ಮಡಿಕೇರಿ ನ.೧ : ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ನಗರದ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ೩ ದಿನಗಳ ಕಾಲ ಆಯೋಜಿತ ೨ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಗೆ ರೋಚಕ ತೆರೆಬಿದ್ದಿದೆ.

ಬಾಲಕರ ಸಬ್ ಜೂನಿಯರ್ ವಿಭಾಗದಲ್ಲಿ ಮೂರ್ನಾಡಿನ ಎಂಆರ್‌ಎಫ್ ತಂಡ, ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆ, ಮಹಿಳೆಯರ ಮಾಸ್ರ‍್ಸ್ ವಿಭಾಗದಲ್ಲಿ ಕೂರ್ಗ್ ವಂಡರ್ ಹಾಗೂ ಪುರುಷರ ಮಾಸ್ರ‍್ಸ್ ವಿಭಾಗದಲ್ಲಿ ಕೊಡವ ಹಾಕಿ ಅಕಾಡೆಮಿ ತಂಡಗಳು ವಿಜಯ ಸಾಧಿಸಿದವು.

ಭಾನುವಾರ ಬೆಳಗ್ಗೆ ನಡೆದ ಮೊದಲ ಫೈನಲ್ ಪಂದ್ಯದಲ್ಲಿ ಕೂಡಿಗೆ ಕ್ರೀಡಾ ಶಾಲೆ ಮತ್ತು ಪೊನ್ನಂಪೇಟೆ ಕ್ರೀಡಾ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನಕ್ಕಾಗಿ ಪೈಪೋಟಿ ನಡೆಸಿದತು. ನಿಗದಿತ ಸಮಯ ಮುಕ್ತಾಯದ ಅವಧಿಗೆ ಪೊನ್ನಂಪೇಟೆ ಕ್ರೀಡಾ ಶಾಲೆಯ ತಂಡ ೧-೦ ಗೋಲುಗಳ ಅಂತರದಿAದ ಕೂಡಿಗೆ ಕ್ರೀಡಾ ಶಾಲೆ ತಂಡವನ್ನು ಮಣಿಸಿತು.

ಮಹಿಳೆಯರ ಮಾಸ್ರ‍್ಸ್ ವಿಭಾಗದಲ್ಲಿ ಕೂರ್ಗ್ ವಂಡರ್ ಮತ್ತು ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡಗಳು ಪರಸ್ಪರ ಹಣಾಹಣಿ ನಡೆಸಿದವು. ಇತ್ತಂಡಗಳ ಪ್ರಬಲ ಪೈಪೋಟಿಯಿಂದ ನಿಗಧಿತ ಅವಧಿಯಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಆ ಬಳಿಕ ಪಂದ್ಯದ ನಿಯಮದಂತೆ ಸಡನ್ ಡೆತ್ ಅಳವಡಿಸಲಾಯಿತು. ಈ ವೇಳೆ ರಾಯಲ್ ಚಾಲೆಂಜರ್ಸ್ ತಂಡ ಕೇವಲ ೩ ಗೋಲು ದಾಖಲಿಸಲು ಮಾತ್ರವೇ ಶಕ್ತವಾದರೆ, ಕೂರ್ಗ್ ವಂಡರ್ ತಂಡ ೪ ಗೋಲು ಬಾರಿಸುವ ಮೂಲಕ ವಿಜಯ ಸಾಧಿಸಿ ಗೆಲುವಿನ ನಗೆ ಬೀರಿತು.

ಪುರುಷರ ಮಾಸ್ರ‍್ಸ್ ವಿಭಾಗದಲ್ಲಿ ಕೊಡವ ಹಾಕಿ ಅಕಾಡೆಮಿ ಮತ್ತು ಕೂರ್ಗ್ ಡೈನಮೆಂಟ್ ತಂಡಗಳು ಪ್ರಥಮ ಸ್ಥಾನಕ್ಕೆ ಪೈಪೋಟಿ ನಡೆಸಿದವು. ಈ ವೇಳೆ ಕೊಡವ ಹಾಕಿ ಅಕಾಡೆಮಿ ೪ ಗೋಲು ಬಾರಿಸಿದರೆ, ಕೂರ್ಗ್ ಡೈನಮೆಂಟ್ ತಂಡ ಕೇವಲ ೨ ಗೋಲು ಬಾರಿಸಿ ಸೋಲೊಪ್ಪಿಕೊಂಡು ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಬಾಲಕರ ಸಬ್ ಜ್ಯೂನಿಯರ್ ವಿಭಾಗದಲ್ಲಿ ಮೂರ್ನಾಡಿನ ಎಂಆರ್‌ಎಫ್ ತಂಡ ಹಾಗೂ ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ಸ್ ಆ್ಯಂಡ್ ರಿಕ್ರಿಯೇಷನ್ ಕ್ಲಬ್ ಪ್ರತಿಷ್ಠಿತ ಫ್ಯಾಪ್ ಕಪ್ ಹಾಕಿ ಪಂದ್ಯಾವಳಿಯ ಪ್ರಥಮ ಸ್ಥಾನ ಸಹಿತ ರೋಲಿಂಗ್ ಟ್ರೋಫಿಗಾಗಿ ಹಣಾಹಣಿ ನಡೆಸಿದವು. ಎಂಆರ್‌ಎಫ್ ತಂಡ ಬಿರುಸಿನ ಆಟವಾಡಿ ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ಸ್ ಆ್ಯಂಡ್ ರಿಕ್ರಿಯೇಷನ್ ಕ್ಲಬ್ ವಿರುದ್ದ ೩-೦ ಗೋಲುಗಳ ಅಂತರದಿAದ ವಿಜಯ ಸಾಧಿಸಿ ರೋಲಿಂಗ್ ಟ್ರೋಫಿಗೆ ಮುತ್ತಿಕ್ಕಿತು. ಕಾರ್ಯಕ್ರಮದ ಕೊನೆಯಲ್ಲಿ ವಿನ್ನರ್ಸ್ ಮತ್ತು ರನ್ನರ್ಸ್ ತಂಡಗಳಿಗೆ ಗಣ್ಯರು ಟ್ರೋಫಿ, ನಗದು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು. ಇದೇ ವೇಳೆ ಉತ್ತಮ ಗೋಲ್ ಕೀಪರ್, ಅತೀ ಹೆಚ್ಚು ಗೋಲು ದಾಖಲಿಸಿರುವುದು, ಉತ್ತಮ ಆಟಗಾರ ಸಹಿತ ನಗದು ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಆಟಗಾರರಿಗೆ ಉತ್ತಮ ವೇದಿಕೆ

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾತನಾಡಿ, ಹಾಕಿ ಕ್ರೀಡೆಗೆ ಕರ್ನಾಟಕ, ಪಂಜಾಬ್ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಸೇರಿದಂತೆ ಕೆಲವು ರಾಜ್ಯಗಳು ಮಾತ್ರವೇ ಸೂಕ್ತ ಬೆಂಬಲ ನೀಡುತ್ತಿವೆ. ಈ ಸಾಲಿಗೆ ಇದೀಗ ಕೇರಳ ಕೂಡ ಸೇರ್ಪಡೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಾಕಿ ಕ್ರೀಡಾ ಪ್ರೇಮಿ ಕೂರ್ಗ್ ಹಾಕ್ಸ್ ಕ್ಲಬ್ ಸ್ಥಾಪಕ ಮೇಕೇರಿರ ಬೆಲ್ಲು ಕುಟ್ಟಪ್ಪ ಅವರು ಹಾಕಿ ಕ್ರೀಡೆಗೆ ಬೆಂಬಲ ನೀಡುವ ಮೂಲಕ ಹಾಕಿ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಒಲಂಪಿಯನ್ ಬಾಳೆಯಡ ಸುಬ್ರಮಣಿ ಮಾತನಾಡಿ, ಕೇರಳ ರಾಜ್ಯ ಕೂಡ ಹಾಕಿ ಕ್ರೀಡೆಗೆ ಬೆಂಬಲ ನೀಡುತ್ತಿರುವುದು ಹಾಕಿ ಕ್ರೀಡೆ ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಲಂಪಿಯನ್ ಪೈಕೇರ ಕಾಳಯ್ಯ ಮಾತನಾಡಿ, ಹಾಕಿ ಕೂರ್ಗ್ ಮತ್ತು ಹಾಕಿ ಅಕಾಡೆಮಿ ಸಂಸ್ಥೆಗಳು ೧೨ ವರ್ಷ ವಯೋಮಾನದ ಕಿರಿಯ ಹಾಕಿ ಆಟಗಾರರಿಗೆ ಉತ್ತಮ ತರಬೇತಿ ಮತ್ತು ಪಂದ್ಯಾಟಗಳನ್ನು ಆಯೋಜಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರಯತ್ನ ನಡೆಯಲಿ ಎಂದು ಆಶಿಸಿದರು. ಕೂರ್ಗ್ ಹಾಕ್ಸ್ ಕ್ಲಬ್, ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಿತ ಸಂಘಟನೆಗಳು ಹಾಕಿ ಪಂದ್ಯಾಟ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭ ಕನ್ನಡ ರಾಜ್ಯೋತ್ಸವ ಅಂಗವಾಗಿ ಪುತ್ತಾಮನೆ ವಿದ್ಯಾ ಜಗದೀಶ್ ಅವರಿಂದ ಗಾನಸುಧೆ ಮೂಡಿಬಂತು. ಶಿರಂಗಳ್ಳಿ ಸ್ವಾಮಿ ವಿವೇಕಾನಂದ ಯುವಕ ಸಂಘದ ಮೂಲಕ ಕೊಡವ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.

ಈ ಸಂದರ್ಭ ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಕೂರ್ಗ್ ಹಾಕ್ಸ್ ಕ್ಲಬ್ ಸ್ಥಾಪಕ ಮೇಕೇರಿರ ಬೆಲ್ಲು ಕುಟ್ಟಪ್ಪ, ಪಂದ್ಯಾವಳಿ ನಿರ್ದೇಶಕ ಕರವಂಡ ಅಪ್ಪಣ್ಣ, ಹಿರಿಯ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಪ್ರಮುಖರಾದ ಮೂಸಾ, ಜಾವಿದ್, ರಾಜಶೇಖರ್, ಜಾನ್ಸನ್ ಮಾಸ್ಟರ್, ಮೊಯ್ದು, ಹಾಕಿ ತರಬೇತುದಾರ ಅಮ್ಮಂಡಿರ ಚೇತನ್, ಸಾಯಿ ಕ್ರೀಡಾ ಶಾಲೆ ನಿರ್ದೇಶಕರಾದ ಮಿನ್ನಿ ಉನ್ನಿರಾಜ್ ಮತ್ತಿತರರು ಉಪಸ್ಥಿತರಿದ್ದರು.