ ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ ರಾಜೇಶ್, ಆಹಾರ ನಿರೀಕ್ಷಕರಾದ ವೀಣಾ ಚೇತನ್, ಸಮಾಜ ಸೇವಕ ಕೋಚನ ಚೇತನ್ ಹಾಗೂ ಶ್ರಮ ಜೀವಿಗಳಾದ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಗೌರಮ್ಮ ಮಾದಮ್ಮಯ್ಯ, ಓಂಕಾರ್ ಡೆಕೋರೇಟರ್ಸ್ನ ಮಾಲೀಕ ಪ್ರದೀಪ್, ಉದ್ಯಮಿ ದೀಪಕ್, ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು. ಕನ್ನಡ ನಾಡು, ನುಡಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಓಂಕಾರ್ ಆಟೋ ಸ್ನೇಹಿತರ ಬಳಗದ ಅಧ್ಯಕ್ಷ ಉಮೇಶ್, ಸದಸ್ಯರಾದ ವಿಜಯ್, ಹೇಮಂತ್ ಕುಮಾರ್, ಮೋಹನ್, ಯತೀಶ್, ಕಿಶೋರ್, ಕಿಚ್ಚು, ಸುನಿಲ್, ಪಾಪು, ಲೋಹಿತ್, ಮುರುಗ, ಯತೀಶ್, ಸುನಿಲ್ ಕುಮಾರ್ ಸೇರಿದಂತೆ ಹಲವರು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಸೋಮವಾರಪೇಟೆ: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ ಖಾಸಗಿ ಬಸ್ ನಿಲ್ದಾಣದಲ್ಲಿನ ಬೃಹತ್ ವೇದಿಕೆಯಲ್ಲಿ ನಡೆಯಿತು.
ಶಾಸಕ ಡಾ. ಮಂತರ್ಗೌಡ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ರಾಜ್ಯದ ಜನರ ರಕ್ತದಲ್ಲಿಯೇ ಕನ್ನಡ ಭಾಷೆ ಇದ್ದು, ಅದನ್ನು ಉಳಿಸಿಬೆಳೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ರಾಜ್ಯದಲ್ಲಿ ನೆಲ, ಜಲ, ಭಾಷೆ ರಕ್ಷಣೆಯ ವಿಷಯದಲ್ಲಿ ಆಟೋ ಚಾಲಕರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ವರ್ಷಪೂರ್ತಿ ಜನಸೇವೆಯಲ್ಲಿ ತೊಡಗಿರುವ ಆಟೋ ಚಾಲಕರ ಬೆಂಬಲಕ್ಕೆ ಎಲ್ಲ ಜನ ಸಾಮಾನ್ಯರು ನಿಲ್ಲುವ ಮೂಲಕ ಅವರ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆಂದರು.
ರಾಜ್ಯದಲ್ಲಿ ಎಲ್ಲರೂ ಕನ್ನಡದಲ್ಲಿಯೇ ವ್ಯವಹಾರ ಮಾಡುವಂತಾದಲ್ಲಿ ಭಾಷೆಯ ಬಳಕೆ ಮತ್ತು ಉಳಿಕೆ ಸಾಧ್ಯ. ಸಂಘ ಸಂಸ್ಥೆಗಳು ತಮ್ಮ ವೈಯುಕ್ತಿಕ ಸಮಸ್ಯೆ ಬದಿಗಿಟ್ಟು, ಬಲಿಷ್ಠ ಸಂಘ ಕಟ್ಟಿದಲ್ಲಿ ಮಾತ್ರ, ಸದಸ್ಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದು. ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ಕಳೆದ ೧೯ ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದರು.
ಬಿಜೆಪಿ ಮುಖಂಡ ಎಡಿಕೇರಿ ಪ್ರಸನ್ನ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜ್ಯದಲ್ಲಿ ಭಾಷೆ ಬೆಳೆಯಲು ಸಾಕಷ್ಟು ಮಹನೀಯರ ಕೊಡುಗೆ ಇದೆ. ಅವರನ್ನು ನಾವು ನೆನಪಿಸಿಕೊಳ್ಳಬೇಕು. ಕನ್ನಡ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂಪತ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಎಚ್.ಕೆ. ಚಂದ್ರಶೇಖರ್, ಚೇತನ್, ಅರುಣ್ ಕಾಳಪ್ಪ, ಗಿರೀಶ್ ಮಲ್ಲಪ್ಪ, ಸುನಿಲ್ ರೈ, ನತೀಶ್ ಮಂದಣ್ಣ, ಡಿ.ಯು. ಕಿರಣ್, ಎಸ್.ಎಂ. ಡಿಸಿಲ್ವ, ಸಂಘದ ಉಪಾಧ್ಯಕ್ಷ ಪ್ರಸನ್ನ ಯಡೂರು, ಕಾರ್ಯದರ್ಶಿ ಪಿ.ಎಂ. ಕವನ್, ಖಜಾಂಚಿ ವಿಜು ಐಗೂರು, ಸಹ ಕಾರ್ಯದರ್ಶಿ ಎ.ಸಿ. ಜಗದೀಶ್, ಮಾಜಿ ಅಧ್ಯಕ್ಷ ಆರ್.ಮೋಹನ್ ಹಾಗೂ ರವೀಶ್ ಇದ್ದರು.
ಇದೇ ಸಂದರ್ಭ ಸಂಘದ ಹಿರಿಯ ಸದಸ್ಯ ಎಸ್.ಐ. ಮಹಮ್ಮದ್ ಫಿರ್, ನಿವೃತ್ತ ಡೆಪ್ಯೂಟಿ ಕಮಾಂಡೆAಟ್ ಬಿ.ಬಿ. ಮಂಜುನಾಥ್, ಹಾನಗಲ್ಲು �