ಕೂಡಿಗೆ, ನ. ೨: ನಂಜರಾಯಪಟ್ಟಣ ಮಸೀದಿ ಬಳಿ ನಿನ್ನೆ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಗಾಯಗೊಂಡಿದ್ದ ಹಿಂಬದಿ ಸವಾರ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ನಿನ್ನೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಹಿಂಬದಿ ಸವಾರ ಅಲ್ಲಿನ ವಿರೂಪಾಕ್ಷಪುರ ನಿವಾಸಿ ರಮೇಶ್ ಅವರ ಪುತ್ರ ಹರೀಶ್ (೨೬) ಎಂಬಾತನನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಇಂದು ಸಾವನ್ನಪ್ಪಿದ್ದಾನೆ. ಬೈಕ್ ಸವಾರರುಗಳಾದ ಸುಬ್ರಮಣಿ ಹಾಗೂ ರಿನಾಸ್ ಎಂಬವರುಗಳು ನಿನ್ನೆ ಸಾವನ್ನಪ್ಪಿದ್ದರೆ, ಹರೀಶ್ ಇಂದು ಸಾವನಪ್ಪಿದ್ದಾನೆ. ಮತ್ತೋರ್ವ ಹಿಂಬದಿ ಸವಾರ ತ್ಯಾಗತ್ತೂರಿನ ಶ್ವಾಲಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.