ನನ್ನ ಮೆಚ್ಚಿನ ಕವಿ - ಕುವೆಂಪು

ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಮಹಾನ್ ಕವಿಗಳು ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅವರಲ್ಲಿ ರಾಷ್ಟ್ರಕವಿ ಕುವೆಂಪು ಅವರು ನನ್ನ ಅತ್ಯಂತ ಮೆಚ್ಚಿನ ಕವಿ. ಅವರ ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಅವರು ೧೯೦೪ರ ಡಿಸೆಂಬರ್ ೨೯ರಂದು ಜನಿಸಿದರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಮಾನವೀಯ ಮೌಲ್ಯಗಳಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ.

ಕುವೆಂಪು ಅವರ ಕವಿತೆಗಳು ನನಗೆ ತುಂಬಾ ಇಷ್ಟ. ಅವರ ಬರಹಗಳಲ್ಲಿ ಪ್ರಕೃತಿಯ ಸೌಂದರ್ಯ, ಮಾನವ ಪ್ರೀತಿ, ಸಮಾನತೆ ಮತ್ತು ವಿಶ್ವಮಾನವ ಸಂದೇಶಗಳು ಕಾಣಿಸುತ್ತವೆ. ಅವರು ಜಾತಿ, ಧರ್ಮ, ಭಾಷೆ ಎಂಬ ಭೇದಗಳನ್ನು ಮೀರಿಸಿ ಎಲ್ಲರೂ ಒಂದೇ ಮಾನವ ಕುಟುಂಬದವರು ಎಂದು ಸಾರಿದರು. “ವಿಶ್ವಮಾನವ” ಎಂಬ ಅವರ ಆದರ್ಶ ನನಗೆ ಬಹಳ ಪ್ರೇರಣೆ ನೀಡುತ್ತದೆ. ಪ್ರತಿಯೊಬ್ಬರೂ ಗೌರವದಿಂದ ಬದುಕಬೇಕು ಮತ್ತು ಇತರರನ್ನು ಪ್ರೀತಿಸಬೇಕು ಎಂಬುದು ಅವರ ಸಂದೇಶ.

ಕುವೆAಪು ಅವರಲ್ಲಿ ನನಗೆ ಇಷ್ಟವಾಗುವ ಪ್ರಮುಖ ಗುಣವೆಂದರೆ ಅವರ ಸರಳತೆ. ಅವರು ದೊಡ್ಡ ಸಾಧನೆ ಮಾಡಿದರೂ ಜನರೊಂದಿಗೆ ಆತ್ಮೀಯವಾಗಿ ನಡೆದುಕೊಂಡರು. ಅವರಲ್ಲಿ ಧೈರ್ಯ, ಆತ್ಮವಿಶ್ವಾಸ, ಪರಿಶ್ರಮ ಮತ್ತು ಸತ್ಯನಿಷ್ಠೆ ಇತ್ತು. ಸಮಾಜದಲ್ಲಿದ್ದ ಅನ್ಯಾಯ ಮತ್ತು ಮೂಢನಂಬಿಕೆಗಳನ್ನು ಅವರು ತಮ್ಮ ಬರಹಗಳ ಮೂಲಕ ಪ್ರಶ್ನಿಸಿದರು. ಎಲ್ಲರೂ ಶಿಕ್ಷಣ ಪಡೆಯಬೇಕು, ಸ್ವತಂತ್ರವಾಗಿ ಯೋಚಿಸಬೇಕು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಬಯಸಿದರು. ಅವರ ಪ್ರಕೃತಿ ಪ್ರೀತಿಯೂ ನನಗೆ ಬಹಳ ಇಷ್ಟ. ಮರಗಳು, ಬೆಟ್ಟಗಳು, ಹೂವುಗಳು, ನದಿಗಳು ಮತ್ತು ಹಕ್ಕಿಗಳ ಸೌಂದರ್ಯವನ್ನು ಅವರು ತಮ್ಮ ಕವಿತೆಗಳಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ. ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂಬ ಅರಿವು ಅವರ ಸಾಹಿತ್ಯದಿಂದ ನನಗೆ ದೊರೆಯುತ್ತದೆ. ಅವರ ಭಾಷೆ ಮನಸ್ಸಿಗೆ ಹತ್ತಿರವಾಗಿದ್ದು, ಓದುಗರಲ್ಲಿ ಹೊಸ ಆಲೋಚನೆಗಳನ್ನು ಮೂಡಿಸುತ್ತದೆ.

ಕುವೆಂಪು ಅವರು ಕವಿ ಮಾತ್ರವಲ್ಲದೆ, ಕಾದಂಬರಿಕಾರ, ನಾಟಕಕಾರ, ಚಿಂತಕ ಮತ್ತು ಶಿಕ್ಷಣತಜ್ಞರಾಗಿಯೂ ಪ್ರಸಿದ್ಧರಾಗಿದ್ದಾರೆ. “ಶ್ರೀ ರಾಮಾಯಣ ದರ್ಶನಂ” ಅವರ ಮಹತ್ವದ ಕೃತಿಯಾಗಿದೆ. ಅವರು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ. ಅವರ ಸಾಧನೆ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ನಾನು ಕುವೆಂಪು ಅವರನ್ನು ಮೆಚ್ಚುವುದಕ್ಕೆ ಕಾರಣ ಅವರ ಸಾಹಿತ್ಯದ ಸೌಂದರ್ಯ ಮಾತ್ರವಲ್ಲ; ಅವರು ತೋರಿಸಿದ ಮಾನವೀಯತೆ, ಸಮಾನತೆ, ಧೈರ್ಯ ಮತ್ತು ವಿಶಾಲ ಮನೋಭಾವವೂ ಆಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸಿ, ಎಲ್ಲರನ್ನೂ ಗೌರವಿಸುವ ಉತ್ತಮ ನಾಗರಿಕನಾಗಬೇಕು ಎಂಬುದು ನನ್ನ ಆಶಯ. ಆದ್ದರಿಂದ ಕುವೆಂಪು ಅವರು ನನ್ನ ಮೆಚ್ಚಿನ ಕವಿ ಮತ್ತು ಸದಾ ನನಗೆ ಪ್ರೇರಣೆಯಾಗಿರುವ ಮಹಾನ್ ವ್ಯಕ್ತಿ.

- ಭುವನ್ ಎಚ್.ಜಿ.

ಪ್ರಥಮ ಬಿ.ಸಿ.ಎ.-ಸಾಮಾನ್ಯ

ಸಂತ ಅನ್ನಮ್ಮ ಪದವಿ ಕಾಲೇಜು, ವೀರಾಜಪೇಟೆ

ಮೊ : ೯೮೪೫೧೯೩೫೦೯

ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಮಹಾನ್ ಕವಿಗಳಿದ್ದಾರೆ. ಆದರೆ, ಅವರಲ್ಲಿ ನನಗೆ ಅತ್ಯಂತ ಇಷ್ಟವಾದವರು ರಾಷ್ಟ್ರಕವಿ ಕುವೆಂಪು ಅವರು. ಅವರ ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಅವರು ನಮ್ಮ ಕರ್ನಾಟಕದ ಹೆಮ್ಮೆ.

ಕುವೆಂಪು ಅವರು ನನಗೆ ಇಷ್ಟವಾಗಲು ಮೊದಲ ಕಾರಣ ಅವರು ವಿಶ್ವಮಾನವತಾವಾದಿ. ಅವರು "ಎಲ್ಲಾದರು ಇರು, ಎಂತಾದರು ಇರು, ಎಂದೆAದಿಗೂ ನೀ ಕನ್ನಡವಾಗಿರು" ಎಂದು ಹೇಳಿದರು. ಜೊತೆಗೆ "ವಿಶ್ವಮಾನವನಾಗು" ಎಂದೂ ಕರೆ ನೀಡಿದರು. ಇದು ನಮಗೆ ಕನ್ನಡದ ಅಭಿಮಾನದ ಜೊತೆ ಎಲ್ಲರನ್ನು ಪ್ರೀತಿಸುವ ಮನಸ್ಸನ್ನು ಕಲಿಸುತ್ತದೆ.

ಎರಡನೆಯದಾಗಿ, ಅವರ ಪ್ರಕೃತಿ ಪ್ರೇಮ. ಅವರು ಮಲೆನಾಡಿನ ತೀರ್ಥಹಳ್ಳಿಯ ಕುಪ್ಪಳಿಯಲ್ಲಿ ಹುಟ್ಟಿ, ಕಾಡು, ಬೆಟ್ಟ, ಮಳೆ, ಹೊಳೆಯನ್ನು ತಮ್ಮ ಕಾವ್ಯದಲ್ಲಿ ಜೀವಂತಗೊಳಿಸಿದರು. ಅವರ "ಶ್ರೀ ರಾಮಾಯಣ ದರ್ಶನಂ" ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಇದು ಕನ್ನಡಕ್ಕೆ ಮೊದಲ ಜ್ಞಾನಪೀಠ. "ನಾಡಗೀತೆ"ಯಾದ ಜಯ ಭಾರತ ಜನನಿಯ ತನುಜಾತೆ ಹಾಡನ್ನು ಬರೆದವರೂ ಅವರೇ. ಆ ಹಾಡು ಕೇಳಿದಾಗಲೆಲ್ಲಾ ರೋಮಾಂಚನವಾಗುತ್ತದೆ.

ಮೂರನೆಯದಾಗಿ, ಅವರ ಸರಳತೆ ಮತ್ತು ವೈಚಾರಿಕತೆ. ಅವರು ಮೂಢನಂಬಿಕೆ, ಜಾತಿ ಭೇದದ ವಿರುದ್ಧ ಹೋರಾಡಿದರು. ಮನುಷ್ಯನಿಗೆ ಮನುಷ್ಯನೇ ದೇವರು ಎಂಬ ಸಂದೇಶ ಸಾರಿದರು. ಅವರ ಬದುಕು ಮತ್ತು ಬರಹ ನಮಗೆ ಸತ್ಯ, ಪ್ರೀತಿ, ಮಾನವೀಯತೆಯನ್ನು ಕಲಿಸುತ್ತದೆ.

ಆದ್ದರಿಂದ ಕುವೆಂಪು ಅವರು ಕೇವಲ ಕವಿಯಲ್ಲ, ಅವರು ನನ್ನ ಗುರು, ದಾರ್ಶನಿಕ. ಅವರ ಆದರ್ಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ನಾನು ಇಷ್ಟಪಡುತ್ತೇನೆ.

-ಗ್ರೇಟಾ ಮೋನಿಸ್, ಮಡಿಕೇರಿ

ಮೊ : ೯೫೩೫೯೦೦೩೬೦ನನ್ನ ನೆಚ್ಚಿನ ಕವಿ ರನ್ನ. ಇವರು ಸೌಮ್ಯ ಮುಖದ ಕವಿರತ್ನ, ಅವರ ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ. ರನ್ನ ನೆರೆಹೊರೆಯವರಿಗೆಲ್ಲಾ ಮುದ್ದಿನ ಹುಡುಗ, ಚಿಕ್ಕಂದಿನಿAದಲೂ ಪದ್ಯ, ಹಾಡು, ಶ್ಲೋಕಗಳನ್ನು ಕಲಿತು ಕಟ್ಟಿ ಹೇಳುವುದರಲ್ಲಿ ಅಪಾರ ಶ್ರದ್ಧೆ ಹೊಂದಿದ್ದನು. ಗಟ್ಟಿಮುಟ್ಟಾದ ಮೈಕಟ್ಟು ‘ಬೆಳೆ' ಬೆಳೆದಂತೆ ಕುಲಧರ್ಮವಾದ ಜೈನ ಧರ್ಮವನ್ನು ಅರಿಯುವ ಆಸೆ ಒಂದು ಕಡೆ ಕಾವ್ಯ ಕಲೆಯನ್ನು ಕೈವಶ ಮಾಡಿಕೊಳ್ಳಬೇಕೆಂಬ ಬಯಕೆ ಮತ್ತೊಂದೆಡೆ, ಮುದುವೊಳಲಿನಲ್ಲಿ ಇದಕ್ಕೆ ಅವಕಾಶವಿರಲಿಲ್ಲ. ವಿದ್ಯೆ ಕಲಿಯುವ ಹಠ ತೊಟ್ಟು ಆಗಿನ ದಿನಗಳಲ್ಲಿ ಜೈನ ಧರ್ಮಕ್ಕೂ ವಿದ್ಯೆಗೂ ನೆಲೆಬೀಡು ಎನಿಸಿದ್ದ ದೂರದ ಗಂಗ ರಾಜ್ಯಕ್ಕೆ ಪ್ರಯಾಣ ಮಾಡಿದನು. ರನ್ನನ ಅಜಿತಪುರಾಣದ ಒಂದು ಪಠ್ಯದಿಂದ ಅವನು ಪರಶುರಾಮ ಚರಿತ, ಚಕ್ರೇಶ್ವರ ಚರಿತ ಅಜಿತ ಕೀರ್ತೇಶ್ವರ ಚರಿತ ಅಜಿತಪುರಾಣ ಎಂಬ ಮೂರು ಕಾವ್ಯಗಳನ್ನು ಬರೆದಿರುವ ವಿಷಯ ತಿಳಿದು ಬರುತ್ತದೆ ಈ ಕಾವ್ಯದಲ್ಲಿ ಗದಾಯುದ್ಧದ ಹೆಸರನ್ನು ಹೇಳಿಲ್ಲ, ಈ ಕಾರಣದಿಂದಲೂ ಬೇರೆಯ ಶಾಸನಗಳ ಮೂಲಕ ಇದರ ಆಧಾರಗಳಿಂದಲೂ ಅಧಿಕ ಪುರಾಣವನ್ನು ರಚಿಸಿದ ಹತ್ತಾರು ವರ್ಷಗಳಾದ ಮೇಲೆ ಗದಾಯುದ್ಧವನ್ನು ರಚಿಸಿರಬೇಕೆಂದು ಕೆಲವರ ಹೇಳಿಕೆಯಾಗಿದೆ. ಅಜಿತಪುರಾಣದ ಕಾಲಕ್ಕೆ ಮೊದಲೇ ಸುಮಾರು ೯೮೩ ರಲ್ಲಿ ಗದಾಯುದ್ಧ ಬರೆದಿರಬಹುದು ಎಂದು ಹಲವರ ಅಭಿಪ್ರಾಯ. ಅವು ಹೇಗೆ ಇದ್ದರೂ ಈ ನಾಲ್ಕು ಕಾವ್ಯಗಳು ಕೂಡ ರನ್ನ ಬರೆದದ್ದು. ರನ್ನ ಆಗಿನ ಕಾಲದಲ್ಲಿ ಬಳೆಯ ಮಲಾರವನ್ನು ಹೊತ್ತು ಮಾರಬೇಕಾದ ತನ್ನ ಕಾಯಕದಿಂದ ಹೊರತಾಗಿ ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನೋ ಬಳೆಯ ಮಲಾರೆ ಎಂಬ ಮಾತಿಗೆ ಛಲ ತೊಟ್ಟು ಮಾಡಿದ ಸಾಧನೆಗೆ ರನ್ನ ಕವಿಯು ನನಗೆ ಇಷ್ಟವಾಗಿದ್ದಾರೆ.

- ಮೋಕ್ಷಿಕ್ ಜೆ.ಜೆ, ೧೦ ನೇ ತರಗತಿ

ಸರ್ಕಾರಿ ಪ್ರೌಢಶಾಲೆ

ಕಾನ್‌ಬೈಲ್, ಮೊ : ೭೭೯೫೪ ೦೨೧೫೨

ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು ಎಂದು ಪ್ರಸಿದ್ಧರಾದ ಇವರು ಭಾರತೀಯ ಕವಿ, ನಾಟಕಕಾರ. ಕಾದಂಬರಿಕಾರ ಮತ್ತು ವಿಮರ್ಶಕ. ಅವರು ೨೦ನೇ ಶತಮಾನದ ಅತ್ಯುತ್ತಮ. ಕನ್ನಡ ಕವಿ ಎಂದು ಅನೇಕರು ಪರಿಗಣಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿಯೂ ಹೌದು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಶಿಕ್ಷಕರಾಗಿ ಮುಂದುವರೆಸಿದರು. ಆ ಸಮಯದಲ್ಲಿ ಹಲವಾರು ಸಾಹಿತ್ಯ, ಕೃತಿಗಳಿಗೆ ಕೊಡುಗೆ ನೀಡಿದರು. ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಮತ್ತು ಕಾನೂರು ಹೆಗ್ಗಡಿಕೆ (ಕಾನೂರಿನ ಮಾಲೀಕ) ನಂತಹ ಕಾದಂಬರಿಗಳು ಅವರ ಅತ್ಯುತ್ತಮ ಕೃತಿಗಳು.

ಕುವೆಂಪು ರವರು ಕರ್ನಾಟಕ ರಾಜ್ಯ ಗೀತೆ ಜಯ ಭಾರತ ಜನನಿಯ ತನುಜಾತೆ ಬರೆದ ಕೀರ್ತಿಗೆ ಭಾಜನರಾಗಿದ್ದಾರೆ. ಅವರು ಸಾಹಿತ್ಯ ಅಕಾಡೆಮಿ ಪ್ರಸಸ್ತಿ ಮತ್ತು ಪದ್ಮಭೂಷಣ ಮತ್ತು ಪದ್ಮವಿಭೂಷಣ ಸೇರಿದಂತೆ ಹಲವಾರು ಗೌರವಗಳನ್ನು ಪಡೆದರು. ಭಾರತದ ಮೂರನೇ ಮತ್ತು ಎರಡನೇ ಅತ್ಯನ್ನತ ನಾಗರಿಕ ಗೌರವಗಳು. ಅವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು.

ಕುವೆಂಪು ಅವರ ಸಾಹಿತ್ಯ ಸೃಷ್ಟಿ ವಿದ್ಯಮಯವಾದದ್ದು. ಅಂತೆಯೇ ವಿಪಲವಾದದ್ದು ಹೌದು. ಅದರ ಗಾತ್ರ ಮತ್ತು ಗುಣ ಎರಡು ಗಣನೀಯವಾದದ್ದು. ಚಿತ್ರಾಂಗದಾ, ಕೊಳಲು, ನವಿಲು, ಪಾಂಚಜನ್ನö್ಯ, ಅನಿಕೇತನ, ಪಕ್ಷಿಕಾಶಿ ಇತ್ಯಾದಿ. ಕವನಸಂ, ಕಲನಗಳು, ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮುದುಮಗಳು ಬೃಹತ್ ಕಾದಂಬರಿಗಳು, ಬೆರಳಿಗೆ ಕೊರಳ್, ರಕ್ತಾಕ್ಷಿ, ಸ್ಮಶಾನ, ಕುರುಕ್ಷೇತ್ರ, ಯಮನ ಸೋಲು ಮುಂತಾದ ನಾಟಕಗಳು ಕುವೆಂಪು ರಾಷ್ಟç ಪ್ರತಿಷ್ಠಾನ ಇವರು ಜನಿಸಿದ ಮನೆಯನ್ನು ಕವಿ ಮನೆ ಹೆಸರಿನಲ್ಲಿ ಮ್ಯೂಸಿಯಂ ಮಾಡಿದ್ದಾರೆ.

- ಮನ್ವಿತ ಮುತ್ತಮ್ಮ ಎ.ಎಸ್.,

ದ್ವಿತೀಯ ಪಿ.ಯು.ಸಿ. (ವಿಜ್ಞಾನ)

ಕಾವೇರಿ ಕಾಲೇಜು, ಗೋಣಿಕೊಪ್ಪಲು

ಕನ್ನಡ ಸಾಹಿತ್ಯಕ್ಕೆ ಸಾವಿರಾರು ಸುದೀರ್ಘ ಇತಿಹಾಸವಿದ್ದು ನೂರಾರು ಮಹನೀಯರು ತಮ್ಮ ಅಮೂಲ್ಯವಾದ ಬರಹಗಳಿಂದ ಇಡೀ ವಿಶ್ವದಲ್ಲೇ ಕನ್ನಡ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪ್ರಮುಖ ಕೊಡುಗೆದಾರರನ್ನು ಕಂಡು ಅವರನ್ನು ಸನ್ಮಾನಿಸಿ ಗೌರವ ಪುರಸ್ಕಾರಗಳನ್ನು ನೀಡಲಾಗುತ್ತದೆ. ಆದರೆ ಯಾವ ಪುರಸ್ಕಾರಗಳು ಲಭ್ಯತೆ ಇಲ್ಲದಂತಹ ೧೨ನೇ ಶತಮಾನದಲ್ಲೂ ತಮ್ಮ ಅಮೂಲ್ಯವಾದ ಸಮಯವನ್ನು ಬಳಸಿಕೊಂಡು ಸಾಮಾಜಿಕ ಕ್ರಾಂತಿ ಮತ್ತು ಸರಳ ಕನ್ನಡದ ಮೂಲಕ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಿದ ವಚನಕಾರರನ್ನು ನಾನು ಇಂದು ನೆನಪಿಸಿಕೊಳ್ಳಲು ಇಚ್ಚಿಸುತ್ತೇನೆ. ಅದರಲ್ಲೂ ನನಗೆ ಬಲು ಮೆಚ್ಚುಗೆಗೊಂಡವರು “ಅಂಬಿಗರ ಚೌಡಯ್ಯ” ಎಂದು ಹೇಳಬಹುದು. ಇವರ ಒಂದೊAದು ಮಾತುಗಳು ಸಹ ನನ್ನ ಮನಸ್ಸಿಗೆ ಬಹಳಷ್ಟು ಪ್ರಭಾವ ಬೀರಿದೆ, ಇವರ ವಚನ ಓದಲು ಸರಳವಾಗಿದ್ದು ಬಹಳ ದಟ್ಟವಾದಂತಹ ವಿಚಾರಗಳು ಇವರು ಬರೆದಿರುವಂತಹ ವಚನಗಳಲ್ಲಿ ತುಂಬಿಕೊAಡಿರುತ್ತದೆ.

ಈತ ತನ್ನ ವಚನಗಳಿಗೆ ಬಳಸುವ ವಸ್ತು, ಭಾಷೆ ಹಾಗೂ ಶೈಲಿಯನ್ನು ಗಮನಿಸಿದರೆ ಇವನೊಬ್ಬ ಕೆಚ್ಚೆದೆಯ ನಿಷ್ಠೂರ ಕವಿ ಎಂಬುದು ಸ್ಪಷ್ಟವಾಗುತ್ತದೆ. ಈತನು ದಯ, ದಾಕ್ಷಿಣ್ಯಪರನಲ್ಲ, ಬದಲಾಗಿ ನ್ಯಾಯನಿಷ್ಠೂರಿ. ತನಗೆ ಯಾವುದೇ ವಿಚಾರ ಸರಿ ಅನಿಸದಿದ್ದರೆ ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಟೀಕಿಸದೆ ಸುಮ್ಮನೆ ಬಿಡುವುದಿಲ್ಲ. ನಾನು ಅತಿ ಹೆಚ್ಚಾಗಿ ಇಷ್ಟಪಟ್ಟ ಸಾಲುಗಳೆಂದರೆ “ಗುರುವೆಂಬನೆ ಹಲವರ ಮಗ” ಇದು ಓದಲು ಸರಳವಾಗಿದ್ದು ಅರ್ಥೈಸಿಕೊಳ್ಳಲು ಹಾಗೂ ಸ್ವೀಕರಿಸಲು ತುಂಬಾ ಕಷ್ಟಕರವಾಗಿರುತ್ತದೆ. ಜೀವನದಲ್ಲಿ ನಾವು ಬಹಳ ಜನರನ್ನು ಭೇಟಿ ಮಾಡುತ್ತೇವೆ. ಸಣ್ಣ-ಸಣ್ಣ ವಿಚಾರಗಳನ್ನು ಸಹ ನಾವು ಇನ್ನೊಬ್ಬರನ್ನು ನೋಡಿ ಕಲಿಯುತ್ತೇವೆ. ಹಾಗಾಗಿ ಅವರೆಲ್ಲ ನಮ್ಮ ಜೀವನದಲ್ಲಿ ಗುರುವಿನ ಸ್ಥಾನ ಪಡೆದುಕೊಳ್ಳುತ್ತಾರೆ, ಹಾಗಾಗಿ ನಾವು ಯಾರಿಂದ ಜೀವನದ ಪಾಠ ಹಾಗೂ ವಿಚಾರಗಳನ್ನು ಕಲಿಯುತ್ತೇವೋ ಅವರೆಲ್ಲರನ್ನು ನಾವು ಗುರುವೆಂದು ಸ್ವೀಕರಿಸಬಹುದು ಎಂಬ ಅರ್ಥ ಆ ಸಣ್ಣ ಮೂರು ಪದಗಳಲ್ಲಿ ಹುದುಗಿಕೊಂಡಿರುತ್ತದೆ. ನಂತರ “ಅರಿಯದ ಗುರು ಅರಿಯದ ಶಿಷ್ಯ ಇವರಿಬ್ಬರಿಗೆನಪ್ಪುವುದೋ ಕುರುಡ ಕುರುಡನ ಕೈಯ ಹಿಡಿದು ಪಥವ ನಡೆಯಬಲ್ಲರೆ ?, ತೊರೆಯಲದ್ದಿ ಹೋಹವನ ಈಸಲರಿಯವ ತೆಗೆದಂತಾಯಿತು” ಎಂಬ ಈ ಮಾತು ಎಷ್ಟು ಆಳವಾದ ವಿಷಯವನ್ನು ಹೊಂದಿದೆ ಎಂದರೆ, ವಿಚಾರಜ್ಞಾನ ಇಲ್ಲದ ಗುರು ಹಾಗೂ ಶಿಷ್ಯನ ಸಂಬAಧ ಹೇಗಿರುತ್ತದೆಂದರೆ, ಒಬ್ಬ ಕುರುಡನ ಕೈಯನ್ನು ಇನ್ನೊಬ್ಬ ಕುರುಡ ಹಿಡಿದು ಹೇಗೆ ದಾರಿ ನಡೆಸಲು ಸಾಧ್ಯವಿಲ್ಲವೋ ಹಾಗೆ, ಹಾಗೂ ಈಜು ಬಾರದವ ನೀರಲ್ಲಿ ಮುಳುಗುತ್ತಿರುವವನನ್ನು ಕಾಪಾಡಲು ನೀರಿಗೆ ಹಾರಿದಂತಾಗುತ್ತದೆ. ಕೊನೆಗೆ ಇಬ್ಬರು ಸಾಯುವ ಪರಿಸ್ಥಿತಿ ಎದುರಾಗುವ ಬಗ್ಗೆ ಈತ ಹೇಳುತ್ತಾನೆ. ಹೀಗೆ ಬದುಕಲು ಬೇಕಾದ ಮುಖ್ಯ ಮಾರ್ಗಗಳನ್ನು ಪುಟ್ಟ-ಪುಟ್ಟ ಸಾಲುಗಳಲ್ಲಿ ಅರ್ಥೈಸಲು ಪ್ರಯತ್ನ ಮಾಡುವ ವಚನಕಾರರನ್ನು ನಾನು ನೆನಪಿಸಿಕೊಳ್ಳಲು ಇಚ್ಚಿಸುತ್ತೇನೆ.

-ಪುಷ್ಪಲತ ವಿ., ದ್ವಿತೀಯ ಬಿ. ಸಿ. ಎ

ಸಂತ ಅನ್ನಮ್ಮ ಪದವಿ ಕಾಲೇಜು

ವೀರಾಜಪೇಟೆ,

ಮೊ: ೯೧೦೮೧೪೮೬೭೭ ನನ್ನ ನೆಚ್ಚಿನ ಕವಿ ಗೋವಿಂದ ಪೈ. ಭಾರತದ ಮಂಗಲವು ಭುವನವಲ್ಲಭನೊಲವು ಭಾರತ ಸಮುಚ್ಛಯವು ಶಾಂತಿಗಾಶ್ರಯವು ಭಾರತದ ಜನಕುಲವು ಭುವಿಯ ಒಳಗಡೆ ಬಲವು ಭಾರತಾಂಬೆಯ ಭಕ್ತಿ ನನಗಾತ್ಮಕ ಶಕ್ತಿ.

ಎಷ್ಟು ಸುಲಭವಾದ ಶಬ್ದಗಳು; ಪದ್ಯ ನೇರವಾಗಿ ಹೃದಯವನ್ನು ಮುಟ್ಟುತ್ತದೆ. ನಮ್ಮ ಮನಸ್ಸಿನಲ್ಲಿ ಇದ್ದುದ್ದನ್ನೆ ಕವಿ ಹೇಳುತ್ತಿದ್ದಾರೆ ಎನಿಸುತ್ತದೆ. ಅದನ್ನು ಎಷ್ಟು ಸೊಗಸಾದ ಸರಳವಾದ ಭಾಷೆಯಲ್ಲಿ ಹೇಳಿದ್ದಾರೆ ಓದುವುದಕ್ಕೆ ಕಿವಿಗೆ ಇಂಪಾಗಿದೆ ಪ್ರತಿ ಪಂಕ್ತಿಯಲ್ಲಿ ಮಂಗಳವು ಒಲವು ಭಕ್ತಿ ಶಕ್ತಿ ಹೀಗೆ ಒಳಪ್ರಾಸವು ಇರುವುದರಿಂದ ಕಿವಿಗೂ ಹಿತ ನೆನಪಿಡುವುದು ಸುಲಭ ಈ ಪದ್ಯವನ್ನು ಬರೆದವರು ಹಿರಿಯ ಕವಿ ಮಂಜೇಶ್ವರ ಗೋವಿಂದ ಪೈ ಅವರು ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದಪೈ ಅವರ ತಂದೆ ತಿಮ್ಮಪೈ ಅವರು ಜ್ಯೋತಿಷ್ಯವನ್ನು ತಿಳಿದಿದ್ದು ವಿದ್ವಾಂಸರಾಗಿದ್ದರು ಅವರ ಹೆಂಡತಿ ದೇವಕಿಯಮ್ಮ ಅವರಿಗೆ ನಾಲ್ವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು ಹುಟ್ಟಿದ್ದರು. ೧೮೮೩ರ ಮಾರ್ಚ್ ೨೩ ರಂದು ಗೋವಿಂದ ಪೈ ರವರು ಜನ್ಮ ವೆತ್ತಿದರು.

ತಾಯಿ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬದಲಾಗುವ ಕನ್ನಡಿಗರ ತಾಯಿ ಎಂಬ ಪದ್ಯದಲ್ಲಿ ಗೋವಿಂದ ಪೈಗಳು ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು ಎಂದು ಮನೋಹರವಾಗಿ ತಮ್ಮ ಕನ್ನಡ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ ನನಗೆ ಈ ಸಾಲುಗಳು ಬಹಳ ಇಷ್ಟ ಇವರು ಸುಮಾರು ೨೨ ಭಾಷೆಗಳನ್ನು ಬಲ್ಲವರಾಗಿದ್ದರು ಗ್ರೀಕರ ಜರ್ಮನಿ ಫ್ರೆಂಚ್ ಪರ್ಷಿಯನ್ ಇಂಗ್ಲಿಷ್ ಜಪಾನಿ ಭಾಷೆಗಳು ಇವರಿಗೆ ಬರುತ್ತಿದ್ದವು ಭಾರತೀಯ ಭಾಷೆಗಳಲ್ಲಿ ಪಾಲಿ ಅರ್ಧಮಾಗದಿ ಸಂಸ್ಕೃತ ಪ್ರಾಕೃತ ಮೊದಲಾದ ಪ್ರಾಚೀನ ಭಾಷೆಗಳನ್ನು ತಿಳಿದಿದ್ದರು ಬಂಗಾಳಿ ಹಿಂದಿ ಉರ್ದು ಮರಾಠಿ ಗುಜರಾತಿ ತಮಿಳು ತೆಲುಗು ಮಲಯಾಳ ಮೊದಲಾದ ಭಾಷೆಗಳು ಅವುಗಳ ಪುಸ್ತಕಗಳನ್ನು ತಮ್ಮ ಅಭ್ಯಾಸದ ಕೋಣೆಯಲ್ಲಿ ಬೇರೆ ಬೇರೆ ಪುಸ್ತಕಗಳೆಂದರೆ ಬಹಳ ಮಮತೆ ಎಲ್ಲಿಯೂ ದೊರೆಯದ ಅಪೂರ್ವದ ಪುಸ್ತಕಗಳನ್ನು ಅವರು ಸಂಗ್ರಹಿಸಿ ಇಟ್ಟಿದ್ದರು ೧೯೫೦ ರಲ್ಲಿ ಮುಂಬೈಯಲ್ಲಿ ನಡೆದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಗೋವಿಂದ ಪೈ ಗಳು ಒಪ್ಪಿಕೊಂಡರು ಅಲ್ಲಿ ಅವರು ತಮ್ಮ ಅಧ್ಯಕ್ಷ ಭಾಷಣದ ಕೊನೆಯಲ್ಲಿ ಹೇಳಿದ ಹೃದಯ ಸ್ಪರ್ಶಿಯಾದ ಮಾತಿಂದರೇ ನಾನು ಎರಡು ತಾಯಂದಿರ ಕೋಸು ಕೊಂಕಣಿ ಹೆತ್ತ ತಾಯಿ ಕನ್ನಡ ಸಾಕು ತಾಯಿ ಆದರೆ ಹೆತ್ತ ತಾಯಿಯ ಮಲೆಯಲ್ಲಿ ಹಾಲಿಲ್ಲ ಕೊಂಕಣಿಯಲ್ಲಿ ಸಾಹಿತ್ಯವಿಲ್ಲ ಆಕೆ ಆ ಬಗ್ಗೆ ನನ್ನನ್ನು ಕನ್ನಡದ ಮೊರೆಯಲ್ಲಿ ನಂಟುತನದಲ್ಲಿ ಹಾಕಿದಳು ಈ ತಾಯಿಯಾದರೆ ಪಯಸ್ವಿನಿ ತುಂಬಾ ಹಾಲಿರುವವಳು ಎಷ್ಟು ಕಾಲದಿಂದ ಎಷ್ಟೋ ಕವಿಗಳನ್ನು ಊಡಿಸಿ ಮತ್ತೂ ಬತ್ತದ ದೇವರ ದಯೆಯಿಂದ ಸರ್ವದಾ ಬತ್ತಬಾರದ ಸದಾಸ್ನುಹಿ ಯಾವಾಗಲೂ ಹಾಲು ಸುರಿಸುವವಳು ಎಂದಿದ್ದಾರೆ ಇವರ ಪ್ರಕಟವಾಗಿರುವ ಕೃತಿಗಳೆಂದರೆ ಗಿಳಿವಿಂಡು ಕವನ ಸಂಕಲನ ಗೋಲ್ಗೊಥಾ ಅಥವಾ ಯೇಸುವಿನ ಕಡೆಯ ದಿನ ಖಂಡ ಕಾವ್ಯ ವೈಶಾಖಿ ಅಥವಾ ಬುದ್ಧನ ಕಡೆಯ ದಿನ ಖಂಡ ಕಾವ್ಯ, ಹೆಬ್ಬೆರಳು ಗೀತಾ ನಾಟಕ ಚಿತ್ರ ಛಾಯ ಗದ್ಯ ನಾಟಕ ಶ್ರೀ ಕೃಷ್ಣ ಚರಿತೆ ಗದ್ಯಕಥೆ ಹೃದಯರಂಗ ಕವನಗಳು ನಂದಾದೀಪ ಕವನಗಳು ಹೀಗೆ ಹಲವಾರು ಕೃತಿಗಳನ್ನು ರಚಿಸಿರುವಂತಹ ಗೋವಿಂದ ಪೈಗಳು ಸಾಹಿತ್ಯ ಕ್ಷೇತ್ರದಲ್ಲಿ ಸದಾ ಉರಿಯುವ ದೀಪವಾಗಿದ್ದಾರೆ

-ಶ್ರೇಯ ಬಿ ಆರ್., ೯ನೇ ತರಗತಿ

ಸರ್ಕಾರಿ ಪ್ರೌಢಶಾಲೆ, ಕಾನ್‌ಬೈಲ್

ಮೊ : ೮೮೬೧೨೮೬೧೬೮

ಜನ್ನ ಕವಿ ನನ್ನ ನೆಚ್ಚಿನ ಕವಿ. ಜನ್ನ ರವರು ಕನ್ನಡ ನಾಡಿನ ಹಿರಿಯ ಕವಿಗಳಲ್ಲಿ ಒಬ್ಬರು. ಜೈನ ಧರ್ಮೀಯ ೧೪ನೆಯ ತೀರ್ಥಂಕರನಾದ ಅನಂತನಾಥ ಜನ್ನನನ್ನು ಕುರಿತು ಅನಂತನಾಥ ಪುರಾಣ ಎಂಬ ಕಾವ್ಯವನ್ನು ಬರೆದಿದ್ದಾರೆ. ಜೈನ ಧರ್ಮ ಅಹಿಂಸೆಯನ್ನು ಪ್ರಮುಖವಾಗಿ ಉಪದೇಶಿಸುವ ಧರ್ಮ. ಈ ಅಹಿಂಸೆಯನ್ನೇ ತನ್ನ ಕಥೆಗೆ ವಸ್ತುವಾಗಿ ಆರಿಸಿಕೊಂಡು ಯಶೋಧರ ಚರಿತೆ ಎಂಬ ಮತ್ತೊಂದು ಕಾವ್ಯವನ್ನು ಜನ್ನ ರಚಿಸಿದ್ದಾನೆ. ಅಷ್ಟೇ ಅಲ್ಲದೆ ಅನುಭವ ಮುಕುರ ಎಂಬ ಚಿಕ್ಕ ಕೃತಿಯು ಈತನಿಂದ ರಚಿತವಾಗಿದೆ. ಜನ್ನ ಕಮ್ಮೆ ವಂಶದ ಕಾಶ್ಯಪ ಗೋತ್ರದವನು. ಈತನ ತಂದೆ ಶಂಕರ. ಶಂಕರನಿಗೆ ಕವಿ ಸುಮನೋಬಾಣ ಎಂಬ ಬಿರುದು ಇದ್ದಿತು.ಶಂಕರ ದೊಡ್ಡ ವಿದ್ವಾಂಸನೂ ಕವಿಯೂ ಆಗಿದ್ದು ಜೊತೆಗೆ ಹೊಯ್ಸಳ ನಾರಸಿಂಹನಲ್ಲಿ ಕಟಕೋಪಾಧ್ಯಾಯನಾಗಿದ್ದನು. ತಾಯಿ ಸಾಕ್ಷಾತ್ ಶಂಕರನ ಹೆಂಡತಿಯAತೆ ವಿಖ್ಯಾತನಾಗಿದ್ದ ಗಂಗಾದೇವಿ. ಸೂಕ್ತಿ ಸುಧಾರ್ಣವ ಎಂಬ ಪ್ರಸಿದ್ಧ ಕನ್ನಡ ಕಾವ್ಯವನ್ನು ಬರೆದಿರುವ ಮಲ್ಲಿಕಾರ್ಜುನ ಇವರ ಭಾವ ಮೈದುನ. ಮಲ್ಲಿಕಾರ್ಜುನನಿಗೆ ಜನ್ನ ನ ತಂಗಿಯನ್ನು ಕೊಟ್ಟು ವಿವಾಹ ಮಾಡಲಾಗಿತ್ತು. ಶಬ್ದಮಣಿದರ್ಪಣ ಎಂಬುದು ಕನ್ನಡದಲ್ಲಿ ಪ್ರಸಿದ್ಧವಾದ ವ್ಯಾಕರಣ ಗ್ರಂಥ. ಅದನ್ನು ಬರೆದ ಕೇಶಿರಾಜ ಮಲ್ಲಿಕಾರ್ಜುನನ ಮಗ ಜನ್ನನ ಸೋದರಳಿಯ. ಹೀಗೆ ಜನ್ನನ ಮನೆತನದವರು ಮಾತ್ರವಲ್ಲದೆ ಅವರ ಬೀಗ ಬಳಗದವರು ಕೂಡ ದೊಡ್ಡ ಪದವಿಯವರೂ ಪಂಡಿತರೂ, ಕವಿಗಳೂ ಆಗಿದ್ದರು. ಜನ್ನ ಜಗದೊಳ್ ತಾನು ಇತ್ತ ಕೈಯಲ್ಲದೆ ಒಡ್ಡಿದ ಕೈಯಲ್ಲ (ನಾನು ಇತರರಿಗೆ ದಾನ ಮಾಡಿದೆ ನನಗೆ ಕೊಡಿ ಎಂದು ಕೈ ಅಡಿಯಲ್ಲಿರಲಿಲ್ಲ) ಎಂದು ಹೇಳಿಕೊಂಡಿದ್ದಾನೆ.

ಈ ಕವಿಯ ಮೊದಲ ಕಾವ್ಯ ಯಶೋಧರ ಚರಿತೆ, ಜನ್ನನ ೨ನೇ ಕೃತಿ ಅನಂತನಾಥ ಪುರಾಣ. ಇದು ಒಂದು ಚಂಪೂ ಗ್ರಂಥ. ಹೀಗೆ ಜನ್ನ ಕವಿ ತನ್ನ ಎರಡೂ ಕಾವ್ಯಗಳಲ್ಲಿ ಪ್ರಮುಖವಾಗಿ ಧರ್ಮವನ್ನು ಉಪದೇಶಿಸಿದರು. ಅದಕ್ಕೆ ಕಳೆದುಕೊಡುವಂತೆ ಎರಡು ಕಾವ್ಯಗಳಲ್ಲಿ ಸ್ವಾರಸ್ಯಕರವಾದ ಕಥೆಗಳನ್ನು ಹೇಳಿದ್ದಾನೆ. ಇದರಿಂದ ಕಾವ್ಯಗಳನ್ನು ಆಸಕ್ತಿಯಿಂದ ಓದಬಹುದು. ಜನ್ನ ಒಳ್ಳೆಯ ಕಾವ್ಯವನ್ನು ಬರೆದಿದ್ದಾನೆ. ಸುಮಾರು ವರ್ಷಗಳ ಹಿಂದೆ ಕನ್ನಡದಲ್ಲಿ ಕಾವ್ಯ ರಕ್ಷಣೆ ಮಾಡಿದ ಜನ್ನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಬ್ಬ ಶ್ರೇಷ್ಠ ಕವಿ. ಆದುದರಿಂದ ಈ ಕವಿ ನನ್ನ ನೆಚ್ಚಿನ ಕವಿಯಾಗಿದ್ದಾರೆ.

-ಗಾನವಿ ಜೆ.ಆರ್., ೧೦ ನೇ ತರಗತಿ

ಸರ್ಕಾರಿ ಪ್ರೌಢಶಾಲೆ

ಕಾನ್‌ಬೈಲ್, ಮೊ : ೯೪೮೨೯೪೨೯೩೬

ನಮ್ಮ ನಾಡಿನ ಕವಿ-ಸಾಹಿತಿಗಳ ಪೈಕಿ ದ. ರಾ. ಬೇಂದ್ರೆಯವರೆAದರೆ ನನಗೆ ತುಂಬಾ ಅಚ್ಚುಮೆಚ್ಚು. ಬದುಕಿನ ಕಟು ವಾಸ್ತವಗಳ ಬೆಂಕಿಯಲ್ಲಿ ಬೆಂದು ಕರಕಾಗಿದ್ದರೂ, ಜಗತ್ತಿಗೆ ನಾದದ ಅಮೃತವನ್ನು ಉಣಿಸಿದ ಅದ್ಭುತ ವ್ಯಕ್ತಿತ್ವ ಅವರದ್ದು.

ಆರು ಮಕ್ಕಳನ್ನು ಸಾಲುಸಾಲಾಗಿ ಕಳೆದುಕೊಂಡ ದುಃಖ, ಬ್ರಿಟಿಷರ ಜೈಲುವಾಸ ಹಾಗೂ ತೀವ್ರ ಬಡತನ ಅವರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದವು. ಆದರೂ ತಮ್ಮ ವೈಯಕ್ತಿಕ ನೋವುಗಳನ್ನು ವಿಶ್ವಪ್ರೇಮದ ಕಾವ್ಯವಾಗಿ ಪರಿವರ್ತಿಸಿದ ಮಹಾನ್ ಕವಿ ಅವರು. ಬದುಕಿನಲ್ಲಿ ಬೆಂದು ಬೇಂದ್ರೆಯಾದರೂ, ಸಾಹಿತ್ಯದಲ್ಲಿ ವರಕವಿಯಾಗಿ ಮೆರೆ�